HOME » NEWS » Coronavirus-latest-news » MAY HAVE TO ALLOW LIQUOR SALES TO GET REVENUES SAYS MINISTER H NAGESH SNVS

ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಒಲವು; ಆದರೆ, ಪ್ರಧಾನಿ ಸೂಚನೆಯೇ ಅಂತಿಮ ಎಂದ ಅಬಕಾರಿ ಸಚಿವ

ಏನೇ ಆದರೂ ಲಾಕ್ ಡೌನ್ ಮುಗಿಯೊವರೆಗೆ ಮದ್ಯ ಮಾರಾಟ ಇಲ್ಲ ಎಂದು ಸಚಿವರು ಪುನರುಚ್ಚರಿಸಿದ್ದಾರೆ. ಆದರೆ, ರಾಜ್ಯದ ಖಜಾನೆಯೇ ಖಾಲಿಯಾಗಿದೆ ಎನ್ನುವ ಮೂಲಕ ಸಚಿವ ನಾಗೇಶ್ ಪರೋಕ್ಷವಾಗಿ ಮದ್ಯ ಮಾರಾಟ ಅನಿವಾರ್ಯ ಎಂದೂ ಹೇಳಿದ್ದಾರೆ.

news18-kannada
Updated:April 28, 2020, 6:50 PM IST
ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಒಲವು; ಆದರೆ, ಪ್ರಧಾನಿ ಸೂಚನೆಯೇ ಅಂತಿಮ ಎಂದ ಅಬಕಾರಿ ಸಚಿವ
ಅಬಕಾರಿ ಸಚಿವ ಹೆಚ್. ನಾಗೇಶ್
  • Share this:
ಕೋಲಾರ: ಕೊರೊನಾ ಮಹಾಮಾರಿ ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದ್ದು, ಮೇ 3 ರ ನಂತರವೂ ಲಾಕ್ ಡೌನ್ ಮುಂದುವರೆಯುವ ಸಾದ್ಯತೆಗಳೇ ಹೆಚ್ಚಿದೆ. ಈ ವೇಳೆ ಮದ್ಯ ಮಾರಾಟ ವಿಚಾರ ಸಾಕಷ್ಟು ಚರ್ಚೆಗೆ ಬಂದಿದ್ದು ಮೇ 3 ವರೆಗೆ ಮದ್ಯ ಮಾರಾಟವಿಲ್ಲ ಎಂದು ಖುದ್ದು ಅಬಕಾರಿ ಆಯುಕ್ತರೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಸೋಮವಾರ ಎಲ್ಲಾ ರಾಜ್ಯಗಳ ಸಿಎಂ ಜೊತೆಗೆ ಮೋದಿಯವರು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ವೇಳೆ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಮದ್ಯ ಮಾರಾಟಕ್ಕೆ ಅನುಮತಿ ಕೇಳಿದ್ದಾರೆ ಎನ್ನಲಾಗಿದೆ. ಇವತ್ತು ಸಿದ್ದರಾಮಯ್ಯ ಕೂಡ ಹಸಿರು ವಲಯದ ಪ್ರದೇಶಗಳಲ್ಲಿ ಮದ್ಯ ಮಾರಾಟ ಮಾಡಿ ಆರ್ಥಿಕ ಸಮತೋಲನ ಸಾಧಿಸಬೇಕೆಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

ಮದ್ಯ ಮಾರಾಟದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ ರಾಜ್ಯಗಳಲ್ಲಿ ಆರ್ಥಿಕ ಪರಿಸ್ತಿತಿ ಬಲಪಡಿಸಲು ಮದ್ಯ ಮಾರಾಟಕ್ಕೆ ಹಲವು ರಾಜ್ಯಗಳು ಕಾಯುತ್ತಿರುವುದು ತಿಳಿದಿರುವ ವಿಷಯ. ಈ ಕುರಿತು ಕುರಿತು ಕೋಲಾರದಲ್ಲಿ ಅಬಕಾರಿ ಸಚಿವ ಎಚ್. ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನ ಮಂತ್ರಿ ಜೊತೆ ನಡೆದ ಸಭೆಯಲ್ಲಿ ಏನು ತೀರ್ಮಾನ ಆಗಿದೆ ಎಂಬುದು ತಿಳಿದಿಲ್ಲ. ಮೇ 3 ರಂದು ಸ್ಪಷ್ಟವಾಗಲಿದೆ. ಕೇಂದ್ರ ಸರ್ಕಾರದ ನಿರ್ಧಾನ ಆಧರಿಸಿ ರಾಜ್ಯದ ಸಿಎಂ ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ದವಾಗಿರುವುದಾಗಿ ಅಬಕಾರಿ ಸಚಿವರು ಹೇಳಿದ್ದಾರೆ.

ರಾಜ್ಯದಲ್ಲಿ ಗ್ರೀನ್ ಜೋನ್ ಜಿಲ್ಲೆಯಲ್ಲಿ ವಿನಾಯಿತಿ ಕೊಡುವ ಬಗ್ಗೆ ಮಾಹಿತಿ ಇತ್ತು. ಲಾಕ್ ಡೌನ್ ನಂತರ ವಿನಾಯಿತಿ ನೀಡಲು ನಾನು ಸಿಎಂ ಗೆ ಮನವಿ ಮಾಡಿದ್ದೇನೆ. ಈ ವೇಳೆ ಖಜಾನೆ ಸಹ ಖಾಲಿಯಾಗಿದೆ. ಸಂಬಳ ಕೊಡೋದಕ್ಕೂ ಹಣ ಬೇಕಾಗಿದೆ ಎಂದು ರಾಜ್ಯದ ಆರ್ಥಿಕ ಸಂಕಷ್ಟದ ಚಿತ್ರಣವನ್ನು ಎಚ್ ನಾಗೇಶ್ ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: ಹಸಿರು ವಲಯದ ಜಿಲ್ಲೆಗಳಲ್ಲಿ ಮದ್ಯದಂಗಡಿ ತೆರೆಯಿರಿ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ

ಅಬಕಾರಿ ಸಚಿವರ ತವರಲ್ಲಿ ಕಳ್ಳಬಟ್ಟಿ ದಂಧೆ ಜೋರು: 

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಬಂದ್ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಅಬಕಾರಿ ಸಚಿವ ಎಚ್ ನಾಗೇಶ್ ಉಸ್ತುವಾರಿ ಜಿಲ್ಲೆ ಕೋಲಾರದಲ್ಲಿ ಮಾತ್ರ ಕಳ್ಳಭಟ್ಟಿ ದಂಧೆ ಜೋರಾಗಿಯೇ ಸದ್ದು ಮಾಡುತ್ತಿದೆ. ಅಬಕಾರಿ ಅಧಿಕಾರಿಗಳು ಇಲ್ಲಿಯವರೆಗೆ ಕೋಲಾರದಲ್ಲಿ 65 ಮಂದಿಯನ್ನು ಬಂಧಿಸಿದ್ದಾರೆ. ಕೆಲ ಬಾರ್​ಗಳಿಂದ ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ 15 ಬಾರ್​ಗಳಲ್ಲಿ ಮದ್ಯ ದಾಸ್ತಾನು ಪರಿಶೀಲನೆ ನಡೆಸಿದ ವೇಳೆ, ಏರು ಪೇರು ಕಂಡುಬಂದಿದೆ.

ಇದೇ ವೇಳೆ, ಏನೇ ಆದರೂ ಲಾಕ್ ಡೌನ್ ಮುಗಿಯೊವರೆಗೆ ಮದ್ಯ ಮಾರಾಟ ಇಲ್ಲ ಎಂದು ಸಚಿವರು ಪುನರುಚ್ಚರಿಸಿದ್ದಾರೆ. ಆದರೆ, ರಾಜ್ಯದ ಖಜಾನೆಯೇ ಖಾಲಿಯಾಗಿದೆ ಎನ್ನುವ ಮೂಲಕ ಸಚಿವ ನಾಗೇಶ್ ಪರೋಕ್ಷವಾಗಿ ಮದ್ಯ ಮಾರಾಟ ಅನಿವಾರ್ಯ ಎಂದೂ ಹೇಳಿದ್ದಾರೆ. ಒಟ್ಟಿನಲ್ಲಿ ಮೇ 3ರ ನಂತರ ಕೆಲ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಸಾಧ್ಯತೆ ಅಧಿಕವೆನ್ನಲಾಗುತ್ತಿದೆ. ಇದೆಲ್ಲವೂ ಪ್ರಧಾನಿ ಮೋದಿ ಅವರ ಸೂಚನೆಯ ಮೇಲೆ ಅವಲಂಬಿಸಿದೆ.ವರದಿ: ರಘುರಾಜ್

Youtube Video
First published: April 28, 2020, 6:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories