ಕೊರೋನಾ ಭೀತಿ: ಹಾಸನ ಜಿಲ್ಲೆಯ ಎಲ್ಲಾ ಸಂಪರ್ಕಗಳ ಕಡಿತಕ್ಕೆ ಉಸ್ತುವಾರಿ ಸಚಿವ ನಿರ್ಧಾರ

ಹಾಸನ ಸುತ್ತ ಮುತ್ತಲಿನ‌ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳಿವೆ.  ಹೀಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದು ಅಗತ್ಯ ಎಂದರು.

ಮಾಧುಸ್ವಾಮಿ

ಮಾಧುಸ್ವಾಮಿ

 • Share this:
  ಹಾಸನ(ಮಾ.28): ದಿನದಿಂದ ದಿನಕ್ಕೆ ಎಲ್ಲೆಡೆ ಕೊರೋನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಮನೆ ಮಾಡಿದೆ. ಕೊರೋನಾ ನಿಗ್ರಹಕ್ಕಾಗಿ ದೇಶದಲ್ಲಿ ಏಪ್ರಿಲ್ 14ರವರೆಗೆ ಲಾಕ್​ಡೌನ್​ ಘೋಷಿಸಲಾಗಿದೆ. ರಾಜ್ಯದಲ್ಲಿ ಕೊರೋನಾ ಭೀತಿಯಿಂದಾಗಿ ಅನೇಕ ಹಳ್ಳಿಗಳು ದಿಗ್ಭಂಧನ ಹಾಕಿಕೊಂಡಿವೆ. ಊರಿನ ಜನರು ಬೇಲಿ ಹಾಕುವ ಮೂಲಕ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕವನ್ನೇ ಕಡಿತ ಮಾಡಿಕೊಂಡಿದ್ದಾರೆ. ಇನ್ನು, ಹಾಸನದ ಉಸ್ತುವಾರಿ ಸಚಿವ ಮಾಧುಸ್ವಾಮಿ ಜಿಲ್ಲೆಯ ಸುತ್ತ ನಿರ್ಬಂಧ ಹಾಕಲು ಮುಂದಾಗಿದ್ದಾರೆ.

  ಹಾಸನ ಜಿಲ್ಲೆಯ ಸುತ್ತ ಇರುವ ಎಲ್ಲಾ ಸಂಪರ್ಕಗಳನ್ನು ಕಡಿತ ಮಾಡಲು ಮಾಧುಸ್ವಾಮಿ ಚಿಂತನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಹಾಸನ ಸುತ್ತ ಮುತ್ತಲಿನ‌ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳಿವೆ.  ಹೀಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದು ಅಗತ್ಯ ಎಂದರು.

  ಮಧ್ಯಾಹ್ನ ಎರಡು ಗಂಟೆವರೆಗೆ ಮಾತ್ರ ಮೆಡಿಕಲ್​ ಮತ್ತು ಅಗತ್ಯ ವಸ್ತುಗಳ ಸ್ಟೋರ್​​ ತೆಗೆಯಿಸಿ ನಂತರ ಮುಚ್ಚಿಸಲಾಗುವುದು. ಹಾಸನ ಮಾರುಕಟ್ಟೆಯನ್ನು ಮೈದಾನಗಳಿಗೆ ಶಿಫ್ಟ್ ಮಾಡಲಾಗುವುದು.  ವೈದ್ಯರು ರಜೆ ತೆಗೆದುಕೊಳ್ಳಬಾರದು. ಯಾವ ವೈದ್ಯರೂ ಸಹ ಬಂದ ರೋಗಿಗಳನ್ನು ರಿಜೆಕ್ಟ್ ಮಾಡಬಾರದು ಎಂದು ಹೇಳಿದರು.

  ಲಾಕ್​ಡೌನ್​ನಲ್ಲೂ ನಿಲ್ಲದ ವಾಹನ ಸಂಚಾರ; ರಾಜ್ಯಾದ್ಯಂತ ಪೆಟ್ರೋಲ್ ಬಂಕ್ ಬಂದ್?

   

  ರಸ್ತೆ ಮೇಲೆ ದ್ವಿಚಕ್ರ ವಾಹನಗಳ ಸಂಚಾರ ಕಾಣಿಸುತ್ತಿದೆ. ಹೀಗಾಗಿ ಪೆಟ್ರೋಲ್ ಬಂಕ್ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗುವುದು ಎಂದರು.

  ಮಾರುಕಟ್ಟೆ ಸ್ಥಳಾಂತರ

  ಇನ್ನು, ಹಾಸನದ ಕಟ್ಟಿನಕೆರೆ ಮಾರುಕಟ್ಟೆಯನ್ನ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲು ನಿರ್ಧಾರ ಮಾಡಲಾಗಿದೆ. ಸ್ವಚ್ಚತೆ ಇಲ್ಲದ ಕಾರಣ ಹಾಸನದ ಹಳೆ ಬಸ್ ನಿಲ್ದಾಣಕ್ಕೆ ಮಾರುಕಟ್ಟೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ನಗರಸಭೆಯು ಸೋಮವಾರ ಮಾರುಕಟ್ಟೆ ಸ್ಥಳಾಂತರ ಮಾಡಲಿದೆ.  ಸೋಮವಾರದಿಂದ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಪ್ರತಿದಿನ ಮೂರು ಗಂಟೆಗಳ ಕಾಲ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಈಗಾಗಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಣ್ಣದಿಂದ ಮಾರ್ಕ್ ಮಾಡಲಾಗಿದೆ. ಸುಮಾರು 40 ಅಂಗಡಿಗಳನ್ನು ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.
  First published: