‘ಕೋವಿಡ್​​-19 ತಡೆಗೆ 80 ಲ್ಯಾಬ್​​ ತೆರೆದಿದ್ದೇವೆ, ಯಾರು ಆತಂಕ ಪಡಬೇಡಿ‘ - ಸಚಿವ ಡಾ. ಸುಧಾಕರ್​​

ಇನ್ನು, ಬೆಂಗಳೂರಿನಲ್ಲಿ ಕೋವಿಡ್​​-19 ಪಾಸಿಟಿವ್​ ಕೇಸುಗಳು ಜಾಸ್ತಿಯಾಗಿವೆ. ಈ ಬಗ್ಗೆ ನಾನು ಮೊದಲೇ ಜುಲೈ ತಿಂಗಳಿನಲ್ಲಿ ಪಾಸಿಟಿವ್​​ ಕೇಸ್​​​​ಗಳು ಹೆಚ್ಚಾಗಲಿವೆ ಎಂಬುದು ಹೇಳಿದ್ದೆ. ಅಮೇಲೆ ಮತ್ತೊಮ್ಮೆ ಕೊರೋನಾ ಕುರಿತಂತೆ ಸವಿವರವಾಗಿ ಹೇಳುತ್ತೇನೆ. ಈಗ ಇದರ ಬಗ್ಗೆ ಯಾರು ಹೆದರಬೇಡಿ ಎಂದರು ಸುಧಾಕರ್​​.

news18-kannada
Updated:June 30, 2020, 11:35 AM IST
‘ಕೋವಿಡ್​​-19 ತಡೆಗೆ 80 ಲ್ಯಾಬ್​​ ತೆರೆದಿದ್ದೇವೆ, ಯಾರು ಆತಂಕ ಪಡಬೇಡಿ‘ - ಸಚಿವ ಡಾ. ಸುಧಾಕರ್​​
ಸಚಿವ ಡಾ.ಕೆ ಸುಧಾಕರ್​​
  • Share this:
ಬೆಂಗಳೂರು(ಜೂ.30): ಜುಲೈನಲ್ಲಿ ಕೊರೋನಾ ಪಾಸಿಟಿವ್​​ ಪ್ರಕರಣಗಳು ಜಾಸ್ತಿಯಾಗಲಿವೆ ಎಂಬುದು ನಾನು ಮೊದಲೇ ಹೇಳಿದ್ದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್​​ ಹೇಳಿದರು. ಹದಿನಾಲ್ಕು ದಿನ ಹೋಮ್​​ ಕ್ವಾರಂಟೈನ್​​ ಮುಕ್ತಗೊಳಿಸಿದ ಬಳಿಕ ಇಂದು ವಿಧಾನಸೌಧದಲ್ಲಿ ಮಾತಾಡಿದ ಸುಧಾಕರ್​​​, ಕಳೆದೊಂದು ವಾರದಿಂದ ಕೊರೋನಾ ಹೆಚ್ಚಳವಾಗಿದೆ. ಈ ಬಗ್ಗೆ ಮೊದಲೇ ನಾನು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದೆ. ಹಾಗಾಗಿ ಕೋವಿಡ್​​-19 ಬಗ್ಗೆ ಯಾರು ಆತಂಕ ಪಡಬೇಡಿ ಎಂದು ತಿಳಿಸಿದರು.

ಇನ್ನು, ಬೆಂಗಳೂರಿನಲ್ಲಿ ಕೋವಿಡ್​​-19 ಪಾಸಿಟಿವ್​ ಕೇಸುಗಳು ಜಾಸ್ತಿಯಾಗಿವೆ. ಈ ಬಗ್ಗೆ ನಾನು ಮೊದಲೇ ಜುಲೈ ತಿಂಗಳಿನಲ್ಲಿ ಪಾಸಿಟಿವ್​​ ಕೇಸ್​​​​ಗಳು ಹೆಚ್ಚಾಗಲಿವೆ ಎಂಬುದು ಹೇಳಿದ್ದೆ. ಅಮೇಲೆ ಮತ್ತೊಮ್ಮೆ ಕೊರೋನಾ ಕುರಿತಂತೆ ಸವಿವರವಾಗಿ ಹೇಳುತ್ತೇನೆ. ಈಗ ಇದರ ಬಗ್ಗೆ ಯಾರು ಹೆದರಬೇಡಿ ಎಂದರು ಸುಧಾಕರ್​​.

ನನ್ನ ಪತ್ನಿ, ಪುತ್ರಿಗೆ ಕೊರೋನಾ ಪಾಸಿಟಿವ್​ ಬಂದ ಕಾರಣ ನಾನು ಕ್ವಾರಂಟೈನ್​​ನಲ್ಲಿ ಇರಬೇಕಾಯ್ತು.  ಎರಡು ಬಾರಿಯೂ ಕೋವಿಡ್​​-19 ಟೆಸ್ಟಿಂಗ್​​ನಲ್ಲಿ ರಿಪೋರ್ಟ್​ ನೆಗಿಟಿವ್​​ ಬಂದಿದೆ. ಈಗಷ್ಟೇ ಕ್ವಾರಂಟೇನ್ ಮುಗಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ಎಲ್ಲರ ಆಶೀರ್ವಾದ, ಹಾರೈಕೆಯಿಂದ ನಾನು ಮತ್ತೆ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ತನ್ನ ಪತ್ನಿ ಹಾಗೂ ಪುತ್ರಿ ಕೂಡ ಡಿಸ್ಚಾರ್ಜ್ ಆಗಲಿದ್ದಾರೆ. ನಮ್ಮ ಕುಟುಂಬದ ಸದಸ್ಯರು ಗುಣ ಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಇದನ್ನೂ ಓದಿ: Coronavirus India Updates: ದೇಶದಲ್ಲಿ ಕೊರೋನಾ ಹಾವಳಿ; ಒಂದೇ ದಿನ 18,522 ಕೇಸ್​​, ಐದೂವರೆ ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಈ ಹಿಂದಿನ ಸಭೆಯಲ್ಲಿ ಲ್ಯಾಬ್ ತೆರೆಯುವಂತೆ ಹೇಳಿದ್ದೆ. ಇವಾಗ 80 ಲ್ಯಾಬ್ಸ್ ತೆರೆದಿದ್ದೇವೆ. ಎರಡು ಇದ್ದ ಲ್ಯಾಬ್​ಗಳನ್ನು ಎಂಬತ್ತು ಮಾಡಿದ್ದೇವೆ. ಅದರಂತೆ ಇವಾಗ ಬೆಡ್ ಕಲ್ಪಿಸುವ ಬಗ್ಗೆ ತೀರ್ಮಾನ ಮಾಡುತ್ತಿದ್ದೇವೆ. ಇಂದಿನ ಸಭೆಯಲ್ಲಿ ಬೆಡ್​ಗಳನ್ನು ಒದಗಿಸುವ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಹೇಳಿದರು.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading