ಕೊರೋನಾ ಎಫೆಕ್ಟ್​: ಮಾಂಸ ಪ್ರಿಯರಿಗೆ ಶಾಂಕಿಗ್​​ ಸುದ್ದಿ, ಮೀನಿನ ಬೆಲೆ ಭಾರೀ ದುಬಾರಿ

ಕರಾವಳಿಯಲ್ಲಿ ಮೀನಿನ ಉತ್ಪತ್ತಿಯೂ ಕಡಿಮೆಯಾಗಿರೋದ್ರಿಂದ ನೆರೆಯ ಗೋವಾ, ಆಂದ್ರಪ್ರದೇಶದಿಂದ ಮೀನುನ್ನು ತರಿಸಲಾಗುತ್ತಿದೆ‌‌. ಅವುಗಳಿಗೂ ಬೆಲೆ ಹೆಚ್ಚಾಗಿಯೇ ಇದೆ. ಇದರಿಂದ ಮಳೆಗಾಲದ ಚಳಿಗೆ, ಬಿಸಿ ಬಿಸಿ ಮಾಂಸ ಖಾದ್ಯವನ್ನು ಸವಿಯಬೇಕೆಂಬ ಮಾಂಸ ಪ್ರೀಯರ ಆಸೆಗೆ ಬೆಲೆ ಏರಿಕೆ‌ ಬ್ರೇಕ್ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಗಳೂರು(ಜೂ.10): ಮೀನು ಅಂದಾಕ್ಷಣ ಪಕ್ಕನೆ ನೆನಪಾಗೋದು ಕರಾವಳಿ. ಅದರಲ್ಲೂ ಮಂಗಳೂರು, ಉಡುಪಿ ಭಾಗಗಳಿಗೆ ತೆರಳುವ ಪ್ರವಾಸಿಗರು ಮೀನಿನ ತರಹೇವಾರಿ ಖಾದ್ಯದ ರುಚಿ ಸವಿಯದೆ ಹಿಂದಿರುಗುವುದೇ ಇಲ್ಲ. ಆದ್ರೆ ಇನ್ನು ನಿಮ್ಮ ಆಸೆಗಳಿಗೆ ಸ್ವಲ್ಪ ಕಡಿವಾಣ ಹಾಕಬೇಕಾಗಿದೆ. ಯಾಕೆಂದರೆ ದಕ್ಷಿಣಕನ್ನಡ ಉಡುಪಿ ಜಿಲ್ಲೆಯಲ್ಲಿ ಮೀನಿನ ದರ ಮೂರು ಪಟ್ಟು ಹೆಚ್ಚಳವಾಗಿದೆ.

ಹೌದು, ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿರುವ ಕಾರಣ ಇಲ್ಲಿನ ಮೀನುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಸಣ್ಣ ಬೋಟುಗಳು ಮೀನುಗಾರಿಕೆ ನಡೆಸಿ ಬರುತ್ತಿದ್ದು ಮೀನುಗಳು ದುಬಾರಿಯಾಗುತ್ತಿದೆ. ತಿಂಗಳಿಗೊಮ್ಮೆ ಹಿಂದೆ 150 ರೂಗೆ ಸಿಗುತ್ತಿದ್ದ ಸಣ್ಣಪುಟ್ಟ ಮೀನುಗಳಿಗೆ ಈಗ 500 ರೂ ಇದೆ. 250 ರೂ ಇದ್ದ ಬಂಗುಡೆ ಮೀನು ಕೆ.ಜಿಗೆ 400 ರೂಪಾಯಿ ಆಗಿದೆ.

ಅದರಲ್ಲೂ ಬಲು ರುಚಿಯ  ಅಂಜಲ್ ಮೀನಿನ ದರ  600ರಿಂದ 1000 ರೂಪಾಯಿ, ಮಾಂಜಿ ಮೀನಿನ ದರ 750ರಿಂದ 1100 ರೂಗೆ ಏರಿಕೆಯಾಗಿದೆ. ಇದು ಮಾಂಸ ಪ್ರಿಯರಿಗೆ ಭಾರೀ ನಿರಾಸೆ ತಂದಿದೆ. ಈಗಾಗಲೇ ಕೋಳಿ ದರ 300 ರೂಪಾಯಿ ಗಡಿ ಮುಟ್ಟಿದೆ. ಮಟರ್ ದರ 800 ರಿಂದ‌ 1000 ರೂಪಾಯಿ ಯವರೆಗೆ ಏರಿಕೆಯಾಗಿದೆ. ಹಾಗಾಗಿ ಮಾಂಸ ಪ್ರೀಯರಿಗೆ ದರ ಏರಿಕೆ ಭಾರೀ ಶಾಕ್ ನೀಡಿದೆ.

ಕರಾವಳಿಯಲ್ಲಿ ಮೀನಿನ ಉತ್ಪತ್ತಿಯೂ ಕಡಿಮೆಯಾಗಿರೋದ್ರಿಂದ ನೆರೆಯ ಗೋವಾ, ಆಂದ್ರಪ್ರದೇಶದಿಂದ ಮೀನುನ್ನು ತರಿಸಲಾಗುತ್ತಿದೆ‌‌. ಅವುಗಳಿಗೂ ಬೆಲೆ ಹೆಚ್ಚಾಗಿಯೇ ಇದೆ. ಇದರಿಂದ ಮಳೆಗಾಲದ ಚಳಿಗೆ, ಬಿಸಿ ಬಿಸಿ ಮಾಂಸ ಖಾದ್ಯವನ್ನು ಸವಿಯಬೇಕೆಂಬ ಮಾಂಸ ಪ್ರೀಯರ ಆಸೆಗೆ ಬೆಲೆ ಏರಿಕೆ‌ ಬ್ರೇಕ್ ನೀಡಿದೆ.

ಇದನ್ನೂ ಓದಿ: ದೆಹಲಿ ಗಲಭೆಯ ಚಾರ್ಚ್‌ಶೀಟ್‌ ಸಲ್ಲಿಸಿದ ಪೊಲೀಸರು; ದ್ವೇಷ ಭಾಷಣ ಮಾಡಿದ್ದ ಬಿಜೆಪಿ ನಾಯಕರ ಹೆಸರು ನಾಪತ್ತೆ!

ಸದ್ಯ ಮಂಗಳೂರು ಮಾರುಕಟ್ಟೆಯಲ್ಲಿ ಸ್ಥಳೀಯ ಮೀನಿನ ಜೊತೆ ಹೊರರಾಜ್ಯದ ಮೀನುಗಳನ್ನು ಮಾರಾಟ ಮಾಡಲಾಗುತ್ತಿದೆ. ಆದ್ರೆ ಜನ ಪ್ರಮುಖ ಮಾರುಕಟ್ಟೆಯಲ್ಲಿ ಖರೀದಿಸುವ ಬದಲು ಸ್ಥಳೀಯವಾಗಿಯೆ ಖರೀದಿಸುತ್ತಿದ್ದಾರೆ. ಈ ನಡುವೆ ಆನ್ಲೈನ್‌ನಲ್ಲಿಯೂ ಮೀನು ಮಾರಾಟ ಶುರುವಾಗಿದೆ. ಇದರಿಂದ ಮಾರುಕಟ್ಟೆ ವ್ಯಾಪಾರಿಗಳಿಗೆ ಮೀನು ವ್ಯಾಪಾರ ಕಡಿಮೆಯಾಗಿದೆ.

ಒಂದು ಕಡೆಯಿಂದ ಮೀನಿನ ಬೆಲೆ ಹೆಚ್ಚಾಗಿದ್ದು, ಇನ್ನೊಂದು ಕಡೆ ವ್ಯಾಪಾರದ ಸಮಸ್ಯೆ ಬಂದೆರಗಿರುವುದರಿಂದ ಚಿಲ್ಲರೆ ವ್ಯಾಪಾರಿಗಳಿಗೂ ಸಂಕಷ್ಟವುಂಟಾಗಿದೆ. ಇನ್ನು 6 ದಿನಗಳಲ್ಲಿ ಮೀನುಗಾರಿಕಾ ರಜಾ ಅವಧಿ ಆರಂಭವಾಗಲಿದೆ. ಆ ಬಳಿಕ ಸಂಪೂರ್ಣವಾಗಿ ಮೀನುಗಾರಿಕೆ ಸ್ಟಾಪ್ ಆಗಲಿದೆ. ಹೀಗಾಗಿ ಮೀನುಗಾರಿಕೆ ರಜಾ ಅವಧಿ ಮುಗಿದು ಆಗಸ್ಟ್‌‌ನಲ್ಲಿ ಮೀನುಗಾರಿಕೆ ಆರಂಭವಾಗುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ.

ಅದರಲ್ಲೂ ಕರಾವಳಿಯ ಪ್ರಮುಖ ಆದಾಯದ ಮೂಲ ಮೀನುಗಾರಿಕೆ. ಮೀನುಗಾರಿಕೆಯಿಂದ ಸಾವಿರಾರು ಕುಟುಂಬಗಳು ಜೀವನ ನಡೆಸುತಿತ್ತು. ಆದರೆ ಲಾಕ್ ಡೌನ್ ಸಂಧರ್ಭದಲ್ಲಿ ಮೀನುಗಾರಿಕೆ ಸ್ಥಗಿತಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಆದರೆ ಲಾಕ್ ಡೌನ್ ಮುಗಿದ ಬಳಿಕ ಮೀನುಗಾರಿಕೆ ಮತ್ತೆ ಆರಂಭವಾಗಿದೆ.

ಜೂನ್ 15 ರವರೆಗೆ ಮೀನುಗಾರಿಕೆ ನಡೆಸಲು ಸರ್ಕಾರ ಅವಕಾಶ ನೀಡಿದೆ. ಆದರೆ ಶೇ.95ರಷ್ಟು ಬೋಟ್​ಗಳು ಈಗಾಗಲೇ ದಡದಲ್ಲೇ ಲಂಗರು ಹಾಕಿದೆ. ಇದರ ಪರಿಣಾಮ ಮೀನಿನ ರೇಟು ಗಗನಮುಖಿಯಾಗಿದೆ. ಮೀನಿನ ದರ ಮೂರುಪಟ್ಟು ಹೆಚ್ಚಳವಾಗಿದ್ದು ಮಾಂಸ ಪ್ರಿಯರ ಜೇಬಿಗೆ ಕತ್ತರಿ ಬೀಳಲಾರಂಭಿಸಿದೆ. ಈ ನಡುವೆ ಸರ್ಕಾರ ಹೊಟೇಲ್‌ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳ ತೆರವಿಗೂ ಸರ್ಕಾರ ಒಪ್ಪಿಗೆ ನೀಡಿದ್ದು, ಮಾಂಸಹಾರಿ ಹೋಟೆಲ್‌ಗಳು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಆಗಿವೆ. ಬಳಿಕ ಮೀನು ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಅಗಸ್ಟ್ ತನಕ ಮೀನುಗಾರಿಕಾ ಋತು ಗೆ ರಜೆ ಇರೋದ್ರಿಂದ ಇನ್ನು ಮೀನುಗಾರರು ಸಮುದ್ರಕ್ಕೆ ಟ್ರಾಲ್,ಪರ್ಸಿನ್ ಬೋಟ್​​ಗಳನ್ನು ಇಳಿಸುವಂತಿಲ್ಲ. ಹಾಗಾಗಿ ಮೀನಿಗೆ ದರ ದುಪ್ಪಟ್ಟಾಗಿದೆ. ಈ ಬಾರಿ ಲಾಕ್ ಡೌನ್ ಸಂಧರ್ಭದಲ್ಲಿ ಮೀನುಗಾರಿಕೆಗೆ ನಿಷೇಧವಿದ್ದ ಕಾರಣ, ಮಳೆಗಾಲಕ್ಕೆಂದು ಕೋಲ್ಡ್ ಸ್ಟೋರೇಜ್ ಗಳಲ್ಲಿ ತೆಗೆದಿರಿಸಿದ್ದ ಮೀನನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಸೇಲ್ ಮಾಡಲಾಗಿದೆ. ಹಾಗಾಗಿ ಸ್ಥಳೀಯ ಮೀನುಗಾರರು ಸಣ್ಣ ನಾಡದೋಣಿಗಳನ್ನು ಹಿಡಿದು ಕಡಲ ತಡಿಯಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಮೀನುಗಳ ಲಭ್ಯತೆ ಕಡಿಮೆ ಇರೋದ್ರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ.
First published: