CoronaVirus: ನೆಮ್ಮದಿಯ ನಿಟ್ಟುಸಿರು ಬಿಟ್ಟ ಸಚಿವ ಕೆ. ಸುಧಾಕರ್; ಕೊರೋನಾ ವರದಿ ನೆಗೆಟೀವ್

ಕಳೆದ ಎಂಟು ದಿನಗಳ ಹಿಂದೆ ಸಚಿವ ಕೆ. ಸುಧಾಕರ್‌ ಅವರ ಪತ್ನಿ, ಪುತ್ರಿ ಹಾಗೂ ತಂದೆಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಈ ಮೂವರಿಗೂ ಕೊರೋನಾ ಪಾಸಿಟಿವ್‌ ಎಂದು ವರದಿ ಬಂದಿತ್ತು. ಹೀಗಾಗಿ ಸುಧಾಕರ್‌ ಏಳು ದಿನಗಳ ಕಾಲ ಸದಾಶಿವನಗರದ ತಮ್ಮ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು.

ಕೆ.ಸುಧಾಕರ್

ಕೆ.ಸುಧಾಕರ್

  • Share this:
ಬೆಂಗಳೂರು (ಜೂನ್ 29); ಪತ್ನಿ, ಪುತ್ರಿ ಹಾಗೂ ತಂದೆಯ ಕೊರೋನಾ ಪಾಸಿಟಿವ್ ವರದಿಯಿಂದ ಕ್ವಾರಂಟೈನ್‌ಗೆ ಒಳಗಾಗಿದ್ದ ಸಚಿವ ಕೆ. ಸುಧಾಕರ್‌ ಕೊನೆಗೂ ಕೊರೋನಾ ದಿಂದ‌ ಬಚಾವ್ ಆಗಿ ನಾಳೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಎಂಟು ದಿನಗಳ ಹಿಂದೆ ಸಚಿವ ಕೆ. ಸುಧಾಕರ್‌ ಅವರ ಪತ್ನಿ, ಪುತ್ರಿ ಹಾಗೂ ತಂದೆಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಈ ಮೂವರಿಗೂ ಕೊರೋನಾ ಪಾಸಿಟಿವ್‌ ಎಂದು ವರದಿ ಬಂದಿತ್ತು. ಹೀಗಾಗಿ ಸುಧಾಕರ್‌ ಏಳು ದಿನಗಳ ಕಾಲ ಸದಾಶಿವನಗರದ ತಮ್ಮ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು.

ಮನೆಯಲ್ಲೇ ಉಳಿದಿದ್ದ ಸಚಿವ ಸುಧಾಕರ್ ವೀಡಿಯೋ ಕಾನ್ಫರೆನ್ಸ್‌ ಮ‌ೂಲಕ ನಿತ್ಯ ತನ್ನ ಇಲಾಖೆಯ  ಕಾರ್ಯಗಳ ಬಗ್ಗೆ ಮೇಲುಸ್ತುವಾರಿ ನಡೆಸಿದ್ದರು. ಅಲ್ಲದೆ ಕೊರೋನಾ ತಡೆ ಕುರಿತು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕೊರೋನಾ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತಿದ್ದರು.

ಇದನ್ನೂ ಓದಿ : ಸರ್ಕಾರ-ಖಾಸಗಿ ಆಸ್ಪತ್ರೆಗಳ ಮಾಲೀಕರ ಮಾತುಕತೆ ಫಲಪ್ರದ; ಕೆಲ ಬೇಡಿಕೆಯೊಂದಿಗೆ ಚಿಕಿತ್ಸೆ ನೀಡಲು ಒಪ್ಪಿಗೆ

ಇದೀಗ ಅವರ ಕೊರೋನಾ ಪರೀಕ್ಷಾ ವರದಿ ಕೈಸೇರಿದ್ದು ವರದಿಯಲ್ಲಿ ನೆಗೆಟಿವ್ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಕ್ವಾರಂಟೈನ್‌ನಿಂದ ಬಿಡುಗಡೆಗೊಂಡಿರುವ ಸಚಿವರು 8 ದಿನಗಳ ಬಳಿಕ ನಾಳೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಅಲ್ಲದೆ, ಸಿಎಂ ಜೊತೆಗೆ ಪ್ರಮುಖ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.
First published: