HOME » NEWS » Coronavirus-latest-news » MASK HAI NA ASSAM POLICE INSPIRED FROM SHAH RUKH KHAN STARRER MAIN HOON NA MOVIE FOR WEARING MASK STG SCT

‘ಮಾಸ್ಕ್ ಹೇ ನಾ?’: ಮಾಸ್ಕ್‌ ಜಾಗೃತಿ ಮೂಡಿಸಲು ಶಾರುಖ್‌ ಖಾನ್‌ ಸಹಾಯ ಪಡೆದ ಅಸ್ಸಾಂ ಪೊಲೀಸರು!

ಶಾರುಖ್ ಖಾನ್ ಅಭಿನಯದ “ಮೇ ಹೂ ನಾ” ಚಿತ್ರದ ಪೋಸ್ಟರ್‌ ಅನ್ನು ಶೇರ್‌ ಮಾಡಿರುವ ಅಸ್ಸಾಂ ಪೊಲೀಸರು “Mask Hai Na!” ಎಂಬ ಟ್ಯಾಗ್‌ಲೈನ್‌ನೊಂದಿಗೆ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

news18-kannada
Updated:May 8, 2021, 1:37 PM IST
‘ಮಾಸ್ಕ್ ಹೇ ನಾ?’: ಮಾಸ್ಕ್‌ ಜಾಗೃತಿ ಮೂಡಿಸಲು ಶಾರುಖ್‌ ಖಾನ್‌ ಸಹಾಯ ಪಡೆದ ಅಸ್ಸಾಂ ಪೊಲೀಸರು!
ಮಾಸ್ಕ್ ಹೇ ನಾ
  • Share this:
ಕೊರೊನಾ ವೈರಸ್‌ ಎರಡನೇ ಅಲೆಯ ಮಧ್ಯೆ ದೇಶವು ಕೋವಿಡ್ - 19 ವಿರುದ್ಧದ ಯುದ್ಧವನ್ನು ಮುಂದುವರೆಸಿದೆ. ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ರಾಜ್ಯ ಪೊಲೀಸ್ ಪಡೆಗಳು ಅಧಿಕಾರಿಗಳೊಂದಿಗೆ ಕೈಜೋಡಿಸಿವೆ ಮತ್ತು ನವೀನ ತಂತ್ರಗಳನ್ನು ಬಳಸುತ್ತಿವೆ. ಕೋವಿಡ್ - 19 ಮಾನದಂಡಗಳ ಬಗ್ಗೆ ಜಾಗೃತಿ ಅಭಿಯಾನದಲ್ಲಿ ಬುದ್ಧಿ ಮತ್ತು ಹಾಸ್ಯದೊಂದಿಗೆ, ಅಸ್ಸಾಂ ಪೊಲೀಸರು ಮಾಸ್ಕ್‌ ಧರಿಸಲು ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಶಾರುಖ್ ಖಾನ್ ಅಭಿನಯದ “ಮೇ ಹೂ ನಾ” ಚಿತ್ರದ ಪೋಸ್ಟರ್‌ ಅನ್ನು ಶೇರ್‌ ಮಾಡಿರುವ ಅಸ್ಸಾಂ ಪೊಲೀಸರು “Mask Hai Na!” ಎಂಬ ಟ್ಯಾಗ್‌ಲೈನ್‌ನೊಂದಿಗೆ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

“ಮೇ ಹೂ ನಾ” ಚಿತ್ರದಲ್ಲಿ ನಟಿಸಿರುವ ಹಾಗೂ ಪೋಸ್ಟರ್‌ನಲ್ಲಿರುವ ಸಂಜನಾ ಬಕ್ಷಿ ಪಾತ್ರದಲ್ಲಿ ನಟಿಸಿರುವ ಅಮೃತಾ ರಾವ್‌ ಅವರ ಮುಖಕ್ಕೆ ಅಸ್ಸಾಂ ಪೊಲೀಸರು ಮಾಸ್ಕ್‌ ಹಾಕಿದ್ದಾರೆ. ಈ ಚಿತ್ರದಲ್ಲಿ ಮೇಜರ್ ರಾಮ್ ಪ್ರಸಾದ್ ಶರ್ಮಾ ಪಾತ್ರದಲ್ಲಿ ನಟಿಸಿರುವ ಶಾರುಖ್ ಖಾನ್ ಅವರ ಮುಖದಲ್ಲೂ ಮತ್ತು ಲಕ್ಷ್ಮಣ್ ಪಾತ್ರದಲ್ಲಿ ನಟಿಸಿರುವ ಜಾಯೇದ್‌ ಖಾನ್‌ ಅವರ ಮುಖದಲ್ಲೂ ಮಾಸ್ಕ್‌ಗಳನ್ನು ಕಾಣಬಹುದು.

ಈ ಟ್ವೀಟ್ 2,500 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಅಲ್ಲದೆ, ಟ್ವೀಟ್ ಮಾಡಿದ ಕೂಡಲೇ, ಸಂವೇದನಾಶೀಲಗೊಳಿಸುವ ಚಿಂತನೆಯಿಂದ ಪ್ರಭಾವಿತರಾದ ಸಾಮಾಜಿಕ ಮಾಧ್ಯಮ ಬಳಕೆದಾರರು ಮೆಚ್ಚಿಕೊಂಡು ಪ್ರತಿಕ್ರಿಯೆಗಳನ್ನು ನೀಡಿದ್ದರು. ಅಲ್ಲದೆ, ಮಾಸ್ಕ್‌ ಧರಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಕೆಲವರು ಒತ್ತಾಯಿಸಿದ್ದಾರೆ.ಕೋವಿಡ್ - 19 ಹರಡುವುದನ್ನು ನಿಯಂತ್ರಿಸಲು ಮಾಸ್ಕ್‌ಗಳನ್ನು ಧರಿಸುವ ಪ್ರಾಮುಖ್ಯತೆಯ ಬಗ್ಗೆ ಜನರನ್ನು ಸಂವೇದನಾಶೀಲಗೊಳಿಸಲು ಅಸ್ಸಾಂ ಪೊಲೀಸರು ಚಮತ್ಕಾರಿ ವಿಚಾರವನ್ನು ಮಂಡಿಸುತ್ತಿರುವುದು ಇದೇ ಮೊದಲಲ್ಲ.ಕಳೆದ ವರ್ಷ ಏಪ್ರಿಲ್‌ನಲ್ಲಿ ಸಹ ಮಾಸ್ಕ್‌ ಬಗ್ಗೆ ಜಾಗೃತಿ ಮೂಡಿಸಲು ಗ್ರಾಫಿಕ್ ಅನ್ನು ಹಂಚಿಕೊಂಡಿತ್ತು. ಇದು ಮೂಲತಃ ಜನಪ್ರಿಯ ಹಾಲಿವುಡ್ ಚಲನಚಿತ್ರ ದಿ ಮಾಸ್ಕ್‌ ಚಿತ್ರದ ಪೋಸ್ಟರ್‌ನಿಂದ ಈ ಗ್ರಾಫಿಕ್ಸ್‌ ಮಾಡಲಾಗಿತ್ತು.ಗ್ರಾಫಿಕ್‌ನಲ್ಲಿರುವ ಪಾತ್ರ ಸ್ಟಾನ್ಲಿ ಇಪ್ಕಿಸ್ ಆಗಿದ್ದು, ಈ ಪಾತ್ರವನ್ನು ನಟ ಜಿಮ್ ಕ್ಯಾರಿ ನಿರ್ವಹಿಸಿದ್ದಾರೆ. ಈ ಪೋಸ್ಟರ್‌ಗೆ ಟ್ವಿಸ್ಟ್‌ ಸೇರಿಸಿದ್ದ ಅಸ್ಸಾಂ ಪೊಲೀಸರು ಇಡೀ ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿರುವ ಪಾತ್ರದ ಬಾಯಿ ಹಾಗೂ ಮೂಗು ಮುಚ್ಚಿಕೊಳ್ಳುವಂತಹಹ ಮಾಸ್ಕ್‌ ಅನ್ನು ಸೇರಿಸಿದ್ದರು. ಜನ ತಮ್ಮ ಮನೆಯಿಂದ ಹೊರಹೋಗುವಾಗ ಮಾಸ್ಕ್‌ ಧರಿಸುವ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಸಾಧ್ಯತೆ ಹಿನ್ನೆಲೆ ಈ ಗ್ರಾಫಿಕ್ಸ್ ಮಾಡಲಾಗಿತ್ತು. ಅಲ್ಲದೆ, ಪೋಸ್ಟರ್‌ನಲ್ಲಿನ ಪಠ್ಯವು “ಮಾಸ್ಕ್ ಧರಿಸಿ” ಎಂದು ಹೇಳಿದೆ ಮತ್ತು #IndiaFightsCorona ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಹೊಂದಿದೆ.
Published by: Sushma Chakre
First published: May 8, 2021, 1:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories