Vaccine Campaign| ರಾಜ್ಯಾದ್ಯಂತ ಇಂದು ಬೃಹತ್ ಲಸಿಕಾ ಅಭಿಯಾನ; 27,666 ಲಸಿಕಾ ಕೇಂದ್ರ, 34 ಲಕ್ಷ ಡೋಸ್ ಮೀಸಲು

ರಾಜ್ಯದಲ್ಲಿ ಶೇ.73 ರಷ್ಟು ಮೊದಲ ಡೋಸ್ ಹಾಗೂ ಶೇ.27 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಹೀಗಾಗಿ ಶೇ.100 ರಷ್ಟು ಲಸಿಕೆ ಗುರಿಯನ್ನು ಯಶಸ್ವಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಲಸಿಕೆ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಬೆಂಗಳೂರು (ಸೆಪ್ಟೆಂಬರ್​ 17); ಕೊರೋನಾ ಎರಡನೇಯ (Corona 2nd Wave) ಅಲೆಗೆ ಈಗಾಗಲೇ ತತ್ತರಿಸಿದ್ದ ದೇಶ ಮತ್ತು ರಾಜ್ಯ ಈಗ ಮೆಲ್ಲನೆ ಸುಧಾರಿಸಿಕೊಳ್ಳುತ್ತಿದೆ. ಆದರೆ, ಮೂರನೇ ಅಲೆ (Corona 3rd Wave) ಆರಂಭ ವಾಗಲಿದೆ ಎಂಬ ಎಚ್ಚರಿಕೆ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಎಲ್ಲರಿಗೂ ಲಸಿಕೆ ನೀಡುವುದೊಂದೆ ಈ ಸೋಂಕನ್ನು ನಿವಾರಿಸಲು ಇರುವ ಏಕೈಕ ದಾರಿ. ಇದೇ ಕಾರಣಕ್ಕೆ ಕಳೆದ ಮೇ ತಿಂಗಳಿನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲರಿಗೂ ಉಚಿತ ಲಸಿಕೆ ನೀಡಲು ಮುಂದಾಗಿದೆ. ಆದರೂ, ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಇಂದು ಬೃಹತ್ ಲಸಿಕಾ ಅಭಿಯಾನವನ್ನು (Vaccine Campaign) ಕೈಗೊಂಡಿದೆ. ಈ ಅಭಿಯಾನಕ್ಕೆ 27,666 ಲಸಿಕಾ ಕೇಂದ್ರಗಳನ್ನು ಸಿದ್ದಪಡಿಸಿದ್ದು, ಮಹಾ ಲಸಿಕಾ ಅಭಿಯಾನಕ್ಕೆ‌ 34 ಲಕ್ಷ ಡೋಸ್ ಮೀಸಲು ಇರಿಸಲಾಗಿದೆ ಎಂದು ತಿಳಿದುಬಂದಿದೆ.

    ಲಸಿಕಾ ಅಭಿಯಾನಕ್ಕೆ ರಾಜ್ಯಾದ್ಯಂತ 12,700 ಸರ್ಕಾರಿ ಲಸಿಕಾ ಕೇಂದ್ರ, 300 ಖಾಸಗಿ ಕೇಂದ್ರಗಳು ಹಾಗೂ 14,666 ವಿಶೇಷ ಕ್ಯಾಂಪ್ ಗಳನ್ನು ಸಿದ್ದಪಡಿಸಿದ್ದು, ಈ ಎಲ್ಲಾ ಕೇಂದ್ರಗಳಿಗೆ 34 ಲಕ್ಷ ಡೋಸ್​ ಗಳನ್ನು ಹಂಚಿಕೆ ಮಾಡಲಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 4.8 ಕೋಟಿ‌ ಡೋಸ್ ಹಂಚಿಕೆಯಾಗಿದೆ.

    ರಾಜ್ಯದಲ್ಲಿ ಶೇ.73 ರಷ್ಟು ಮೊದಲ ಡೋಸ್ ಹಾಗೂ ಶೇ.27 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಹೀಗಾಗಿ ಶೇ.100 ರಷ್ಟು ಲಸಿಕೆ ಗುರಿಯನ್ನು ಯಶಸ್ವಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಲಸಿಕೆ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

    ಬೆಂಗಳೂರಿನಲ್ಲಿ ಅಭಿಯಾನದ ವಿವರ!

    ಇಂದಿನ ಬೃಹತ್ ಲಸಿಕೆ ಅಭಿಯಾನದಲ್ಲಿ ಬೆಂಗಳೂರಿಗೆ 5 ಲಕ್ಷ ಲಸಿಕೆ ಹಂಚುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಒಂದು ವಾರ್ಡ್ ನಲ್ಲಿ 10 ಲಸಿಕೆ ಕೇಂದ್ರ ಓಪನ್ ಮಾಡಲಾಗಿದ್ದು, ನಗರದ ಖಾಸಗಿ ಆಸ್ಪತ್ರೆ ಕೂಡ ದೊಡ್ಡ ಮಟ್ಟದಲ್ಲಿ ಲಸಿಕೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.

    ನಗರದಾದ್ಯಂತ ಖಾಸಗಿ ಆಸ್ಪತ್ರೆ ಯಲ್ಲಿ ಬಿಬಿಎಂಪಿ ಬ್ಯಾನರ್ ನಲ್ಲಿ ಲಸಿಕೆ ಅಭಿಯಾನ ನಡೆಯಲಿದ್ದು, ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ - 12 ಗಂಟೆಗಳ ಕಾಲ ಲಸಿಕೆ ನೀಡಲಾಗು ವುದು. ಬೆಂಗಳೂರಿನಲ್ಲಿ ಒಟ್ಟಾರೆ 2178 ಲಸಿಕೆ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಕೋವ್ಯಾಕ್ಸಿನ್ - 1 ಲಕ್ಷ ಡೋಸ್, ಕೋವಿಶೀಲ್ಡ್ - 4 ಲಕ್ಷ ಡೋಸ್ ಸೇರಿ ಒಟ್ಟು 5 ಲಕ್ಷ ಡೋಸ್ ಮೀಸಲು ಇರಿಸಲಾಗಿದೆ. ಕೂಲಿ ಕಾರ್ಮಿಕರು, ವಲಸಿಗರು ಹಾಗೂ ಆದ್ಯತೆ ಮೇರೆಗೆ ಬಂದು ಲಸಿಕೆ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ತಿಳಿಸಿದೆ.

    ಇದನ್ನೂ ಓದಿ: Covid: ಇನ್ನು 6 ತಿಂಗಳಲ್ಲಿ ಕೊರೋನಾ ಎಂಡೆಮಿಕ್​ ಆಗಲಿದೆ ಎಂದ ಎನ್‌ಸಿಡಿಸಿ ನಿರ್ದೇಶಕ ಸುಜೀತ್ ಸಿಂಗ್

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: