HOME » NEWS » Coronavirus-latest-news » MINISTER CT RAVI SLAMMED CONGRESS MLA ZAMEER AHMED KHAN GNR

‘ಮುಸ್ಲಿಮರ ಹಣ ಕೊರೋನಾ ಸೇವೆಗೆ ಬಳಸುವುದು ಬೇಡ ಎಂದ ಜಮೀರ್​ ಹೇಳಿಕೆ ಸಂವಿಧಾನ ವಿರೋಧಿ‘ - ಸಚಿವ ಸಿ.ಟಿ ರವಿ​​

ಕಾಂಗ್ರೆಸ್​ನವರು ಸೆಕ್ಯೂಲರಿಸಂ ಬಗ್ಗೆ ಭಾರೀ ಭಾಷಣ ಮಾಡುತ್ತಾರೆ. ಇದು ಜಮೀರ್​ ಹೇಳಿಕೆಯೋ, ಕಾಂಗ್ರೆಸ್​ ಹೇಳಿಕೆಯೋ ಎಂಬುದು ಸ್ಪಷ್ಟಪಡಿಸಲಿ. ವಕ್ಫ್​ ಬೋರ್ಡ್​ ಸರ್ಕಾರಕ್ಕಿಂತಲೂ ದೊಡ್ಡದಲ್ಲ. ಈ ಬೋರ್ಡ್​ಗೆ ಕೊಡುವುದು ಸಾರ್ವಜನಿಕರ ಹಣ ಎಂದು ಕಿಡಿಕಾರಿದರು.

news18-kannada
Updated:May 20, 2020, 2:22 PM IST
‘ಮುಸ್ಲಿಮರ ಹಣ ಕೊರೋನಾ ಸೇವೆಗೆ ಬಳಸುವುದು ಬೇಡ ಎಂದ ಜಮೀರ್​ ಹೇಳಿಕೆ ಸಂವಿಧಾನ ವಿರೋಧಿ‘ - ಸಚಿವ ಸಿ.ಟಿ ರವಿ​​
ಸಚಿವ ಸಿ.ಟಿ. ರವಿ
  • Share this:
ಬೆಂಗಳೂರು(ಮೇ.20): "ಮುಸ್ಲಿಮರ ದುಡ್ಡನ್ನು ಕೊರೋನಾ ಸೇವೆಗೆ ಬಳಸುವುದು ಬೇಡ, ಇದು ಮುಸ್ಲಿಮರಿಗಷ್ಟೇ ಸೀಮಿತವಾಗಿರಲಿ" ಎಂಬ ಕಾಂಗ್ರೆಸ್​ ಶಾಸಕ ಜಮೀರ್​​ ಅಹಮದ್​ ಹೇಳಿಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಇದು ಸಂವಿಧಾನ ವಿರೋಧಿ ಹೇಳಿಕೆ. ಕೊರೋನಾ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೆ ದೇಣಿಗೆ ನೀಡಬಾರದು ಎಂದು ಹೇಳಿರುವುದು ಖಂಡನೀಯ ಎನ್ನುವ ಮೂಲಕ ಜಮೀರ್​​ಗೆ ತಪರಾಕಿ ಬಾರಿಸಿದರು. 

ಯಾವುದೇ ವಿಚಾರದಲ್ಲೂ ತಾರತಮ್ಯ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಜಮೀರ್​​ ಅಹಮದ್​​ ನೀಡಿದ ಹೇಳಿಕೆ ಸೋಕಾಲ್ಡ್​​ ಸೆಕ್ಯೂಲರ್ಸ್​ ನೀತಿಗೆ ವಿರುದ್ಧವಾಗಿದೆ. ಇಂತಹ ಮನಸ್ಥಿತಿಯೂ ಮಾನವೀಯತೆ ವಿರುದ್ಧ ಇದೆ. ಇದು ಒಂದು ಜಾತಿ  ಮತ್ತು ಸಮುದಾಯವನ್ನು ಪ್ರತಿಬಿಂಬಿಸುವ ಹೇಳಿಕೆಯಾಗಿದೆ ಎಂದರು ಸಿ.ಟಿ ರವಿ.

ಕಾಂಗ್ರೆಸ್​ನವರು ಸೆಕ್ಯೂಲರಿಸಂ ಬಗ್ಗೆ ಭಾರೀ ಭಾಷಣ ಮಾಡುತ್ತಾರೆ. ಇದು ಜಮೀರ್​ ಹೇಳಿಕೆಯೋ, ಕಾಂಗ್ರೆಸ್​ ಹೇಳಿಕೆಯೋ ಎಂಬುದು ಸ್ಪಷ್ಟಪಡಿಸಲಿ. ವಕ್ಫ್​ ಬೋರ್ಡ್​ ಸರ್ಕಾರಕ್ಕಿಂತಲೂ ದೊಡ್ಡದಲ್ಲ. ಈ ಬೋರ್ಡ್​ಗೆ ಕೊಡುವುದು ಸಾರ್ವಜನಿಕರ ಹಣ ಎಂದು ಕಿಡಿಕಾರಿದರು.

ಇದನ್ನೂ ಓದಿ: ರಾಜ್ಯಾದ್ಯಂತ ಅರ್ಧ ದಿನದಲ್ಲಿ 63 ಹೊಸ ಕೇಸ್; ಹಾಸನದಲ್ಲಿ ಅತ್ಯಧಿಕ; ಒಟ್ಟು ಪ್ರಕರಣ 1,458ಕ್ಕೇರಿಕೆ

ಹೀಗೆ ಮುಂದುವರಿದ ಅವರು, ಜಮೀರ್​​ ಇನ್ನೂ ಜಿನ್ನಾ ಮಾನಸಿಕತೆಯಿಂದ ಹೊರಬಂದಿಲ್ಲ.  ಅವರು ಕೊಡುವ ಜಕಾತ್ ಹಣವನ್ನ ನಾವು ಕೇಳಲ್ಲ. ವಕ್ಫ್​ ಬೋರ್ಡ್​ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಲು ಮುಂದಾದ ಸಂದರ್ಭದಲ್ಲಿ ಜಮೀರ್ ಅಡ್ಡಗಾಲು ಹಾಕಿದ್ದು ಸರಿಯಲ್ಲ. ಹೀಗೆ ಹೇಳುವ ಅಧಿಕಾರವೂ ಜಮೀರ್​​ಗಿಲ್ಲ ಎಂದು ತಿರುಗೇಟು ನೀಡಿದರು.

ಇತ್ತೀಚೆಗೆ ಪಾದರಾಯನಪುರದಲ್ಲಿ ಮುಸ್ಲಿಂ ಸಮುಯದಾಯದವರು ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿರುವ ಹಲ್ಲೆಯನ್ನು ಸಮರ್ಥಿಸಿಕೊಂಡು ವಿವಾದ ಸೃಷ್ಟಿಸಿದ್ದ ಜಮೀರ್​​ ಈಗ ಮತ್ತೆ ನಾಲಿಗೆ ಹರಿಬಿಟ್ಟಿದ್ಧಾರೆ. ಈಗ ಮುಸ್ಲಿಮರ ದುಡ್ಡನ್ನು ಕೊರೋನಾಗೆ ವಿರುದ್ಧ ಸೇವೆಗೆ ಬಳಸುವುದು ಬೇಡ ಎಂದು ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
First published: May 20, 2020, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories