HOME » NEWS » Coronavirus-latest-news » MIGRANTS RUSH TO MUMBAI RAILWAY STATIONS TO CATCH TRAINS AMID TALKS OF LOCKDOWN RHHSN

ಲಾಕ್​ಡೌನ್​ ಭೀತಿ: ಊರುಗಳಿಗೆ ತೆರಳಲು ರೈಲ್ವೆ ನಿಲ್ದಾಣಗಳಲ್ಲಿ ಕಿಕ್ಕಿರಿದು ಜಮಾಯಿಸಿದ ವಲಸಿಗರು..!

ಮುಂಬೈಗೆ ಕೆಲಸವನ್ನರಸಿ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಉತ್ತರ ಪ್ರದೇಶ, ರಾಜಸ್ಥಾನ, ಗುವಾಹಟಿ, ಪುರಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಂದ ಆಗಮಿಸುತ್ತಾರೆ. ಈಗ ಮಹಾ ವಲಸೆ ಆರಂಭಗೊಂಡಿದ್ದು ಆರ್ಥಿಕವಾಗಿ ಮುಂಬೈಗೆ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗುತ್ತಿದೆ.

news18-kannada
Updated:April 12, 2021, 8:06 PM IST
ಲಾಕ್​ಡೌನ್​ ಭೀತಿ: ಊರುಗಳಿಗೆ ತೆರಳಲು ರೈಲ್ವೆ ನಿಲ್ದಾಣಗಳಲ್ಲಿ ಕಿಕ್ಕಿರಿದು ಜಮಾಯಿಸಿದ ವಲಸಿಗರು..!
ರೈಲಿನಲ್ಲಿ ತಮ್ಮ ಊರುಗಳತ್ತ ತೆರಳುತ್ತಿರುವ ವಲಸಿಗರು (ಚಿತ್ರ ಕೃಪೆ- PTI)
  • Share this:
ಮುಂಬೈ (ಏ. 12): ದೇಶದಲ್ಲೇ ಅತಿ ಹೆಚ್ಚು ಕೊರೋನಾ ಕೇಸ್​ಗಳು ಮಹಾರಾಷ್ಟ್ರದಲ್ಲಿ ನಿತ್ಯ ದಾಖಲಾಗುತ್ತಿವೆ. ಈಗಾಗಲೇ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಹೇರಿರುವ ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಬಗ್ಗೆ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದೆ. ಜನರ ಸುರಕ್ಷತೆ ನಮ್ಮ ಆದ್ಯತೆ ಆಗಿದ್ದು, ಅಗತ್ಯವಿದ್ದಲ್ಲಿ ಸರ್ಕಾರ ಲಾಕ್​ಡೌನ್ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸಿಎಂ ಉದ್ಧವ್ ಠಾಕ್ರೆ ಅವರೇ ಹೇಳಿದ್ದಾರೆ. ಹೀಗಾಗಿ ವಲಸಿಗರಲ್ಲಿ ಆತಂಕ ಮನೆ ಮಾಡಿದ್ದು, ಮತ್ತೆ ಲಾಕ್​ಡೌನ್​ ಆಗುವ ಭೀತಿಯಲ್ಲಿ ಮುಂಬೈ ತೊರೆಯಲು ಶುರು ಮಾಡಿದ್ದಾರೆ.

ಕಳೆದ ವರ್ಷದಂತೆ ಮತ್ತೆ ಲಾಕ್​ಡೌನ್​ ಆದರೆ ಕೆಲಸವಿಲ್ಲದೆ ಬದುಕು ಸಾಗಿಸೋದು ಕಷ್ಟ ಎಂದು ವಲಸಿಗರು ಮಹಾರಾಷ್ಟ್ರವನ್ನು ತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ ಸೇರಿದಂತೆ ಪ್ರಮುಖ ರೈಲ್ವೆ ನಿಲ್ದಾಣಗಳು ವಲಸಿಗರಿಂದ ಕಿಕ್ಕಿರಿದಿದೆ. ಮಹಿಳೆಯರು-ಮಕ್ಕಳೊಂದಿಗೆ ದೊಡ್ಡ ದೊಡ್ಡ ಲಗೇಜ್​ಗಳನ್ನು ಹೊತ್ತು ತಮ್ಮೂರಿನ ರೈಲನ್ನು ಏರಲು ತವಕಿಸುತ್ತಿರುವ ದೃಶ್ಯ ರೈಲ್ವೆ ನಿಲ್ದಾಣಗಳಲ್ಲಿ ಸಾಮಾನ್ಯವಾಗಿದೆ.

ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಕೇಸ್​ಗಳ ಸಂಖ್ಯೆ ಹೆಚ್ಚಾಗಿದ್ದು 3-4 ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಜನ ರೈಲುಗಳಲ್ಲಿ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಿದ್ದಾರೆ. ಹೆಚ್ಚು ವಲಸಿಗರ ಪ್ರಯಾಣದಿಂದ ರೈಲ್ವೆ ಇಲಾಖೆ ಹೆಚ್ಚುವರಿ ರೈಲುಗಳ ಸೌಲಭ್ಯವನ್ನು ನೀಡುತ್ತಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು ಬಿಡಲಾಗುತ್ತದೆ. ಆದರೆ ಈ ಸಲ ಜನ ಲಾಕ್​ಡೌನ್ ಭೀತಿಯಿಂದ ಹುಟ್ಟೂರುಗಳತ್ತ ಮುಖ ಮಾಡಿದ್ದಾರೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಸಾರಿಗೆ ನೌಕರ ವೇತನ ಹೆಚ್ಚಳಕ್ಕೆ ಕ್ರಮ; ಸಚಿವ ಲಕ್ಷ್ಮಣ ಸವದಿ ಭರವಸೆ

ಮುಂಬೈಗೆ ಕೆಲಸವನ್ನರಸಿ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಉತ್ತರ ಪ್ರದೇಶ, ರಾಜಸ್ಥಾನ, ಗುವಾಹಟಿ, ಪುರಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಂದ ಆಗಮಿಸುತ್ತಾರೆ. ಈಗ ಮಹಾ ವಲಸೆ ಆರಂಭಗೊಂಡಿದ್ದು ಆರ್ಥಿಕವಾಗಿ ಮುಂಬೈಗೆ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗುತ್ತಿದೆ.

ಇನ್ನು ಕೊರೋನಾ ನಿಯಂತ್ರಣಕ್ಕೆ ಹರಸಾಹಸಪಡುತ್ತಿರುವ ಮಹಾರಾಷ್ಟ್ರಕ್ಕೆ ಕಾರ್ಮಿಕ ವರ್ಗದ ವಲಸೆ ಬಿಸಿ ತುಪ್ಪವಾಗಿದೆ. ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಭಾರೀ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ. ಮಾಸ್ಕ್ ಧರಿಸಿರುತ್ತಾರೆಯಾದರೂ ಸಾಮಾಜಿಕ ಅಂತರವನ್ನು ಗಾಳಿಗೆ ತೂರಲಾಗಿದೆ. ಇದರಿಂದ ರೈಲ್ವೆ ನಿಲ್ದಾಣಗಳೇ ಸೋಂಕು ಹಬ್ಬುವ ಹಾಟ್​ಸ್ಪಾಟ್​ಗಳಾಗಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

  • ವರದಿ: ಕಾವ್ಯಾ ವಿ

Published by: HR Ramesh
First published: April 12, 2021, 8:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories