CoronaVirus: ಹೈದರಾಬಾದ್‌ನಲ್ಲಿ 50 ಮಂದಿ ಕೊರೋನಾ ರೋಗಿಗಳ ಶವದ ಸಾಮೂಹಿಕ ಅಂತ್ಯ ಸಂಸ್ಕಾರ; ಭುಗಿಲೆದ್ದ ಜನಾಕ್ರೋಶ

ಕೊರೋನಾ ವೈರಸ್‌ನಿಂದ ಮೃತಪಟ್ಟವರ ಶವದ ಅಂತ್ಯಕ್ರಿಯೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರ್ಕಾರಗಳಿಗೂ ಭಾರೀ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಬೇಕಾಬಿಟ್ಟಿ ಅಂತ್ಯಕ್ರಿಯೆ ನಡೆಸುವ ವಿಡಿಯೋಗಳು ಹಲವೆಡೆ ವೈರಲ್ ಆಗಿದ್ದು, ಜನಾಕ್ರೋಶಕ್ಕೂ ಕಾರಣವಾಗಿದೆ. ಈ ನಡುವೆ ಹೈದರಾಬಾದ್‌ನಲ್ಲೂ ಅಂತಹದ್ದೇ ಕೃತ್ಯ ನಡೆದಿರುವುದು ಸಾಮಾನ್ಯವಾಗಿ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗುತ್ತಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಹೈದರಾಬಾದ್‌ (ಜುಲೈ 24); ಸಾರಿಗೆ ವ್ಯವಸ್ಥೆ ಹಾಗೂ ಮಾನವ ಶಕ್ತಿಯ ಕೊರತೆಯಿಂದಾಗಿ ಕನಿಷ್ಠ 50 ಮಂದಿ ಮೃತ ಕೋವಿಡ್ -19 ರೋಗಿಗಳ ಶವಗಳನ್ನು ಹೈದರಾಬಾದ್‌ನಲ್ಲಿ ಸಾಮೂಹಿಕವಾಗಿ ದಹನ ಮಾಡಲಾಗಿದೆ. ಇಲ್ಲಿನ ಎರ್ರಗಡ್ಡ ಶಾವಾಗಾರದಲ್ಲಿ ಇಂತಹ ಕೃತ್ಯ ನಡೆದಿದ್ದು, ಶವಗಳ ಸಾಮೂಹಿಕ ದಹನದ ವಿಡಿಯೋ ಇದೀಗ ದೇಶವ್ಯಾಪಿ ವೈರಲ್ ಆಗುತ್ತಿದೆ. ಪರಿಣಾಮ ಸರ್ಕಾರದ ನಡೆಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಕುರಿತು ಸ್ಪಷ್ಟನೆ ನೀಡಿರುವ ತೆಲಂಗಾಣ ಆರೋಗ್ಯ ಇಲಾಖೆ, “ಈ ಮೃತ ದೇಹಗಳು ಒಂದೇ ದಿನ ಸಾವನ್ನಪ್ಪಿದವರದ್ದಲ್ಲ. ಕಳೆದ ಮೂರು ದಿನಗಳಿಂದ ಮೃತಪಟ್ಟವರ ದೇಹವನ್ನು ಒಟ್ಟಾಗಿ ಅಂತ್ಯಕ್ರಿಯೆ ಮಾಡಲಾಗಿದೆ” ಎಂದು ತಿಳಿಸಿದೆ.

ಕೊರೋನಾ ವೈರಸ್‌ನಿಂದ ಮೃತಪಟ್ಟವರ ಶವದ ಅಂತ್ಯಕ್ರಿಯೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರ್ಕಾರಗಳಿಗೂ ಭಾರೀ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಬೇಕಾಬಿಟ್ಟಿ ಅಂತ್ಯಕ್ರಿಯೆ ನಡೆಸುವ ವಿಡಿಯೋಗಳು ಹಲವೆಡೆ ವೈರಲ್ ಆಗಿದ್ದು, ಜನಾಕ್ರೋಶಕ್ಕೂ ಕಾರಣವಾಗಿದೆ. ಈ ನಡುವೆ ಹೈದರಾಬಾದ್‌ನಲ್ಲೂ ಅಂತಹದ್ದೇ ಕೃತ್ಯ ನಡೆದಿರುವುದು ಸಾಮಾನ್ಯವಾಗಿ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Rajasthan Political Crisis; ನಮಗೆ ಪೂರ್ಣ ಬಹುಮತವಿದೆ, ಶೀಘ್ರದಲ್ಲೇ ಅಧಿವೇಶನವನ್ನು ಕರೆಯಲಾಗುವುದು; ಸಿಎಂ ಅಶೋಕ್‌ ಗೆಹ್ಲೋಟ್‌ ವಿಶ್ವಾಸ

ಈ ನಡುವೆ ವಿಶ್ವದಾದ್ಯಂತ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 15 ದಶ ಲಕ್ಷಕ್ಕೂ ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಕೊರೋನಾದಿಂದಾಗಿ ಈವರೆಗೆ 6,20,000 ಜನ ಮೃತಪಟ್ಟಿದ್ದಾರೆ. ಮಾರಣಾಂತಿಕ ಕೊರೋನಾ ವೈರಸ್ ಪ್ರಸ್ತುತ ಎಲ್ಲಾ ದೇಶಗಳಲ್ಲೂ ವ್ಯಾಪಿಸಿದೆ. ಆದರೆ, 2/3 ರಷ್ಟು ಪ್ರಕರಣಗಳು 10 ದೇಶಗಳಲ್ಲಿ ದಾಖಲಾಗುತ್ತಿದ್ದರೆ, ಒಟ್ಟು ಸೋಂಕಿತರ ಪೈಕಿ ಅರ್ಧದಷ್ಟು ಜನ ಕೇವಲ 3 ದೇಶಗಳಲ್ಲೇ ಇದ್ದಾರೆ. ಈ ಪೈಕಿ ಭಾರತವೂ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
Published by:MAshok Kumar
First published: