ರಸಗೊಬ್ಬರ ಘಟಕಗಳ ದಕ್ಷತೆ ಮತ್ತು ಅಸಮತೋಲಿತ ಬಳಕೆ ಸಮಸ್ಯೆ ಪರಿಹರಿಸಬೇಕಿದೆ - ಕೇಂದ್ರ ಸಚಿವ ಸದಾನಂದ ಗೌಡ

ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನದ ಈಡೇರಿಕೆಗಾಗಿ ರಸಗೊಬ್ಬರ ಕ್ಷೇತ್ರದಲ್ಲಿ ಮತ್ತಷ್ಟು ಅವಶ್ಯ ಸುಧಾರಣೆಗಳನ್ನು ತರಲು ಸಭೆಯಲ್ಲಿ ಬಂದ ಸಲಹೆಗಳು ಉಪಯುಕ್ತವಾಗಿವೆ ಸಚಿವ ಸದಾನಂದ ಗೌಡ ಎಂದರು.

news18-kannada
Updated:July 14, 2020, 4:40 PM IST
ರಸಗೊಬ್ಬರ ಘಟಕಗಳ ದಕ್ಷತೆ ಮತ್ತು ಅಸಮತೋಲಿತ ಬಳಕೆ ಸಮಸ್ಯೆ ಪರಿಹರಿಸಬೇಕಿದೆ - ಕೇಂದ್ರ ಸಚಿವ ಸದಾನಂದ ಗೌಡ
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
  • Share this:
ನವದೆಹಲಿ(ಜು.14): ರಸಗೊಬ್ಬರ ಘಟಕಗಳ ದಕ್ಷತೆಯ ಜೊತೆಗೆ ರಸಗೊಬ್ಬರಗಳ ಅಸಮತೋಲಿತ ಬಳಕೆಯ ಸಮಸ್ಯೆ ಪರಿಹರಿಸಲು ಸುಧಾರಣೆಗಳ ಅಗತ್ಯವಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಚಿಂತನ ಶಿಬಿರದ ಉಪ ಗುಂಪಿನ ಎರಡನೇ ಸಭೆಯ ಅಧ್ಯಕ್ಷತೆ ವಹಿಸಿ ರಸಗೊಬ್ಬರ ವಲಯದ ಬಾಧ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿದ ಸದಾನಂದಗೌಡ, ರಸಗೊಬ್ಬರ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಈ ಉಪ ಗುಂಪಿನ ಸಭೆಯ ಉದ್ದೇಶವಾಗಿದೆ ಎಂದರು.

ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನದ ಈಡೇರಿಕೆಗಾಗಿ ರಸಗೊಬ್ಬರ ಕ್ಷೇತ್ರದಲ್ಲಿ ಮತ್ತಷ್ಟು ಅವಶ್ಯ ಸುಧಾರಣೆಗಳನ್ನು ತರಲು ಸಭೆಯಲ್ಲಿ ಬಂದ ಸಲಹೆಗಳು ಉಪಯುಕ್ತವಾಗಿವೆ ಎಂದರು.

ಸಭೆಯಲ್ಲಿ ಕಾರ್ಯದರ್ಶಿ (ರಸಗೊಬ್ಬರ), ಕಾರ್ಯದರ್ಶಿ (ಕೃಷಿ ಮತ್ತು ರೈತರ ಕಲ್ಯಾಣ), ಹೆಚ್ಚುವರಿ ಕಾರ್ಯದರ್ಶಿ (ರಸಗೊಬ್ಬರ), ನೀತಿ ಆಯೋಗದ ಹಿರಿಯ ಅಧಿಕಾರಿಗಳು, ಒಡಿಶಾ ಮತ್ತು ಕೇರಳ ರಾಜ್ಯದ ಅಧಿಕಾರಿಗಳು, ಭಾರತೀಯ ರಸಗೊಬ್ಬರ ಸಂಸ್ಥೆ ಪ್ರತಿನಿಧಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: Bengaluru Lockdown: ನಾಳೆಯಿಂದ 1 ವಾರ ತುರ್ತು ಸೇವೆಗಳಿಗೆ ಮಾತ್ರ ಬಿಎಂಟಿಸಿ ಬಸ್​​​ ಲಭ್ಯ: ಯಾರೆಲ್ಲಾ ಪ್ರಯಾಣಿಸಬಹುದು ಗೊತ್ತೇ?

ಹಾಗೆಯೇ ರಸಗೊಬ್ಬರ ಕೈಗಾರಿಕೆಗಳಾದ ಇಫ್ಕೋ, ಕೆಆರ್.ಐಬಿಎಚ್.ಸಿ.ಓ, ಎನ್.ಎಫ್.ಎಲ್, ಆರ್.ಸಿ.ಎಫ್, ಜಿಎನ್ಎಫ್.ಸಿ. ಮತ್ತು ಕೆಲವು ಪ್ರಗತಿಪರ ರೈತರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಭಾಗಿಯಾಗಿದ್ದವರೆಲ್ಲರೂ ತಮ್ಮ ವಲಯ ಎದುರಿಸುತ್ತಿರುವ ಸವಾಲುಗಳು ಮತ್ತು ವಿವಿಧ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
Published by: Ganesh Nachikethu
First published: July 14, 2020, 4:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading