ತಮಿಳುನಾಡಿನಲ್ಲಿ ನಾಯಿಯ ಹೊಟ್ಟೆಯಲ್ಲಿ ಸಿಕ್ತು ಮಾಸ್ಕ್‌: ಕೋವಿಡ್‌-19 ತ್ಯಾಜ್ಯದ ಅಪಾಯಕಾರಿ ಸಮಸ್ಯೆ..!

ಇತ್ತೀಚೆಗೆ ತಮಿಳುನಾಡಿನ ಪಶುವೈದ್ಯರ ತಂಡವು ಸೈಬೀರಿಯನ್ ಹಸ್ಕಿ ತಳಿಯ ನಾಯಿಯ ಹೊಟ್ಟೆಯಿಂದ ಮಾಸ್ಕ್‌ ಅನ್ನು ತೆಗೆದಿದೆ. ಆ ನಾಯಿಯ ಹೊಟ್ಟೆಯಿಂದ ಮಾಸ್ಕ್‌ ಅನ್ನು ತೆಗೆಯುತ್ತಿರುವ  ವಿಡಿಯೋವೊಂದು ವೈರಲ್ ಆಗಿದೆ.

ನಾಯಿಯ ಹೊಟ್ಟೆಯಲ್ಲಿ ಸಿಕ್ತು ಫೇಸ್ ಮಾಸ್ಕ್​

ನಾಯಿಯ ಹೊಟ್ಟೆಯಲ್ಲಿ ಸಿಕ್ತು ಫೇಸ್ ಮಾಸ್ಕ್​

  • Share this:
ದೇಶದಲ್ಲಿ ಲಕ್ಷಾಂತರ ಜನರನ್ನು ಬಲಿ ಪಡೆದ ಕೊರೋನಾ ವಿರುದ್ಧ ಹೋರಾಡಲು ಮಾಸ್ಕ್‌ಗಳು ಹಾಗೂ ಪಿಪಿಇ ಕಿಟ್‌ಗಳು ಅನಿವಾರ್ಯವಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಇವು ನಮ್ಮ ದೈನಂದಿನ ಜೀವನದ  ಒಂದು ಭಾಗವಾಗಿ ಮಾರ್ಪಟ್ಟಿವೆ. ಕೋವಿಡ್ ಪ್ರಕರಣಗಳಲ್ಲಿ ತೀವ್ರವಾಗಿ ಹೆಚ್ಚಳ ಕಂಡ ಭಾರತದಲ್ಲಿ, ಡಬಲ್‌ ಮಾಸ್ಕ್‌ಗಳನ್ನು ಹಾಕಿಕೊಳ್ಳುವುದು ಸಹ ಸಮಯದ ಅಗತ್ಯವಾಗಿದೆ. ಆದರೆ, ಸಾಂಕ್ರಾಮಿಕ ರೋಗದ ನಡುವೆ ಈ ಮಾಸ್ಕ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ವೈದ್ಯಕೀಯ ಆರೋಗ್ಯ ವೃತ್ತಿಪರರು ಮತ್ತು ವಿಶ್ವಾದ್ಯಂತ ಅಗತ್ಯ ಕಾರ್ಮಿಕರಲ್ಲಿ ದೊಡ್ಡ ವಿಷಯವಾಗಿದೆ. ಕೊರೋನಾದಿಂದ ದೂರವಿರಲು ಬಳಸುವ  ಮಾಸ್ಕ್​ ಹಾಗೂ ಪಿಪಿಇ ಕಿಟ್​ಗಳು ಈಗ ಮತ್ತೊಂದು ರೀತಿಯಲ್ಲಿ ಸಮಸ್ಯೆಯಾಗಿ ಕಾಡಲಾರಂಭಿಸಿದೆ.

ಇತ್ತೀಚೆಗೆ ತಮಿಳುನಾಡಿನ ಪಶುವೈದ್ಯರ ತಂಡವು ಸೈಬೀರಿಯನ್ ಹಸ್ಕಿ ತಳಿಯ ನಾಯಿಯ ಹೊಟ್ಟೆಯಿಂದ ಮಾಸ್ಕ್‌ ಅನ್ನು ತೆಗೆದಿದೆ. ಆ ನಾಯಿಯ ಹೊಟ್ಟೆಯಿಂದ ಮಾಸ್ಕ್‌ ಅನ್ನು ತೆಗೆಯುತ್ತಿರುವ  ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಎಂಬುವರು ಟ್ವೀಟ್ ಮಾಡಿದ್ದಾರೆ.

corona (5)
ಪ್ರಾತಿನಿಧಿಕ ಚಿತ್ರ.


ನಾವು ಅಜಾಗರೂಕತೆಯಿಂದ ಎಸೆಯುವ ಮಾಸ್ಕ್‌ಗಳು ಪ್ರಾಣಿಗಳನ್ನು ಕೊಲ್ಲಬಹುದು. ಚೆನ್ನೈನ ಟಿಎನ್ ಯುನಿವರ್ಸಿಟಿಯ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನದ ಪಶುವೈದ್ಯರ ತಂಡವು ಸೈಬೀರಿಯನ್ ಹಸ್ಕಿ ತಳಿಯ ನಾಯಿಯ ಹೊಟ್ಟೆಯಿಂದ ಮಾಸ್ಕ್‌ ಅನ್ನು ಯಶಸ್ವಿಯಾಗಿ ತೆಗೆದಿದ್ದಾರೆ. ಈ ವಿಡಿಯೋ ದುರ್ಬಲ ಹೃದಯದವರಿಗೆ ಅಲ್ಲ. ದಯವಿಟ್ಟು ಸುರಕ್ಷಿತ ವಿಲೇವಾರಿಯನ್ನು ಅಭ್ಯಾಸ ಮಾಡಿಕೊಳ್ಳಿ' ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: RIP Sanchari Vijay: ಸಂಚಾರ ನಿಲ್ಲಿಸಿದ ಸ್ಯಾಂಡಲ್​ವುಡ್​ ನಟ ವಿಜಯ್: ಕಂಬನಿ ಮಿಡಿದ ಕಿಚ್ಚ ಸುದೀಪ್​..!

ಮಾಸ್ಕ್‌ ನೆಲದ ಮೇಲೆ ಬಿದ್ದಿರುವಾಗ ನಾಯಿ ಅದನ್ನು ನುಂಗಿರಬೇಕು ಎಂದು ಸ್ಪಷ್ಟವಾಗಿ ಊಹಿಸಬಹುದು. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯಿಸುತ್ತಿದ್ದು, ಜನರು ಆತಂಕ ವ್ಯಕ್ತಪಡಿಸಿದ್ದಾರೆ.  ಅಲ್ಲದೆ, ಮಾಸ್ಕ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ ಹಾಗೂ ಅದನ್ನು ಬಿಸಾಡುವಾಗಲೂ ಎಚ್ಚರಿಕೆಯಿಂದ ಇರಿ ಎಂದು ಜನತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಾಸ್ಕ್‌ಗಳು, ಹ್ಯಾಂಡ್​ ಗ್ಲೌಸ್​ಗಳು ಮತ್ತು ಇತರ ಪಿಪಿಇ ಕಿಟ್​ನ ಜೊತೆ ಬರುವ ವಸ್ತುಗಳು ವ್ಯಾಪಕವಾಗಿ ಬಳಕೆಯಲ್ಲಿರುವುದರಿಂದ, ಈ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡುವುದರಿಂದ ಉಂಟಾಗುವ ಪರಿಸರ ಹಾನಿಯ ಬಗ್ಗೆ ಆತಂಕ ಹೆಚ್ಚುತ್ತಿದೆ. ಕೆಲವು ವಾರಗಳ ಹಿಂದೆ, ಫ್ರೆಂಚ್ ಪರಿಸರ ಸಂಘಟನೆಯು ಮೆಡಿಟರೇನಿಯನ್ ಸಮುದ್ರದೊಳಗೆ ಹಲವಾರು ಮಾಸ್ಕ್‌ಗಳು ಮತ್ತು ಹ್ಯಾಂಡ್​ ಗ್ಲೌಸ್​ಗಳನ್ನು ಕಂಡುಕೊಂಡಿದ್ದಾರೆ.

ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ಇನ್ನೂ ಜೀವಂತ: ವೈದ್ಯ ಅರುಣ್ ನಾಯ್ಕ್ ಸ್ಪಷ್ಟನೆ..!

ದಕ್ಷಿಣ ಫ್ರಾನ್ಸ್‌ನ ಆ್ಯಂಟಿಬೆಸ್ ಪ್ರದೇಶದ ಸುತ್ತಮುತ್ತಲಿನ ಮೆಡಿಟರೇನಿಯನ್ ಸಮುದ್ರದಿಂದ ನೀರೊಳಗಿನ ತ್ಯಾಜ್ಯವನ್ನು ಸ್ವಚ್ಛಗೊಳಿಸುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಆಪರೇಷನ್‌ ಮೆರ್ ಪ್ರೊಪ್ರೆ (ಆಪರೇಷನ್ ಕ್ಲೀನ್ ಸೀ) ಎಂಬ ಎನ್‌ಜಿಒ ಇತ್ತೀಚೆಗೆ ಕರಾವಳಿ ಕೋಟ್ ಡಿ ಅಜೂರ್ ರೆಸಾರ್ಟ್ ಬಳಿ 9 ಸರ್ಜಿಕಲ್‌ ಮಾಸ್ಕ್‌ ಮತ್ತು 14 ಲ್ಯಾಟೆಕ್ಸ್ ಹ್ಯಾಂಡ್​ ಗ್ಲೌಸ್​ಗಳನ್ನು ತೆಗೆದಿದ್ದಾರೆ. ನದಿ, ಸಮುದ್ರ, ಸಾಗರದಂತಹ ಪ್ರದೇಶಗಳಲ್ಲಿ ಮಾಸ್ಕ್‌, ಕೈಗವಸು, ಪಿಪಿಇ ಕಿಟ್‌ನಂತಹ ತ್ಯಾಜ್ಯಗಳು ಕಂಡುಬರುತ್ತಿರುವುದು ಮೀನುಗಳು ಮುಂತಾದ ಜಲಚರಗಳಿಗೆ ಇನ್ನೂ ಹೆಚ್ಚಿನ ಅಪಾಯವಾಗಿದೆ.

ನ್ಯೂಸ್18 ಕನ್ನಡ ಕಳಕಳಿ

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: