news18-kannada Updated:May 24, 2020, 10:28 AM IST
ಸಾಂದರ್ಭಿಕ ಚಿತ್ರ
ಕಾರವಾರ(ಮೇ.24): ಕೊರೋನಾ ಸೋಂಕು ಬರದಂತೆ ತಂದೆ, ಮಗ ಇಬ್ಬರು ಆಯುರ್ವೇದ ಔಷಧಿ ಎಂದು ವಿಷ ಪೂರಿತ ಕಾಸರ್ಕನ ಚಕ್ಕೆಯ ಔಷಧಿ ಸೇವಿಸಿ ಮಗ ಸಾವನ್ನಪ್ಪಿದ್ದು, ತಂದೆ ಗಂಭೀರ ಅಸ್ವಸ್ಥರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ರಾಮನ ಬೈಲಿನಲ್ಲಿ ನಡೆದಿದೆ.
ಪ್ರಾನ್ಸಿಸ್ ರೇಘೋ( 42) ಸಾವು ಕಂಡ ವ್ಯಕ್ತಿಯಾಗಿದ್ದು, ನೆಕ್ಲಾಂ ಅಂಥೋನಿ( 70) ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಶಿರಸಿ ಸರ್ಕಾರಿ ಆಸ್ವತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ.
ತಂದೆ ಮಗ ಉಸಿರಾಟದ ತೊಂದರೆ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರು. ಈ ಲಕ್ಷಣದಿಂದ ಕೊರೋನಾ ಬರಬಹುದೆಂದು ಹೆದರಿ ತಾವೇ ಸ್ವತಹಃ ಯಾರದ್ದೋ ಮಾತು ಕೇಳಿ ವಿಷ ಪೂರಿತ ಕಾಸರ್ಕನ ಚಕ್ಕೆಯ ಔಷಧಿ ಮಾಡಿ ಸೇವಿಸಿದ್ದಾರೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತಿದ್ದಾರೆ. ಶಿರಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ :
ಚಿಕನ್ ಊಟ ಕೊಟ್ಟಿಲ್ಲವೆಂದು ಆಶಾ ಕಾರ್ಯಕರ್ತೆ ಮೇಲೆ ಮಾರಣಾಂತಿಕ ಹಲ್ಲೆ
ಇತ್ತಿಚಿಗೆ ಕೊರೋನಾ ಸೋಂಕಿನ ಬಗ್ಗೆ ಹಳ್ಳಿ ಭಾಗದಲ್ಲಿ ಮಾಹಿತಿ ಕೊರತೆ ಹೆಚ್ಚಾಗಿದ್ದು ಜನ ಗಿಡಮೂಲಿಕೆ ಔಷಧಿ ಕುಡಿಯಲು ಮುಂದಾಗುತ್ತಿದ್ದಾರೆ, ಇವತ್ತು ಕೂಡಾ ಇದೆ ಘಟನೆ ನಡೆದದ್ದು, ಓರ್ವನ ಪ್ರಾಣವೇ ಹೋಗಿದೆ.
First published:
May 24, 2020, 10:12 AM IST