ಕೊರೋನಾ ವಿರುದ್ಧ ಹೋರಾಟ: ಏಪ್ರಿಲ್​​​​ 30ರವರೆಗೂ ಲಾಕ್​​ಡೌನ್​​ ಮುಂದುವರಿಸುವುದು ಅನಿವಾರ್ಯ: ಆರೋಗ್ಯ ಸಚಿವ ಬಿ ಶ್ರೀರಾಮುಲು

ಪ್ರಧಾನಿ ನರೇಂದ್ರ ಮೋದಿಯವರು ಸೂಚನೆ ನೀಡಿದ ಬೆನ್ನಲ್ಲೇ ಸಿಎಂ ಬಿ.ಎಸ್​ ಯಡಿಯೂರಪ್ಪ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್​​ಡೌನ್​​ ವಿಸ್ತರಿಸಿ ಘೋಷಣೆ ಮಾಡಿದ್ದಾರೆ. ಒರಿಸ್ಸಾ, ಪಂಜಾಬ್​​​, ಮಹಾರಾಷ್ಟ್ರ, ಈಗ ಪಶ್ಚಿಮ ಬಂಗಾಳ ಸರ್ಕಾರವೂ ಪ್ರಧಾನಿಗೆ ಮುನ್ನವೇ ಲಾಕ್​​ಡೌನ್​​​ ವಿಸ್ತರಿಸಿ ಆದೇಶಿಸಿದೆ.

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

 • Share this:
  ನವದೆಹಲಿ(ಏ.11): ಕೊರೋನಾ ವಿರುದ್ಧ ಹೋರಾಡಲು ಜಾರಿ ಮಾಡಲಾಗಿದ್ದ 21 ದಿನಗಳ ಲಾಕ್​​ಡೌನ್​ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿರು. ಈ ವಿಡಿಯೋ ಸಂವಾದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ತೆಲಂಗಾಣ ಸಿಎಂ ಕೆಸಿಆರ್​​, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್​​ ಮೋಹನ್​​ ರೆಡ್ಡಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಈ ಸಂವಾದದ ವೇಳೆ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ವಿಚಾರಗಳನ್ನು ಚರ್ಚಿಸಿದು. ಜತೆಗೆ ಕೊರೋನಾ ವಿರುದ್ಧದ ಹೋರಾಟ ಮಾಡಲು ನಾವು ಲಾಕ್​​ಡೌನ್​​ ಮುಂದುವರಿಸಲೇಬೇಕು ಎಂದು ಸೂಚನೆ ನೀಡಿದರು.

  ಪ್ರಧಾನಿ ನರೇಂದ್ರ ಮೋದಿಯವರು ಸೂಚನೆ ನೀಡಿದ ಬೆನ್ನಲ್ಲೇ ಒರಿಸ್ಸಾ, ಪಂಜಾಬ್​​​, ಮಹಾರಾಷ್ಟ್ರ, ಈಗ ಪಶ್ಚಿಮ ಬಂಗಾಳ ಸರ್ಕಾರವೂ ಲಾಕ್​​ಡೌನ್​​​ ವಿಸ್ತರಿಸಿ ಆದೇಶಿಸಿದೆ. ಇದಾದ ಕೆಲ ಹೊತ್ತಲ್ಲೇ ಸಿಎಂ ಬಿ.ಎಸ್​ ಯಡಿಯೂರಪ್ಪ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್​​ಡೌನ್​​ ವಿಸ್ತರಿಸಿ ಸುತ್ತೋಲೆ ಹೊರಡಿಸಿದ್ದಾರೆ.

  ಕರ್ನಾಟಕದಲ್ಲಿ ಲಾಕ್​​ಡೌನ್​​ ಮುಂದುವರಿಸುವ ಕುರಿತಂತೆ ಟ್ವೀಟ್​ ಮಾಡಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಸರ್ಕಾರ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ನಿರ್ಣಾಯಕ ಘಟ್ಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾದರಿಂದ ಕರ್ನಾಟದಲ್ಲಿ ಲಾಕ್​​ಡೌನ್ ಅನ್ನು ಏಪ್ರಿಲ್ 30ರವರೆಗೆ ಮುಂದುವರಿಸುವುದು ಅನಿವಾರ್ಯವಾಗಲಿದೆ. ಈ ಸಮಯದಲ್ಲಿ ಮೊಬೈಲ್ ಆಸ್ಪತ್ರೆ, ಟೆಸ್ಟಿಂಗ್ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೊಳಿಸಲು ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: Lockdown In Karnataka: ಏಪ್ರಿಲ್ 30ರವರೆಗೆ ವಿಭಿನ್ನ ಲಾಕ್​ಡೌನ್; ಆರ್ಥಿಕ, ಕೃಷಿ ಚಟುವಟಿಕೆಗೆ ಭಂಗ ಇಲ್ಲದಂತೆ ನಿಯಮ: ಬಿಎಸ್​ವೈ

  ಕೊರೋನಾ ಸೋಂಕಿತರ ಚಿಕಿತ್ಸೆಗೆಂದು ರಾಜ್ಯದಲ್ಲಿ ಸದ್ಯಕ್ಕಿರುವ 19 ಆಸ್ಪತ್ರೆಗಳ ಜೊತೆಗೆ 14 ಹೊಸ ಆಸ್ಪತ್ರೆಗಳನ್ನು ಮೀಸಲಿಡಲಾಗಿದೆ. ಹೀಗಾಗಿ, ರಾಜ್ಯದಲ್ಲಿ ಒಟ್ಟು 33 ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ಲಭ್ಯವಿದೆ. ಲಾಕ್​ಡೌನ್​ ಘೋಷಿಸಿದ್ದರೂ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದ್ದು, ಇಂದು ಹೊಸದಾಗಿ 10 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದ ಆಸ್ಪತ್ರೆಗಳಿಗೆ ಕೊರೋನಾ ರೋಗಿಗಳಿಗೆ ವೆಂಟಿಲೇಟರ್​ಗಳ ಸಮಸ್ಯೆಯೂ ಎದುರಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕೊರೋನಾ ವೈರಸ್​ ಚಿಕಿತ್ಸೆಗಾಗಿ 19 ಆಸ್ಪತ್ರೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುತಿಸಿತ್ತು.
  First published: