ಕೊರೋನಾ ವೈರಸ್​ಗೆ ಕರ್ನಾಟಕದಲ್ಲಿ ಎರಡನೇ ಬಲಿ!; ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ

ಮೃತ ವೃದ್ಧೆ ವಯೋಸಹಜ ಆರೋಗ್ಯ ಸಮಸ್ಯೆ ಕೂಡ ಇತ್ತು. ಇತ್ತೀಚಿಗೆ ಕೆಳಗೆ ಬಿದ್ದು ಸೊಂಟ ಮುರಿದುಕೊಂಡಿದ್ದರು. ಹೀಗಾಗಿ ಇದು ಸ್ವಾಭಾವಿಕ ಮರಣವೇ? ಅಥವಾ ಕೊರೋನಾ ಸೋಂಕಿನಿಂದಾದ ಸಾವೇ ಎನ್ನುವುದು ಖಚಿತವಾಗಿರಲಿಲ್ಲ. 

news18-kannada
Updated:March 26, 2020, 1:16 PM IST
ಕೊರೋನಾ ವೈರಸ್​ಗೆ ಕರ್ನಾಟಕದಲ್ಲಿ ಎರಡನೇ ಬಲಿ!; ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಮಾ‌ರ್ಚ್‌ 25): ಬುಧವಾರ ರಾಜ್ಯದಲ್ಲಿ ವೃದ್ಧೆಯೋರ್ವಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈಗ ಇವರ ಸಾವಿಗೆ ಕೊರೋನಾ ವೈರಸ್​ ಕಾರಣ ಎನ್ನುವುದು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್​ಗೆ ಎರಡು ಜನರು ಬಲಿಯಾದಂತಾಗಿದೆ.

ಆಂಧ್ರಪ್ರದೇಶ ಮೂಲದ 75 ವರ್ಷದ ಮಹಿಳೆ ಮಾರ್ಚ್‌ 23ರಂದು ಮೆಕ್ಕಾದಿಂದ ವಾಪಸ್ಸಾಗಿ ಗೌರಿ ಬಿದನೂರಿನಲ್ಲಿರುವ ಮಗನ ಮನೆಯಲ್ಲಿ ಕ್ವಾರಟೈನ್​ನಲ್ಲಿದ್ದರು. ಆದರೆ, ಮಾರ್ಚ್‌ 24 ರಂದು ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೂಡಲೇ ಅವರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ,ನಿನ್ನೆಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತ ವೃದ್ಧೆ ವಯೋಸಹಜ ಆರೋಗ್ಯ ಸಮಸ್ಯೆ ಕೂಡ ಇತ್ತು. ಇತ್ತೀಚಿಗೆ ಕೆಳಗೆ ಬಿದ್ದು ಸೊಂಟ ಮುರಿದುಕೊಂಡಿದ್ದರು. ಹೀಗಾಗಿ ಇದು ಸ್ವಾಭಾವಿಕ ಮರಣವೇ? ಅಥವಾ ಕೊರೋನಾ ಸೋಂಕಿನಿಂದಾದ ಸಾವೇ ಎನ್ನುವುದು ಖಚಿತವಾಗಿರಲಿಲ್ಲ.

ಬುಧವಾರ ಮೃತ ಮಹಿಳೆಯ ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಪರೀಕ್ಷಾ ವರದಿ ಬಂದಿದ್ದು, ಮಹಿಳೆ ಸಾವಿಗೆ ಕೊರೋನಾ ಸೋಂಕು ಕಾರಣ ಎನ್ನುವುದು ದೃಢವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಈ ಮೂಲಕ ಈ ಮೂಲಕ ಭಾರತದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆ ಆಗಿದೆ. ಕೊರೋನಾ ಸೋಂಕಿತರ ಸಂಖ್ಯೆ 649 ಆಗಿದೆ.

ದ್ವಂದ್ವ ಹೇಳಿಕೆ ನೀಡಿದ ಸುಧಾಕರ್​:

ಮಾಧ್ಯಮಗಳ ಜೊತೆ ಮಾತನಾಡುತ್ತಾ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ದ್ವಂದ ಹೇಳಿಕೆ ನೀಡಿದ್ದಾರೆ. "ಗೌರಿ ಬಿದನೂರು ಮಹಿಳೆ ಮೃತಪಟ್ಟಿದ್ದು ಕೊರೋನಾದಿಂದಲೇ ಎನ್ನುವುದು ಇನ್ನೂ ಖಚಿತವಾಗಿಲ್ಲ.  ರಿಪೋರ್ಟ್ ಬಂದ ಮೇಲೆ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ," ಎಂದು ​ ಹೇಳಿದ್ದಾರೆ. ಇದು ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ನಂತರ ಮಹಿಳೆ ಕೊರೋನಾದಿಂದಲೇ ಮೃತಪಟ್ಟ ಬಗ್ಗೆ ಅವರು ಖಚಿತಪಡಿಸಿದ್ದರು.

First published: March 26, 2020, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading