ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನು ಆವರಿಸಿದ್ದು, ಸದ್ಯಕ್ಕೆ ಇದರ ಎದುರು ಗೆಲುವು ಎಂಬುದೇ ದುಸ್ಸಾಧ್ಯದಂತಾಗಿದೆ. ದಿನೇ ದಿನೇ ಸೋಂಕಿತರ ಮತ್ತು ಸಾವಿಗೀಡಾಗುವವರ ಸಂಖ್ಯೆ ಏರುತ್ತಲೇ ಇದೆ. ಪರಿಣಾಮ ಮಾಸ್ಕ್ ಜೊತೆಗೆ ಬದುಕುವ ನಂಟು ಶಾಶ್ವತವಾಗಿದೆ.
ಇತ್ತೀಚೆಗೆ ಜನ ಮನೆಯಿಂದ ಹೊರಡುವ ಮುನ್ನ ಹೆಲ್ಮೆಟ್ ಮರೆತರು ಮಾಸ್ಕ್ ಮಾತ್ರ ಮರೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ಹಾಕುತ್ತಿದ್ದ ಜನ ಇದೀಗ ಮ್ಯಾಚಿಂಗ್ ಮಾಸ್ಕ್ ಸಹ ತೊಡಲು ಮುಂದಾಗಿದ್ದಾರೆ. ಹೀಗಾಗಿ ಮಾಸ್ಕ್ ತಯಾರಿಕೆಯೇ ಒಂದು ಉದ್ಯಮವಾಗಿ ಬೆಳೆದಿದೆ. ಅನೇಕರ ತುತ್ತಿನ ಚೀಲ ತುಂಬಿಸುತ್ತಿದೆ. ಆದರೆ, ಇಲ್ಲೊಂದು ನಾವೀಗ ಹೇಳಲು ಹೊರಟಿರುವುದು ಮಾತ್ರ ಅಂತಿಂತಾ ಮಾಸ್ಕ್ ಕಥೆ ಅಲ್ಲ..!
MILLION DOLLAR MASK: Israeli company designs world's priciest N99 mask at $1.5 million. #ICYMI pic.twitter.com/IOUiy8YDTA
— AP Entertainment (@APEntertainment) August 22, 2020
ಸಾಮಾನ್ಯವಾಗಿ ಜನ ಕಾಟನ್ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಬಳಸುವುದು ಸಾಮಾನ್ಯ. ಇತ್ತೀಚೆಗೆ ಕೆಲವರು ಚಿನ್ನದ ಮಾಸ್ಕ್ ಧರಿಸಿ ಸುದ್ದಿಯಾದದ್ದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಕಂಪೆನಿ ಬರೋಬ್ಬರಿ 12 ಕೋಟಿ ಮೌಲ್ಯದ ಡೈಮಂಡ್ ಮಾಸ್ಕ್ ತಯಾರಿಸಲು ಮುಂದಾಗಿದೆ.
ಜೆರುಸಲೆಂನಲ್ಲಿರುವ ಯವಲೆ ಎಂಬ ಕಂಪೆನಿಯ ಮಾಲೀಕ ಐಸಾಕ್ ಲೇವಿ ಇಂತಹ ದುಸ್ಸಾಹಸಕ್ಕೆ ಕೈಹಾಕಿರುವ ಉದ್ಯಮಿ. ಈತ 3600 ಬಿಳಿ ಮತ್ತು ಕಪ್ಪು ಡೈಮಂಡ್ ಅನ್ನು ಬಳಸಿ ಈ ಮಾಸ್ಕ್‌ತಯಾರಿಸಲು ಮುಂದಾಗಿದ್ದಾನೆ. ಅಲ್ಲದೆ, ಇದಕ್ಕೆ 10 ಕ್ಯಾರೆಟ್ ಚಿನ್ನವನ್ನೂ ಬಳಸಿದ್ದಾನೆ. ಈ ವರ್ಷದ ಅಂತ್ಯದ ಒಳಗಾಗಿ ಮಾಸ್ಕ್ ಸಿದ್ದಪಡಿಸುವ ಕೆಲಸ ಮುಗಿಯಲಿದೆ ಎಂದು ಈತ ತಿಳಿಸಿದ್ದಾನೆ.
ಇದನ್ನೂ ಓದಿ : ಭಾರತದ ಪೊಲೀಸರಿಂದ ಹುಡುಕಲಾಗುತ್ತಿರುವ ನಿತ್ಯಾನಂದನಿಂದ ಕೈಲಾಸ ದೇಶದ ನೋಟು ಬಿಡುಗಡೆ
ಕೇವಲ ದುಬಾರಿ ಮಾಸ್ಕ್ ತಯಾರಿಸುವುದು ಮಾತ್ರ ಈತನ ಗುರಿಯಲ್ಲ. ಬದಲಾಗಿ ಗ್ರಾಹಕರು ನೀಡಿದ ಉಪಾಯದಂತೆ ಈ ಮಾಸ್ಕ್‌ನಲ್ಲಿ N99 ಮಾದರಿ ಸುರಕ್ಷತಾ ಕ್ರಮವನ್ನೂ ಈತ ಅಳವಡಿಸಿದ್ದಾನೆ. ಇದಕ್ಕಾಗಿ ಉನ್ನತ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ