ವೈದ್ಯಕೀಯ ಬೋಧಕ ಸಿಬ್ಬಂದಿ ವೇತನ ಹೆಚ್ಚಳ; ಆಶಾ ಕಾರ್ಯಕರ್ತೆಯರಿಗೆ ಪ್ರತಿತಿಂಗಳು 3 ಸಾವಿರ ಗೌರವಧನ; ಸಚಿವ ಕೆ.ಸುಧಾಕರ್

ರಾಜ್ಯದಲ್ಲಿ ಬಸ್ , ರೈಲು, ಆಟೋ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇನ್ನುಮುಂದೆ ಕಂಟೋನ್ಮೆಂಟ್ ಜೋನ್ ಮಾತ್ರ ಇರುತ್ತೆ. ಈಗ ವಲಯಗಳ ಹಂಚಿಕೆ ಇಲ್ಲ. ಕಂಟೋನ್ಮೆಂಟ್ ವಲಯ ಮಾತ್ರ ಇರುತ್ತವೆ. ರೆಡ್, ಆರೇಂಜ್ ಮತ್ತು ಗ್ರೀನ್ ಝೋನ್ ಗಳ ವರ್ಗೀಕರಣ ಕೈ ಬಿಡಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು. 

ಸಚಿವ ಡಾ.ಕೆ ಸುಧಾಕರ್​​

ಸಚಿವ ಡಾ.ಕೆ ಸುಧಾಕರ್​​

 • Share this:
  ಬೆಂಗಳೂರು: 2500 ವೈದ್ಯಕೀಯ ಶಿಕ್ಷಣ ಬೋಧಕ ಸಿಬ್ಬಂದಿಗೆ 7ನೇ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಾಗಿಲ್ಲ. ಈಗ ಈ ಸಿಬ್ಬಂದಿ ವೇತನ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಸಿಎಂ ಗೆ ಮನವಿ ಮಾಡಿದ್ವಿ. ಆರ್ಥಿಕ ಸಂಕಷ್ಟ ಇದ್ದರೂ ಸಹ ಸಿಎಂ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 137 ಕೋಟಿ ಹೊರೆಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಸುಧಾಕರ್, 1404 ಕೋಟಿ ರೂ. ವಾರ್ಷಿಕ ಸಂಬಳ ಇದೆ. ಈಗ ಸಂಬಳ ಹೆಚ್ಚು ಮಾಡಿರುವುದರಿಂದ 137 ಕೋಟಿ ಹೆಚ್ಚಾಗಲಿದೆ. ಕಳೆದ ಐದು ವರ್ಷಗಳಿಂದ ಸಂಬಳ ಹೆಚ್ಚಾಗಿಲ್ಲ. ಹಿಂದಿನ ಸರ್ಕಾರಗಳು ಸಹ ಈ ಬಗ್ಗೆ ಗಮನ ಹರಿಸಿಲ್ಲ. ಇದನ್ನು ಈ ಸಮಯದಲ್ಲಿ ಮುಖ್ಯಮಂತ್ರಿಗಳು ಇವರ ಸೇವೆ ಗಮನಿಸಿ, ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಬೋಧಕರು, ವೈದ್ಯಕೀಯ ವಿದ್ಯಾರ್ಥಿಗಳ ಸಂಬಳ ಹೆಚ್ವಳ ಮಾಡಲಾಗಿದೆ.

  ಅದೇ ರೀತಿ ವೈದ್ಯಕೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಹೆಚ್ಚಳ ಮಾಡಲಾಗಿದೆ. ಮೊದಲ ವರ್ಷದ ಪಿಜಿ ವಿದ್ಯಾರ್ಥಿಗಳಿಗೆ ಮೊದಲು 30 ಸಾವಿರ ಇತ್ತು. ಈಗ 45 ಸಾವಿರ ರೂ. ಮಾಡಲಾಗಿದೆ. 2ನೇ ವರ್ಷ ಪಿಜಿ ವಿದ್ಯಾರ್ಥಿಗಳಿಗೆ 35 ಸಾವಿರ ಇತ್ತು. ಈಗ 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮೂರನೇ ವರ್ಷದ ಪಿಜಿ ವಿದ್ಯಾರ್ಥಿಗಳಿಗೆ 55 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶೇ. 43 ವೇತನ ಹೆಚ್ಚಳ ಮಾಡಲಾಗಿದೆ. ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೊದಲ ವರ್ಷ 55 ಸಾವಿರ, 2ನೇ ವರ್ಷ 60 ಸಾವಿರ ಹಾಗೂ ಮೂರನೇ ವರ್ಷ 65 ಸಾವಿರ ಶಿಷ್ಯವೇತನವನ್ನು ಹೆಚ್ಚಳ ಮಾಡಲಾಗಿದೆ. ಸೀನಿಯರ್ ರೆಸಿಡೆಂಟ್ ಗೆ ಶೇ.45 ರಿಂದ 60 ಹೆಚ್ಚಳ ಮಾಡಲಾಗಿದೆ. ಇದರಿಂದ ಒಟ್ಟಾರೆಯಾಗಿ 256 ಕೋಟಿ ರೂ. ಹೆಚ್ಚುವರಿ ಹೊರೆಬೀಳಲಿದೆ. ಇದರಿಂದ 6 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಸಚಿವರು ತಿಳಿಸಿದರು.

  ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಮೂರು ಸಾವಿರ ಗೌರವಧನ ನೀಡಲು ನಿರ್ಧರಿಸಲಾಗಿದೆ. ಇದು ಸರ್ಕಾರಕ್ಕೆ ದೊಡ್ಡ ಸವಾಲಾದರೂ ಸಿಎಂ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಸಚಿವರು ತಿಳಿಸಿದರು.

  ಇಂದು ರಾಜ್ಯದಲ್ಲಿ 84 ಪ್ರಕರಣಗಳು ಹೆಚ್ಚಾಗಿದೆ. ಅದರೆ ಇವರೆಲ್ಲ ಅಂತರ ರಾಜ್ಯದಿಂದ ಬಂದವರು. ಬೇರೆ ಕಡೆ ಪ್ರಯಾಣ ಮಾಡಿದವರು. ಕರ್ನಾಟಕ ರಾಜ್ಯ ಮಾದರಿ ರಾಜ್ಯವಾಗಿದೆ. ಒಂದು ಲಕ್ಷ ಜನ ಹೊರ ರಾಜ್ಯಗಳಿಂದ ಬಂದಿದ್ದಾರೆ. ಇದನ್ನು ನೋಡಿದರೆ ನಮ್ಮ ಸಂಖ್ಯೆಗಳು ಕಡಿಮೆ. ನಮ್ಮ ರಾಜ್ಯದಲ್ಲಿ ಕೊರೋನಾ ಹತೋಟಿಯಲ್ಲಿದೆ. ಜನರು ಸಹ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಕಡೆಗೆ ಹೆಚ್ಚು ಗಮನ ಕೊಡಬೇಕು. ಎಂದ ಸಚಿವರು ಡೆಂಟಲ್ ಕ್ಲಿನಿಕ್ ಒಪನ್ ಮಾಡೋದು ಕೇಂದ್ರ ಸರ್ಕಾರದ ಗೈಡ್​ಲೈನ್ಸ್ ಮೇಲೆ ನಿಂತಿದೆ ಎಂದು ಹೇಳಿದರು.

  ಇದನ್ನು ಓದಿ: ಕರ್ನಾಟಕದಲ್ಲಿ ಜೂನ್ 18ಕ್ಕೆ ಪಿಯುಸಿ, ಜೂನ್ 25ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ

  ಸ್ಪಷ್ಟವಾದ ಮಾರ್ಗಸೂಚಿ, ತಂತ್ರಗಾರಿಕೆ ಮಾಡ್ತಾ ಇದ್ದೇವೆ. ಗ್ರಾಮೀಣ ಪ್ರದೇಶ ಮತ್ತು ನಗರಕ್ಕೆ ಪ್ರತ್ಯೇಕ ತಂತ್ರಗಾರಿಕೆ ಮಾಡಲಾಗುತ್ತಿದೆ. ಮುಂದಿನ ನಮ್ಮ ಕಾರ್ಯಪಡೆ ಸಭೆಯಲ್ಲಿ ಇದನ್ನು ಅನುಷ್ಠಾನಕ್ಕೆ ತರುತ್ತೇವೆ. ಕಂಟೋನ್ಮೆಂಟ್ ಜೋನ್ ಅನ್ನು ನೂರು ಮೀಟರ್ ಮಾಡ್ತೀವಿ. ಒಂದು ಕಟ್ಟಡದಲ್ಲಿ ಬಂದಾಗ ಅದರ ಸುತ್ತ ಮಾಡೋದಕ್ಕೆ ಚಿಂತನೆ ಮಾಡುತ್ತೇವೆ. ರಾಜ್ಯದಲ್ಲಿ ಬಸ್ , ರೈಲು, ಆಟೋ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇನ್ನುಮುಂದೆ ಕಂಟೋನ್ಮೆಂಟ್ ಜೋನ್ ಮಾತ್ರ ಇರುತ್ತೆ. ಈಗ ವಲಯಗಳ ಹಂಚಿಕೆ ಇಲ್ಲ. ಕಂಟೋನ್ಮೆಂಟ್ ವಲಯ ಮಾತ್ರ ಇರುತ್ತವೆ. ರೆಡ್, ಆರೇಂಜ್ ಮತ್ತು ಗ್ರೀನ್ ಝೋನ್ ಗಳ ವರ್ಗೀಕರಣ ಕೈ ಬಿಡಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
  First published: