ರೋಮ್​ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಅರಣ್ಯ ಸಚಿವ ಅನಂದ್ ಸಿಂಗ್ ಮಗಳು; ಪುತ್ರಿ ರಕ್ಷಣೆಗೆ ಮನವಿ

ಬೇರೆ ದೇಶಗಳ ಬಗ್ಗೆ ನನಗೆ ಮಾಹಿತಿ ಕಡಿಮೆ. ಯಾವ ದೇಶದ ರಾಜಧಾನಿ ಯಾವುದು ಅಂತಾ ನನಗೆ ಗೊತ್ತಿಲ್ಲ. ಆದ್ದರಿಂದ ಸಚಿವ ಸುಧಾಕರ ಅವರಿಗೆ ಮನವಿ ಮಾಡಿದ್ದೇನೆ. ಆದರೂ ನನ್ನಲ್ಲಿ ಆತಂಕ ಇದೆ. ಹೇಗಿದ್ದಾರೆ? ಅನ್ನೋ ಭಯ ಕೂಡ ಕಾಡ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಚಿವ ಆನಂದ್ ಸಿಂಗ್ ಮತ್ತು ಅವರ ಮಗಳು ವೈಷ್ಣವಿ.

ಸಚಿವ ಆನಂದ್ ಸಿಂಗ್ ಮತ್ತು ಅವರ ಮಗಳು ವೈಷ್ಣವಿ.

 • Share this:
  ಬೆಂಗಳೂರು: ಕೊರೋನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಹಲವು ದೇಶಗಳು ವಿದೇಶಿ ಪ್ರಯಾಣಿಗರ ಮೇಲೆ ನಿರ್ಬಂಧ ವಿಧಿಸಿವೆ. ಭಾರತ ಕೂಡ ಹಲವಾರು ದೇಶಗಳ ಮೇಲೆ ನಿರ್ಬಂಧ ವಿಧಿಸಿದೆ. ಏತನ್ಮಧ್ಯೆ, ಕೊರೋನಾ ಸೋಂಕು ವ್ಯಾಪಕವಾಗಿರುವ ಇಟಲಿಯಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಮಗಳು ವೈಷ್ಣವಿ ಸಿಲುಕಿದ್ದಾರೆ. ಭಾರತಕ್ಕೆ ಬರಲು ರೋಮ್​ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದಾರೆ.

  ಈ ಸಂಬಂಧ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿರುವ ಆನಂದ ಸಿಂಗ್, ಇಟಲಿ ರಾಜಧಾನಿ ರೋಮ್​ನಲ್ಲಿ ನನ್ನ ಮಗಳಿದ್ದಾಳೆ. ಕಳೆದ 20 ದಿನದ ಹಿಂದೆಯೇ ವಾಪಸ್ ಬರಲು ಹೇಳಿದ್ವಿ. ಅಲ್ಲಿ ನನ್ನ ಮಗಳು ಒಬ್ಬಳೆ ಇಲ್ಲ. ರಾಜ್ಯದ 30 ಹಾಗೂ ದೇಶದ ವಿವಿಧ ಭಾಗದ 60 ಒಟ್ಟು 90 ವಿದ್ಯಾರ್ಥಿಗಳಿದ್ದಾರೆ. ನಾನು ಕೂಡ ಅಸಾಯಕನಾಗಿದ್ದೇನೆ. ಇದು ರಾಜ್ಯ ಸರ್ಕಾರದ ಮಾತಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಬೇಕು. ಅಲ್ಲಿಂದ ಒಂದು ವಿಮಾನ ಕೂಡ ಬರ್ತಿಲ್ಲ. ವಿಮಾನಕ್ಕೆ ಸರ್ಟಿಫಿಕೇಟ್ ಇದ್ರೂ ಅವರು ಬರಲು ಬಿಡ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾನು ಆರೋಗ್ಯ ಸಚಿವ ರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೂ ಮನವಿ ಮಾಡಿದ್ದೇನೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

  ಒಟ್ಟು 300 ಜನ ರೋಮ್ ವಿಮಾನ ನಿಲ್ದಾಣದಲ್ಲಿದ್ದಾರೆ. ಇದು ಕೇವಲ ನನ್ನ ಮಗಳ ಪ್ರಶ್ನೆ ಅಲ್ಲ. 300 ಜನರ ಪ್ರಶ್ನೆ. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ಹುಷಾರಾಗಿರಿ, ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಇರಿ. ಖಾಯಿಲೆ ಬಗ್ಗೆ ಎಚ್ಚರ ಇರಲಿ ಅಂತಾ ಮಗಳಿಗೆ ಹೇಳಿದ್ದೇನೆ. ನಿನ್ನೆ ರಾತ್ರಿ ಮಗಳ ಜೊತೆ ಮಾತಾಡಿದ್ದೇನೆ.  ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಲ್ಲಿ ಖಾಯಿಲೆ ಬಂದಾಗ ಶಾಲಾ, ಕಾಲೇಜುಗಳಿಗೆ ರಜೆ ಕೊಟ್ಟಿದ್ದೆ ಕೊರೋನಾ ಹರಡಲು ಕಾರಣವಾಯ್ತು ಅಂತಾ ನನ್ನ ಮಗಳು ಹೇಳಿದ್ದಾಳೆ. ಕಾಲೇಜುಗಳಿಗೆ ರಜೆ ಕೊಟ್ಟ ತಕ್ಷಣವೇ ಅಲ್ಲಿ ರಾತ್ರಿ ಪಬ್, ಬಾರ್, ಚಟುವಟಿಕೆಗಳು ಜಾಸ್ತಿಯಾಗಿ ಖಾಯಿಲೆ ಹರಡಲು ಕಾರಣವಾಗಿದೆ ಎಂದರು.

  ಇದನ್ನು ಓದಿ: ಕೊರೋನಾ ಗೆದ್ದ ಕನ್ನಡಿಗರು: ರಾಜ್ಯದ ಮೊದಲ ಸೋಂಕಿತ ಟೆಕ್ಕಿ ಮತ್ತು ಕುಟುಂಬಸ್ಥರು ಗುಣಮುಖ

  ನಾನು ಜನರಲ್ಲಿ ಮನವಿ ಮಾಡೋದು ಇಷ್ಟೇ, ಜನಸಂದಣಿ ಇರುವ ಕಡೆ ಎಚ್ಚರದಿಂದಿರಿ.  ಜಾಗೃತಿ ಇರಲಿ. ಮಾಸ್ಕ್ ಧರಿಸಿ ಅಂತಾ ಕೇಳ್ತೇನೆ. ಬೇರೆ ದೇಶಗಳ ಬಗ್ಗೆ ನನಗೆ ಮಾಹಿತಿ ಕಡಿಮೆ. ಯಾವ ದೇಶದ ರಾಜಧಾನಿ ಯಾವುದು ಅಂತಾ ನನಗೆ ಗೊತ್ತಿಲ್ಲ. ಆದ್ದರಿಂದ ಸಚಿವ ಸುಧಾಕರ ಅವರಿಗೆ ಮನವಿ ಮಾಡಿದ್ದೇನೆ. ಆದರೂ ನನ್ನಲ್ಲಿ ಆತಂಕ ಇದೆ. ಹೇಗಿದ್ದಾರೆ? ಅನ್ನೋ ಭಯ ಕೂಡ ಕಾಡ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
  First published: