ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರ ಬಗ್ಗೆ ಜನರೇ ಮಾಹಿತಿ ನೀಡಿ; ಶ್ರೀರಾಮುಲು ಮನವಿ

ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚು ವೆಂಟಿಲೇಟರ್‌ ಅಗತ್ಯವಿದೆ. ಮೊದಲು 500 ವೆಂಟಿಲೇಟರ್ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಇದೀಗ 1000 ವೆಂಟಿಲೇಟರ್‌ ಖರೀದಿಗೆ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

  • Share this:
ಬೆಂಗಳೂರು (ಏಪ್ರಿಲ್ 01); ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸುಮಾರು 2,000 ಜನ ಭಾಗವಹಿಸಿದ್ದಾರೆ. ಈ ಪೈಕಿ ಕರ್ನಾಟಕದಿಂದ 300 ಜನ ಭಾಗವಹಿಸಿದ್ದಾರೆ. ಹೀಗಾಗಿ ಈ ಸಭೆಯಲ್ಲಿ ಭಾಗವಹಿಸಿದವರ ಕುರಿತು ಜನ ಮಾಹಿತಿ ನೀಡಬೇಕಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಮಾತನಾಡಿರುವ ಅವರು, “ರಾಜ್ಯದಲ್ಲಿ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದ 40 ಜನ ಪತ್ತೆಯಾಗಿದ್ದಾರೆ. ಇವರ ಮಾದರಿಯನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ಉಳಿದವರ ಪತ್ತೆ ಕಾರ್ಯವೂ ನಡೆಯುತ್ತಿದೆ. ರಾಜ್ಯ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಪ್ರಾರ್ಥನಾ ಸಭೆಯಲ್ಲಿ ಮಲೇಷ್ಯಾ, ಇಂಡೋನೇಷ್ಯಾದ ಜನ ಸಹ ಭಾಗವಹಿಸಿದ್ದರು. ಹೀಗಾಗಿ ಸೋಂಕು ಹೆಚ್ಚು ಹರಡುವ ಸಾಧ್ಯತೆ ಇದ್ದು ಈ ಕುರಿತು ಜನ ಮಾಹಿತಿ ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ವೆಂಟಿಲೇಟರ್‌ ಕುರಿತು ಮಾತನಾಡಿರುವ ಅವರು, “ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚು ವೆಂಟಿಲೇಟರ್‌ ಅಗತ್ಯವಿದೆ. ಮೊದಲು 500 ವೆಂಟಿಲೇಟರ್ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಇದೀಗ 1000 ವೆಂಟಿಲೇಟರ್‌ ಖರೀದಿಗೆ ಸರ್ಕಾರ ಮುಂದಾಗಿದೆ. ವಿದೇಶದಿಂದ 16550 ತ್ರಿಲೇಯರ್ ಮಾಸ್ಕ್, 2215 ಎನ್ 95 ಮಾಸ್ಕ್ ಹಾಗೂ 2030 ಪ್ರೊಟೆಕ್ಷನ್ ಕಿಟ್ ಲಭ್ಯವಿದೆ ಎಂದು ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

(ವರದಿ - ರಾಚಪ್ಪ ಬನ್ನಿದಿನ್ನಿ ಬಾಗಲಕೋಟೆ)

ಇದನ್ನೂ ಓದಿ : ಲಾಕ್‌ಡೌನ್ ಮುಗಿಯುವವರೆಗೆ ಎಣ್ಣೆ ನಿಮ್ದು, ಊಟ ಮಾತ್ರ ನಮ್ದು; ಸಚಿವ ಆರ್‌. ಅಶೋಕ್ ಹಾಸ್ಯ ಚಟಾಕಿ
First published: