ವೆಂಟಿಲೇಟರ್​, ಮಾಸ್ಕ್ ಉತ್ಪಾದನೆಗೆ ಮಾರುತಿ ಸುಜುಕಿ ನೆರವು

ವೆಂಟಿಲೇಟರ್​ಗಳ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಆಗ್​ವಾ ಹೆಲ್ತ್ ಕೇರ್ ಸಹಯೋಗದಲ್ಲಿ ಮಾರುತಿ ಸುಜುಕಿ ಕೆಲಸ ಮಾಡಲಿದೆ. ಇವೆರಡೂ ಒಟ್ಟುಗೂಡಿ ತಿಂಗಳಿಗೆ 10 ಸಾವಿರ ವೆಂಟಿಲೇಟರ್​ಗಳನ್ನ ತಯಾರಿಸುವ ಉದ್ದೇಶವಿದೆ.

ಮಾರುತಿ ಸುಜುಕಿ

ಮಾರುತಿ ಸುಜುಕಿ

 • Share this:
  ನವದೆಹಲಿ(ಮಾ. 28): ಭಾರತದಲ್ಲಿ ಕೊರೋನಾ ವೈರಸ್​ಗೆ ತುತ್ತಾಗಿರುವ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಕ್ಕೆ ಹಲವು ಉದ್ಯಮಿಗಳು ಮುಂದಾಗಿದ್ದಾರೆ. ಅದೇ ರೀತಿಯಾಗಿ ಮಾರುತಿ ಸುಜುಕಿ ಕಂಪನಿ ಈಗ ವೆಂಟಿಲೇಟರ್​, ಮಾಸ್ಕ್ ಹಾಗೂ ಇತರ ಸಾಧನಗಳನ್ನ ತಯಾರಿಸಲು ಮುಂದಾಗಿದೆ.

  ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ಸಂಸ್ಥೆಯು ವೆಂಟಿಲೇಟರ್‌, ಮುಖಗವಚ(ಮಾಸ್ಕ್) ಮತ್ತುಇತರ ರಕ್ಷಣಾ ಸಾಧನಗಳ ಉತ್ಪಾದನೆಗೆ ತಾನು ಎಷ್ಟರಮಟ್ಟಿಗೆ ನೆರವು ನೀಡಲು ಸಾಧ್ಯತೆ ಎಂಬುದನ್ನು ಪರಿಶೀಲಿಸುವ ಕೆಲಸ ಮಾಡಿದೆ. ವೆಂಟಿಲೇಟರ್‌ಗಳ ಅಧಿಕೃತ ತಯಾರಕರಾದ  ಆಗ್​ವಾ ಹೆಲ್ತ್‌ಕೇರ್‌ (AgVa Healthcare) ಸಂಸ್ಥೆಯೊಂದಿಗೆ ಮಾರುತಿ ಸುಜುಕಿ ಒಪ್ಪಂದ ಮಾಡಿಕೊಂಡಿದೆ.

  ವೆಂಟಿಲೇಟರ್​ಗಳ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಆಗ್​ವಾ ಹೆಲ್ತ್ ಕೇರ್ ಸಹಯೋಗದಲ್ಲಿ ಮಾರುತಿ ಸುಜುಕಿ ಕೆಲಸ ಮಾಡಲಿದೆ. ಇವೆರಡೂ ಒಟ್ಟುಗೂಡಿ ತಿಂಗಳಿಗೆ 10 ಸಾವಿರ ವೆಂಟಿಲೇಟರ್​ಗಳನ್ನ ತಯಾರಿಸುವ ಉದ್ದೇಶವಿದೆ.

  ಎರಡು ಕಂಪನಿಗಳ ಒಪ್ಪಂದದಂತೆ ವೆಂಟಿಲೇಟರ್​ಗಳ ತಂತ್ರಜ್ಞಾನ, ಕಾರ್ಯಕ್ಷಮತೆ ಮತ್ತಿತರ ಎಲ್ಲಾ ಅಂಶಗಳಿಗೆ ಆಗ್​ವಾ ಹೆಲ್ತ್​ಕೇರ್ ಸಂಸ್ಥೆಯೇ ಜವಾಬ್ದಾರಿ ಹೊರಬೇಕಾಗುತ್ತದೆ.

  ಮಾರುತಿ ಸುಜುಕಿ ಸಂಸ್ಥೆಯು ತನ್ನ ವಾಹನಬಿಡಿಭಾಗಗಳ ಪೂರೈಕೆದಾರರನ್ನು ಬಳಸಿಕೊಂಡು ಅಗತ್ಯಪ್ರಮಾಣದಷ್ಟು ವೆಂಟಿಲೇಟರ್​ಗಳ ಬಿಡಿಭಾಗಳನ್ನ ತಯಾರಿಸುವ ವ್ಯವಸ್ಥೆ ಮಾಡುತ್ತದೆ. ಆಟೊಮೊಬೈಲ್ ಕ್ಷೇತ್ರದ ದಿಗ್ಗಜವೆನಿಸಿರುವ ಇದು ತನ್ನ ಅನುಭವದ ಮೂಲಕ ಗುಣಮಟ್ಟಕ್ಕೆ ರಾಜಿಯಾಗದಂತೆ ಉತ್ಪಾದನೆ ಹೆಚ್ಚಳ ಮಾಡುವ ಅಂಶಕ್ಕೆ ಗಮನ ಕೊಡಲಿದೆ. ಆಗ್​ವಾ ಸಂಸ್ಥೆಗೆ ಅಗತ್ಯ ಇರುವ ಯಾವುದೇ ರೀತಿಯ ಸಹಾಯ ನೀಡಲು ಎಂಎಸ್​ಐಎಲ್ ಬದ್ಧವಾಗಿರಲಿದೆ. ಇವೆಲ್ಲ ಸೇವೆಯೂ ಉಚಿತವೇ ಇರಲಿದೆ.

  ಮಾರುತಿ ಸುಜುಕಿ ಸಂಸ್ಥೆ ಮತ್ತು ಅಶೋಕ್ ಕಪೂರ್ ನಡುವಿನ ಜಂಟಿ ವ್ಯವಹಾರವಾಗಿರುವ ಕೃಷ್ಣ ಮಾರುತಿ ಲಿ ಸಂಸ್ಥೆಯು 3-ಪ್ಲೈ ಮಾಸ್ಕ್​ಗಳನ್ನ ತಯಾರಿಸಲಿದೆ. ಹರಿಯಾಣ ಮತ್ತು ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತ ಕೂಡಲೇ ಇದರ ಉತ್ಪಾದನೆ ಪ್ರಾರಂಭವಾಗಲಿದೆ. ಉದ್ಯಮಿ ಅಶೋಕ್ ಕಪೂರ್ ಅವರು 20 ಲಕ್ಷ ಮಾಸ್ಕ್​ಗಳನ್ನ ಉಚಿತವಾಗಿ ನೀಡಲಿದ್ದಾರೆ.

  ಇದನ್ನೂ ಓದಿ : ರೈಲು ಬೋಗಿಯೇ ಐಸೋಲೇಶನ್ ವಾರ್ಡ್; ಹೀಗಿರುತ್ತೆ ಇಲ್ಲಿನ ವ್ಯವಸ್ಥೆ

  ರೇಲನ್ ಕುಟುಂಬ ಒಡೆತನದ ಭಾರತ್ ಸೀಟ್ಸ್ ಲಿ ಸಂಸ್ಥೆಯು ರಕ್ಷಣಾ ಉಡುಪನ್ನು ತಯಾರಿಸಲು ಅಣಿಯಾಗಿದೆ. ಆದರೆ, ಈ ಎಲ್ಲಾ ಉತ್ಪಾದನೆಯಲ್ಲಿ ಭಾಗಿಯಾಗುವ ಎಲ್ಲಾ ಸಿಬ್ಬಂದಿ ವರ್ಗದವರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಮಾರುತಿ ಸುಜುಕಿ ಸಂಸ್ಥೆ ಸ್ಪಷ್ಟಪಡಿಸಿದೆ.
  First published: