ಮಾಧ್ಯಮದವರ ಮೇಲೆ ಹಲ್ಲೆ; ಶ್ರೀಕಂಠೇಗೌಡ ತಮ್ಮ ಮಗನಿಗೆ ಪಾಠ ಕಲಿಸಬೇಕಿತ್ತು: ಸಚಿವ ನಾರಾಯಣಗೌಡ

ಸಾಮಾನ್ಯ ಶಿಕ್ಷಕರಾಗಿದ್ದ ಶ್ರೀಕಂಠೇಗೌಡರು ಪ್ರತಿ ವಿಚಾರಕ್ಕೂ ಮಾಧ್ಯಮದವರ ಮುಂದೆ ಬರುತ್ತಿದ್ದರು. ಮಾಧ್ಯಮದರಿಂದಲೇ ಪ್ರಚಾರ ಪಡೆದು ಎಂಎಲ್​ಸಿ ಮಟ್ಟಕ್ಕೆ ಹೋಗಿದ್ಧಾರೆ. ಇದನ್ನು ಅವರು ಮರೆಯಬಾರದು ಎಂದು ನಾರಾಯಣ ಗೌಡರು ಹೇಳಿದ್ದಾರೆ.

news18-kannada
Updated:April 27, 2020, 6:11 PM IST
ಮಾಧ್ಯಮದವರ ಮೇಲೆ ಹಲ್ಲೆ; ಶ್ರೀಕಂಠೇಗೌಡ ತಮ್ಮ ಮಗನಿಗೆ ಪಾಠ ಕಲಿಸಬೇಕಿತ್ತು: ಸಚಿವ ನಾರಾಯಣಗೌಡ
ಸಚಿವ ನಾರಾಯಣ ಗೌಡ
  • Share this:
ರಾಮನಗರ(ಏ. 27): ಜೆಡಿಎಸ್​ನ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರ ಮಗ ಮತ್ತು ಬೆಂಬಲಿಗರಿಂದ ಮಾಧ್ಯಮದವರ ಮೇಲೆ ನಡೆದ ಹಲ್ಲೆ ಘಟನೆಯನ್ನು ಸಚಿವ ನಾರಾಯಣ ಗೌಡ ಬಲವಾಗಿ ಖಂಡಿಸಿದರು. ಬಿಡದಿಯಲ್ಲಿ ಮಾತನಾಡುತ್ತಿದ್ದ ನಾರಾಯಣ ಗೌಡ, ಜೆಡಿಎಸ್ ಶಾಸಕ ಶ್ರೀಕಂಠೇಗೌಡರು ತಮ್ಮ ಮಗನಿಗೆ ಸರಿಯಾದ ಪಾಠ ಕಲಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯ ಶಿಕ್ಷಕರಾಗಿದ್ದ ಶ್ರೀಕಂಠೇಗೌಡರು ಪ್ರತಿ ವಿಚಾರಕ್ಕೂ ಮಾಧ್ಯಮದವರ ಮುಂದೆ ಬರುತ್ತಿದ್ದರು. ಮಾಧ್ಯಮದರಿಂದಲೇ ಪ್ರಚಾರ ಪಡೆದು ಎಂಎಲ್​ಸಿ ಮಟ್ಟಕ್ಕೆ ಹೋಗಿದ್ಧಾರೆ. ಇದನ್ನು ಅವರು ಮರೆಯಬಾರದು. ಪತ್ರಕರ್ತರ ಮೇಲೆ ಮಾಡಿದ್ದು ಸರಿ ಇಲ್ಲ. ಇದನ್ನು ಇಡೀ ರಾಜ್ಯವೇ ಖಂಡಿಸಿದೆ ಎಂದು ಕೆಆರ್ ಪೇಟೆ ಶಾಸಕರು ಹೇಳಿದರು.

ಮೊನ್ನೆ ಶನಿವಾರ ಮಂಡ್ಯದ ಅಂಬೇಡ್ಕರ್ ಭವನ ಸಮೀಪ ಪತ್ರಕರ್ತರಿಗೆ ಕೊರೋನಾ ಪರೀಕ್ಷೆ ನಡೆಸುವಾಗ ಶ್ರೀಕಂಠೇಗೌಡ ಮತ್ತವರ ಬೆಂಬಲಿಗರು ದಾಂದಲೆ ನಡೆಸಿದ್ದರು. ತಮ್ಮ ಮನೆ ಸಮೀಪ ಇರುವುದರಿಂದ ಇಲ್ಲಿ ಕೊರೋನಾ ಪರೀಕ್ಷೆ ನಡೆಸಬಾರದು ಎಂದು ವಿರೋಧಿಸಿದ್ದರು. ಈ ವೇಳೆ ಪತ್ರಕರ್ತರು ಮತ್ತು ಅವರ ಮಧ್ಯೆ ವಾಗ್ವಾದಗಳಾದವು. ಆಗ ಶ್ರೀಕಂಠೇಗೌಡ ಅವರ ಮಗ ಕೃಷಿಕ್ ಗೌಡ ಹಾಗೂ ಬೆಂಬಲಿಗರು ಕೆಲ ಪತ್ರಕರ್ತರ ಮೇಲೆ ಹಲ್ಲೆ ಕೂಡ ಮಾಡಿದರು. ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳು ನೀಡಿದ ದೂರಿನ ಮೇರೆಗೆ ಕೃಷಿಕ್ ಗೌಡ ಸೇರಿದಂತೆ ಐವರ ವಿರುದ್ಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸದ್ಯ, ಈ ಐವರು ಜಾಮೀನು ಪಡೆದು ಹೊರಬಂದಿದ್ದಾರೆ.

ಇದನ್ನೂ ಓದಿ: Open Letter - ರಾಮನೂರಿಗೆ ವಿಷ ಬಿತ್ತಿತಾ ರಾಜಕಾರಣ?! ಸಮೃದ್ಧ ಹಸಿರು ವಲಯದಲ್ಲೀಗ ಮಾಯವಾಯ್ತು ನೆಮ್ಮದಿ

ಈ ಹಲ್ಲೆ ಪ್ರಕರಣದಲ್ಲಿ ಶ್ರೀಕಂಠೇಗೌಡರ ಮಗ ಮತ್ತು ಬೆಂಬಲಿಗರಿಗೆ ಜಾಮೀನು ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣಗೌಡ, ಸದ್ಯದ ಪರಿಸ್ಥಿತಿಯಲ್ಲಿ ಜಾಮೀನು ಸಿಕ್ಕಿರಬಹುದು. ಮುಂದಿನ ದಿನಗಳಲ್ಲಿ ಅವರ ಮೇಲೆ ಸರ್ಕಾರ ಕ್ರಮಕ್ಕೆ ಮುಂದಾಗುತ್ತದೆ ಎಂದು ಆಶ್ವಾಸನೆ ನೀಡಿದರು.

ಇನ್ನು, ಪಾದರಾಯನಪುರ ಗಲಾಟೆ ಪ್ರಕರಣದ ಆರೋಪಿಗಳನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡುವ ಸರ್ಕಾರದ ನಿರ್ಧಾರದ ಬಗ್ಗೆ ವ್ಯಾಪಕ ಟೀಕೆ ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣಗೌಡ, ಕೆಲವೊಮ್ಮೆ ಸರ್ಕಾರ ನಿರ್ಧಾರ ಕೈಗೊಳ್ಳುವಾಗ ವ್ಯತ್ಯಾಸ ಆಗುವುದುಂಟು. ಈ ಅವರನ್ನು ಮತ್ತೆ ವಾಪಸ್ ಕರೆಸಿ ಬೇರೆಡೆ ಇಡಲಾಗಿದೆ. ರಾಮನಗರದಂಥ ಸೇಫ್ ಜೋನ್​ಗೆ ಶಿಫ್ಟ್ ಮಾಡಿದ್ದು ತಪ್ಪು ಅಂತಾರೆ. ಆದರೆ, ಯಾವುದೂ ಕೂಡ ಸೇಫ್ ಜೋನ್ ಅಲ್ಲ. ಯಾರೂ ಕುಡ ಸೇಫ್ ಅಲ್ಲ. ಇದು ಇವತ್ತಿಗೆ ಮುಗಿಯುವ ವಿಚಾರ ಅಲ್ಲ. ಎಲ್ಲರೂ ಎಚ್ಚರಿಕೆಯಿಂದ ಇರಬೇಕಾಗಿದೆ ಅಷ್ಟೇ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ರೈತರ ಹೊಲದಲ್ಲಿ ಬಿತ್ತನೆ ಕಾರ್ಯ ಮಾಡಿದ ಚಾಮರಾಜನಗರ ಜಿಲ್ಲಾಧಿಕಾರಿರಾಮನಗರದ ರೇಷ್ಮೆ ಮಾರುಕಟ್ಟೆಗಳಿಂದ ಕೊರೋನಾ ವೈರಸ್ ಹರಡುವ ಭೀತಿ ಇರುವುದರ ಬಗ್ಗೆ ಮಾತನಾಡಿದ ನಾರಾಯಣಗೌಡ, ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ವ್ಯಾಪಾರ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಮಾರುಕಟ್ಟೆಗಳಲ್ಲಿ ರೈತರ ಅನುಕೂಲಕ್ಕಾಗಿ ವ್ಯಾಪಾರ ನಡೆಯುತ್ತಿದೆ. ಲಾಕ್ ಡೌನ್​ನಿಂದಾಗಿ 10 ದಿನ ಕಾಲ ರೇಷ್ಮೆಗೂಡಿನ ವ್ಯಾಪಾರ ಬಂದ್ ಆಗಿತ್ತು. ರೈತರ ಬಹಳ ನಷ್ಟ ಅನುಭವಿಸಿದ್ದರು. ಅತ್ಯಂತ ಕಡಿಮೆ ಬೆಲೆಗೆ ರೇಷ್ಮೆಗೂಡು ಮಾರಾಟವಾಗುತ್ತಿತ್ತು. ಈಗ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಮಾರುಕಟ್ಟೆಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಣೆ ಟನಲ್ ಮಾಡಲಾಗಿದೆ. ಕೆಲವೆಡೆ ವಿಭಜನೆ ಮಾಡಿ ವ್ಯಾಪಾರ ಮಾಡಲಾಗುತ್ತಿದೆ. ವ್ಯಾಪಾರ ಚಿಗುರಿದೆ. ರೇಷ್ಮೆಗೂಡಿನ ಬೆಲೆ 300 ರೂ ಗಡಿ ದಾಟಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಜಿ ಕಾಂಗ್ರೆಸ್ಸಿಗರೂ ಆದ ನಾರಾಯಣಗೌಡ ಹೇಳಿದರು.

ವರದಿ: ಎ.ಟಿ. ವೆಂಕಟೇಶ್

First published: April 27, 2020, 6:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading