HOME » NEWS » Coronavirus-latest-news » MEDICINES FROM COW MILK AND URINE TO TREAT COVID 19 PATIENTS AT GUJARAT GAUSHALA SNVS

ಗುಜರಾತ್​ನ ಗೋಶಾಲೆಯಲ್ಲಿ ಕೋವಿಡ್ ಸೆಂಟರ್; ರೋಗಿಗಳಿಗೆ ಹಾಲು, ಗಂಜಲದಿಂದ ಔಷಧ

ಉತ್ತರ ಗುಜರಾತ್​ನ ಹಳ್ಳಿಯೊಂದರಲ್ಲಿರುವ ಕೋವಿಡ್-19 ರೋಗಿಗಳ ಐಸೋಲೇಶನ್ ಸೆಂಟರ್​ನಲ್ಲಿ ಹಸುವಿನ ಹಾಲು, ಗಂಜಲದಿಂದ ಮಾಡಿದ ಔಷಧಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಇಂಗ್ಲೀಷ್ ಮೆಡಿಸಿನ್ ಅನ್ನೂ ಕೊಡಲಾಗುತ್ತಿದೆ.

news18
Updated:May 9, 2021, 12:28 PM IST
ಗುಜರಾತ್​ನ ಗೋಶಾಲೆಯಲ್ಲಿ ಕೋವಿಡ್ ಸೆಂಟರ್; ರೋಗಿಗಳಿಗೆ ಹಾಲು, ಗಂಜಲದಿಂದ ಔಷಧ
ದೇಸಿ ಹಸು
  • News18
  • Last Updated: May 9, 2021, 12:28 PM IST
  • Share this:
ಅಹ್ಮದಾಬಾದ್(ಮೇ 09): ಕೋವಿಡ್ ಸೋಂಕು ಉಪಶಮನಕ್ಕೆ ಹಸುವಿನ ಗಂಜಲ ಪರಿಣಾಮಕಾರಿ ಎಂಬ ಮಾತುಗಳನ್ನ ಕೆಲವು ಬಾರಿ ಕೇಳಿದ್ದೇವೆ. ಇದರ ಮಧ್ಯೆ, ಗುಜರಾತ್​ನ ಹಳ್ಳಿಯೊಂದರಲ್ಲಿ ಗೋಶಾಲೆಯಲ್ಲೇ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಉತ್ತರ ಗುಜರಾತ್​ನಲ್ಲಿರುವ ಬನಸ್​ಕಾಂತ ಜಿಲ್ಲೆಯ ದೀಸಾ (Deesa) ತಾಲೂಕಿನ ತೆಟೋಡಾ ಗ್ರಾಮದ ಗೋಶಾಲೆಯಲ್ಲಿ ಕೋವಿಡ್ ಕೇಂದ್ರ ತಲೆ ಎತ್ತಿದ್ದು, ಇದರಲ್ಲಿ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆ ವರದಿ ಮಾಡಿದೆ. ತೆಟೋಡಾ (Tetoda) ಗ್ರಾಮದ ರಾಜಾರಾಮ್ ಗೋಶಾಲಾ ಆಶ್ರಮದಲ್ಲಿ ಮೇ 5ರಂದು ಉದ್ಘಾಟಿಸಲಾಗಿರುವ ಕೋವಿಡ್ ಕೇರ್ ಸೆಂಟರ್​ನಲ್ಲಿ ಸಣ್ಣಪುಟ್ಟ ರೋಗಲಕ್ಷಣಗಳಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಇಲ್ಲಿ ಏಳು ರೋಗಿಗಳು ದಾಖಲಾಗಿದ್ದು, ಹಸುವಿನ ಶುದ್ಧ ಹಾಲು ಮತ್ತು ಗಂಜಲಗಳಿಂದ ತಯಾರಿಸಲಾದ ಔಷಧಗಳನ್ನ ಇವರ ಚಿಕಿತ್ಸೆಗೆ ನೀಡಲಾಗುತ್ತಿದೆ. ಹಾಗೆಯೇ, ಆಲೋಪಥಿ ಔಷಧಗಳನ್ನೂ ಅಗತ್ಯವಿದ್ದಲ್ಲಿ ಕೊಡಲಾಗುತ್ತಿದೆ.

“ರೋಗಲಕ್ಷಣಗಳ ತೀವ್ರತೆ ಕಡಿಮೆ ಇರುವ ಕೋವಿಡ್-19 ರೋಗಿಗಳಿಗೆ ಹಸುವಿನ ಹಾಲು, ತುಪ್ಪ ಮತ್ತು ಗಂಜಲದಿಂದ ತಯಾರಿಸಲಾದ ಎಂಟು ಆಯುರ್ವೇದ ಔಷಧಗಳನ್ನ ಇಲ್ಲಿ ನೀಡುತ್ತಿದ್ದೇವೆ” ಎಂದು ಗೋಧಾಮ್ ಮಹಾತೀರ್ಥ ಪಾಠಮೇದ ಎಂಬ ಗೋಶಾಲಾ ಘಟಕದ ಟ್ರಸ್ಟೀ ಆಗಿರುವ ಮೋಹನ್ ಜಾಧವ್ ಹೇಳಿದ್ದಾರೆಂದು ಇಂಡಿಯನ್ ಎಕ್ಸ್​ಪ್ರೆಸ್ ತಿಳಿಸಿದೆ.

ಇದನ್ನೂ ಓದಿ: ದೇಶದಲ್ಲಿ ಮತ್ತೆ 4 ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು; ಒಟ್ಟು ಸಂಖ್ಯೆ 2.23 ಕೋಟಿ

ಇಲ್ಲಿ ಏನೇನು ಔಷಧ ಲಭ್ಯ?: ಪಂಚಗವ್ಯ ಆಯುರ್ವೇದ ಥೆರಪಿಯನ್ನ ಇಲ್ಲಿ ಪ್ರಮುಖವಾಗಿ ಬಳಕೆ ಮಾಡಲಾಗುತ್ತದೆ. ದೇಸೀ ತಳಿಯ ಹಸುವಿನ ಗಂಜಲದಿಂದ ಮಾಡಿದ ಗೋ ತೀರ್ಥ ಇತ್ಯಾದಿ ಔಷಧಗಳನ್ನ ಕೆಮ್ಮು ನಿವಾರಣೆಗೆ ಬಳಸಲಾಗುತ್ತದೆ. ರೋಗ ನಿರೋಧಕ ಶಕ್ತಿಗಾಗಿ ಹಸು ಹಾಲಿನಿಂದ ಮಾಡಿದ ಚ್ಯವನಪ್ರಾಶವನ್ನ ರೋಗಿಗಳಿಗೆ ನೀಡಲಾಗುತ್ತದೆ.

ಗುಜರಾತ್ ಸರ್ಕಾರ ಸ್ಥಳೀಯ ಗ್ರಾಮಗಳ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್​ಗಳನ್ನ ಸ್ಥಾಪಿಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ತೆಟೋಡಾ ಗ್ರಾಮದಲ್ಲಿ ಈ ಐಸೋಲೇಶನ್ ಸೆಂಟರ್ ಸ್ಥಾಪಿಸಲಾಗಿದೆ. ಇಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಿದ್ದು, ಇಬ್ಬರು ಆಯುರ್ವೇದ ವೈದ್ಯರು ಮತ್ತು ಇಬ್ಬರು ಆಲೋಪಥಿ ವೈದ್ಯರು ಇಲ್ಲಿ ಇರುತ್ತಾರೆ.
Published by: Vijayasarthy SN
First published: May 9, 2021, 12:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories