Lockdown: ಮತ್ತೆ 'ಲಾಕ್‌' ಆಗುತ್ತಾ ರಾಜ್ಯ? 'ಮಹಾ' ನಿರ್ಧಾರದ ಪರೋಕ್ಷ ಸುಳಿವು ಕೊಟ್ರು ಸಚಿವರು!

ಕೊರೋನಾ ವೈರಸ್ ಸೋಂಕು ಜಾಸ್ತಿಯಾಗುತ್ತಲೇ ಇವೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಸಾವಿರಕ್ಕೂ ಹೆಚ್ಚು ಏರಿಕೆಯಾಗುತ್ತಲೇ ಇದ್ದರೆ ರಾಜ್ಯವು ಮತ್ತೊಂದು ಲಾಕ್‌ಡೌನ್ ಅನ್ನು ವಿಧಿಸಲಿದೆ ಎಂದುಸಚಿವರು ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಲಾಕ್‌ ಡೌನ್‌ನ ಸಂಗ್ರಹ ಚಿತ್ರ

ಲಾಕ್‌ ಡೌನ್‌ನ ಸಂಗ್ರಹ ಚಿತ್ರ

  • Share this:
ಮಹಾರಾಷ್ಟ್ರ: ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ (Covid) ಅಬ್ಬರ ಮತ್ತೆ ಜೋರಾಗುತ್ತಲೇ ಇದೆ. ಚೀನಾ (china) ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಈಗಾಗಲೇ ಮತ್ತೆ ಲಾಕ್‌ ಡೌನ್ (Lock Down) ಹೇರಲಾಗಿದೆ. ಇತ್ತ ಭಾರತದಲ್ಲೂ (India) ಕೊರೋನಾ (Corona) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ರಾಷ್ಟ್ರ ರಾಜಧಾನಿ ದೆಹಲಿ (Delhi), ಪಂಜಾಬ್ (Punjab), ಕೇರಳ (Kerala), ಮಹಾರಾಷ್ಟ್ರ (Maharashtra) ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಮಹಾಮಾರಿ ಅಬ್ಬರ ಏರುತ್ತಲೇ ಇದೆ. ಇದೀಗ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಅಥವಾ ಕಠಿಣ ನಿಯಮ (Tough Rules) ಹೇರುವ ಸುಳಿವನ್ನು ಮಹಾರಾಷ್ಟ್ರ ಸಚಿವರು (Minister) ನೀಡಿದ್ದಾರೆ.

ಲಾಕ್‌ ಡೌನ್ ಸುಳಿವು ನೀಡಿದ ಸಚಿವ

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಸೋಂಕು ಜಾಸ್ತಿಯಾಗುತ್ತಲೇ ಇವೆ.  ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಸಾವಿರಕ್ಕೂ ಹೆಚ್ಚು ಏರಿಕೆಯಾಗುತ್ತಲೇ ಇದ್ದರೆ ರಾಜ್ಯವು ಮತ್ತೊಂದು ಲಾಕ್‌ಡೌನ್ ಅನ್ನು ವಿಧಿಸಲಿದೆ ಎಂದು ಮುಂಬೈ ನಗರ ಸಚಿವ ಅಸ್ಲಂ ಶೇಖ್ ಹೇಳಿದ್ದಾರೆ.

ಜನರು ಮೈಮರೆತರೆ ಮತ್ತೊಮ್ಮೆ ಲಾಕ್ ಡೌನ್

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಮತ್ತೊಮ್ಮೆ ನಿರ್ಬಂಧಗಳನ್ನು ಹಾಕಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗಳ ಮೇಲಿನ ನಿರ್ಬಂಧಗಳು ಇನ್ನೂ ಜಾರಿಯಲ್ಲಿವೆ. ಜನರು ಕಾಳಜಿ ವಹಿಸದಿದ್ದರೆ, ನಿರ್ಬಂಧಗಳ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ, ”ಎಂದು ಅಸ್ಲಾಮ್ ಶೇಖ್ ಹೇಳಿದ್ದಾರೆಂದು ಫ್ರೀ ಪ್ರೆಸ್ ಜರ್ನಲ್ ಉಲ್ಲೇಖಿಸಿದೆ.

ಇದನ್ನೂ ಓದಿ: Covid 19: ಮತ್ತೆ ಶುರು ಕೋವಿಡ್ ಭೀತಿ, ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣ ನಿಷೇಧ!

ಕೋವಿಡ್ ಪ್ರಕರಣಗಳ ಬಗ್ಗೆ ಬಿಎಂಸಿ ಎಚ್ಚರಿಕೆ

ಮತ್ತೊಂದೆಡೆ, ಮುಂಬರುವ ಕೋವಿಡ್ ನಾಲ್ಕನೇ ಅಲೆ  ಬಗ್ಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಎಚ್ಚರಿಕೆ ನೀಡಿದೆ. ಹೆಚ್ಚುತ್ತಿರುವ COVID ಪ್ರಕರಣಗಳೊಂದಿಗೆ ಮುಂಬೈನಲ್ಲಿ ಕನಿಷ್ಠ ಸೆಪ್ಟೆಂಬರ್‌ವರೆಗೆ ಎಲ್ಲಾ ಸೌಲಭ್ಯಗಳನ್ನು ಇರಿಸಿಕೊಳ್ಳುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇನ್ನೂ 2ನೇ ಡೋಸ್ ಲಸಿಕೆ ಪಡೆಯದ ಜನ

ಸಾರ್ವಜನಿಕ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಮಹಾರಾಷ್ಟ್ರದ 100 ಮಿಲಿಯನ್ ಜನರಲ್ಲಿ ವ್ಯಾಕ್ಸಿನೇಷನ್‌ಗೆ ಅರ್ಹರಾದ ಕೇವಲ 70 ಪ್ರತಿಶತ ಜನರು ಮಾತ್ರ ಇದುವರೆಗೆ ಲಸಿಕೆಗಳ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಇನ್ನು ಉಳಿದ 30 ಪ್ರತಿಶತ ಜನರು ಇನ್ನೂ ಎರಡನೇ ಡೋಸ್ ಲಸಿಕೆ ಪಡೆದಿಲ್ಲ ಎನ್ನಲಾಗಿದೆ.

ಓಮೈಕ್ರಾನ್ ರೂಪಾಂತರಿ ಪತ್ತೆ

ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ನಾಲ್ಕು ಮಂದಿಗೆ ಓಮೈಕ್ರಾನ್‌ ರೂಪಾಂತರ ತಳಿ ಬಿ.ಎ. 4 ಮತ್ತು ಇದರ ಉಪತಳಿ ಬಿ.ಎ.5 ಸೋಂಕಿನ ಮೂರು ಪ್ರಕರಣಗಳು ದೃಢಪಟ್ಟಿವೆ. ಈ ಬಗ್ಗೆ ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಣೆಯಿಂದ ಬಂದವರಲ್ಲಿ ಸೋಂಕು ಪತ್ತೆ

ಪುಣೆಯಿಂದ ಬಂದಿದ್ದ ಏಳು ರೋಗಿಗಳಲ್ಲಿ ಓಮೈಕ್ರಾನ್‌ ಉಪ ತಳಿಗಳ ಸೋಂಕು ಪತ್ತೆಯಾಗಿದೆ. ಇವರ ಇಡೀ ಜಿನೋಮ್ ಸೀಕ್ವೆನ್ಸ್‌ ಪರೀಕ್ಷೆಯನ್ನು ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್‌ನಲ್ಲಿ ನಡೆಸಲಾಗಿದ್ದು, ಫರಿದಾಬಾದ್‌ನಲ್ಲಿರುವ ಭಾರತೀಯ ಜೈವಿಕ ದತ್ತಾಂಶ ಕೇಂದ್ರದ ಸಂಶೋಧನೆ ಸೋಂಕು ಇರುವುದನ್ನು ದೃಢಪಡಿಸಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಇದನ್ನೂ ಓದಿ: Booster Dose: ಕೋವಿಡ್-19 ಎರಡು ಡೋಸ್ ಗಳಿಗಿಂತಲೂ ಬೂಸ್ಟರ್ ಡೋಸ್ ನ ಅಡ್ಡಪರಿಣಾಮ ಪ್ರಬಲ! ಈ ಬಗ್ಗೆ ಸಂಶೋಧನೆ ಹೇಳಿದ್ದು ಹೀಗೆ

ಇವರಲ್ಲಿ ಆರು ವಯಸ್ಕರು ಲಸಿಕೆಯ ಎರಡೂ ಡೋಸ್‌ ಪಡೆದವರು. ಜತೆಗೆ ಒಬ್ಬರು ಬೂಸ್ಟರ್ ಡೋಸ್‌ ಕೂಡ ಹಾಕಿಸಿಕೊಂಡಿದ್ದಾರೆ. ಇದರಲ್ಲಿ ರೋಗಿಯ 9 ವರ್ಷದ ಮಗುವಿನಲ್ಲಿ ಸೋಂಕು ಕಾಣಿಸಿದೆ. ಈ ಮಗು ಲಸಿಕೆ ಪಡೆದಿಲ್ಲ. ಇಬ್ಬರು ದಕ್ಷಿಣ ಆಫ್ರಿಕಾ ಮತ್ತು ಬೆಲ್ಜಿಯಂಗೆ ಪ್ರಯಾಣಿಸಿದ್ದರೆ, ಮೂವರು ಕೇರಳ ಮತ್ತು ಕರ್ನಾಟಕಕ್ಕೆ ಪ್ರಯಾಣಿಸಿದ್ದಾರೆ. ಇನ್ನಿಬ್ಬರು ಇತ್ತೀಚೆಗೆ ಎಲ್ಲರೂ ಪ್ರಯಾಣಿಸಿರಲಿಲ್ಲ ಎಂದು ಅವರು ಹೇಳಿದರು.
Published by:Annappa Achari
First published: