ಕೊರೋನಾ ಹಾಗೂ ಲಾಕ್ ಡೌನ್ನಿಂದಾಗಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಇಂದು ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಸಭೆ ನಡೆಸಲಾಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಪ್ರಮುಖರು ಇದರಲ್ಲಿ ಭಾಗಿಯಾಗಿದ್ದರು.
ಕೊರೋನಾ ಲಾಕ್ಡೌನ್ನಿಂದಾಗಿ ಸ್ಯಾಂಡಲ್ವುಡ್ ಸಂಕಷ್ಟದಲ್ಲಿದೆ. ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಚಿತ್ರರಂಗಕ್ಕೆ ಪುನಶ್ಚೇತನದ ಅಗತ್ಯವಿದೆ. ಈ ಕುರಿತಾಗಿ ಚರ್ಚಿಸಲು ಇಂದು ನಾಗವಾರದಲ್ಲಿರುವ ಶಿವಣ್ಣನ ಮನೆಯಲ್ಲಿ ಸಭೆ ಸೇರಲಾಗಿತ್ತು.
ಎಲ್ಲ ರಂಗಕ್ಕೂ ಪ್ಯಾಕೆಜ್ ಘೋಷಿಸಿರೋ ಸರ್ಕಾರ, ಚಿತ್ರರಂಗದ ಬಗ್ಗೆ ನಿರ್ಲಕ್ಷ ವಹಿಸಿದೆ. ಹೀಗಾಗಿ ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಇಡಲು ಈ ಸಭೆ ಕರೆಯಲಾಗಿತ್ತು.
ಇದನ್ನೂ ಓದಿ: ಮತ್ತೆ ಸ್ಯಾಂಡಲ್ವುಡ್ಗೆ ಮರಳಲಿದ್ದಾರೆ ಬಾಲಿವುಡ್ನ ಈ ಸ್ಟಾರ್ ನಟ..!
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ, 'ಚಿತ್ರರಂಗದ ಪ್ರತಿ ವಿಭಾಗಗಳಿಂದಲೂ ಎಲ್ಲರೂ ಒಗ್ಗಟ್ಟಾಗಿ ಬಂದಿರುವುದು ಖುಷಿ ತಂದಿದೆ. ಇಂಡಸ್ಟ್ರಿಯ ಸಾಕಷ್ಟು ಸಮಸ್ಯೆಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ಸಾವಿರ ಜನರನ್ನು ಹಿಂದೆ ಇಟ್ಟುಕೊಂಡವನು ನಾಯಕ ಅಲ್ಲ. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವವನು ನಿಜವಾದ ಲೀಡರ್. ನನ್ನನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ. ಇನ್ಮುಂದೆ ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣ ಹಾಗೂ ಮಾದರಿಯಾಗಿ ಬಾಳೋಣ' ಎಂದಿದ್ದಾರೆ.
'ಕೊರೋನಾ ಏನೂ ದೊಡ್ಡ ವಿಷಯವಲ್ಲ. ಅದನ್ನು ಹೋಗಲಾಡಿಸಬಹುದು.
ಇನ್ನು ಮೂರು, ನಾಲ್ಕು ದಿನಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿ, ಅದರಲ್ಲಿ ರಾಜ್ಯ ಸರ್ಕಾರಕ್ಕೆ ಯಾವ ರೀತಿ ಮನವಿ ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ' ಎಂದು ತಿಳಿಸಿದ್ದಾರೆ ಶಿವರಾಜ್ ಕುಮಾರ್.
ಇದನ್ನೂ ಓದಿ: ಪುಸ್ತಕ ಓದೋಕೆ ಆರಂಭಿಸಿದ್ದೇ ಪಾಠ ಮಾಡೋಕೆ ಶುರು ಮಾಡಿದ್ರಾ ನಿಖಿಲ್ ಕುಮಾರಸ್ವಾಮಿ...!
ನಂತರ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು, 'ಮೊದಲಿನಿಂದಲೂ ಅಣ್ಣಾವ್ರ ಮನೆಯಲ್ಲೆ ಚರ್ಚೆಗಳು ನಡೆಯುತ್ತಿದ್ದವು. ಸ್ಯಾಂಡಲ್ವುಡ್ಗೆ ಈಗ ನಾಯಕನೊಬ್ಬನ ಅವಶ್ಯಕತೆ ಇದೆ. ಹೀಗಾಗಿ ನಾಯಕತ್ವ ವಹಿಸಿಕೊಳ್ಳುವಂತೆ ಒಮ್ಮತದಿಂದ ನಾವು ಮನವಿ ಮಾಡಿದ್ದೆವು. ಶಿವಣ್ಣ, ಅದಕ್ಕೆ ಖುಷಿಯಿಂದ ಒಪ್ಪಿಕೊಂಡಿದ್ದಾರೆ' ಎಂದಿದ್ದಾರೆ.
Tamannaah Bhatia: ಪರಿಸರ ಪ್ರೇಮಿಯಾದ ತಮನ್ನಾ ಭಾಟಿಯಾ: ಕಾಡಿನಲ್ಲಿ ಸುತ್ತಾಡುತ್ತಿದ್ದಾರಾ ಮಿಲ್ಕಿ ಬ್ಯೂಟಿ..!
ಈ ಸಭೆಯಲ್ಲಿ ಶಿವರಾಜ್ ಕುಮಾರ್, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಸಾಧು ಕೋಕಿಲ, ಜಯಣ್ಣ, ಸೂರಪ್ಪ ಬಾಬು, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಸಾರಾ ಗೋವಿಂದು, ಕೆ ಮಂಜು, ಗುರುಕಿರಣ್, ಭೋಗೇಂದ್ರ, ಸುರೇಶ್ ಕುಮಾರ್, ಭಾಮ ಹರೀಶ್, ಎ ಗಣೇಶ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೋಟಿ ರಾಮು, ನಿರ್ಮಾಪಕ ಹಾಗೂ ವಿತರಕ ಚಿನ್ನೇಗೌಡ, ಕಾರ್ತಿಕ್ ಗೌಡ, ಛಾಯಾಗ್ರಾಹಕ ಸಂಘದ ಅದ್ಯಕ್ಷ ಜೆ ಜೆ ಕೃಷ್ಣ, ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ: Kareena Kapoor: ಬಾಲಿವುಡ್ ಬೇಬೊ ಕರೀನಾ ಕಪೂರ್ಗೆ ಬೇಕಾಗಿರುವುದು ಇಷ್ಟೇ ಅಂತೆ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ