ನವದೆಹಲಿ(ಜೂ. 04): ನಿಮ್ಮ ಬಳಿ ಇರುವ ಸೈಟು ಮತ್ತು ಫ್ಲಾಟುಗಳನ್ನು ಕಡಿಮೆ ದರಗಳಿಗೆ ಆದಷ್ಟು ಬೇಗ ಮಾರಿಬಿಡಿ. ಮಾರುಕಟ್ಟೆ ಸುಧಾರಣೆ ಆಗಬಹುದೆಂದು ಕಾಯುತ್ತಾ ಕೂರಬೇಡಿ ಎಂದು ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೋಯಲ್ ಸಲಹೆ ನೀಡಿದ್ದಾರೆ.
ನಾರೆಡ್ಕೋ ಎಂಬ ಡೆವೆಲಪರ್ಸ್ ಬಾಡಿ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಪಿಯೂಷ್ ಗೋಯಲ್, ರಿಯಲ್ ಎಸ್ಟೇಟ್ ಮಾರುಕಟ್ಟೆ ಬೇಗ ಸುಧಾರಿಸುವುದಿಲ್ಲ. ಒಂದೊಮ್ಮೆ ಸರ್ಕಾರದ ಸಹಾಯ ಸಿಗಬಹುದು ಎಂದು ನಿರೀಕ್ಷೆ ಮಾಡಿದರೆ ಅದಕ್ಕಾಗಿ ಬಹಳ ಸಮಯ ಕಾಯಬೇಕೇಗುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸರ್ಕಾರದ ನೆರವನ್ನು ಅಪೇಕ್ಷಿಸಬೇಡಿ ಎಂಬ ಸಂದೇಶ ರವಾನಿಸಿದ್ದಾರೆ.
ರಿಯಲ್ ಎಸ್ಟೇಟ್ ಪರಿಸ್ಥಿತಿ ನಿಜಕ್ಕೂ ಬಹಳ ಗಂಭೀರವಾಗಿದೆ. ಭಾರೀ ಒತ್ತಡದಲ್ಲು ಎದುರಿಸುತ್ತಿದೆ. ಆದುದರಿಂದ ಕಡಿಮೆ ದರಕ್ಕೆ ಬೇಗ ಮಾರುವುದೇ ಉತ್ತಮ. ಇದರಿಂದ ವ್ಯವಹಾರ ಉಳಿಸಿಕೊಳ್ಳಲು ಅನುಕೂಲ ಆಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪಿಎಂ ಗರೀಬ್ ಕಲ್ಯಾಣ್ ಯೋಜನೆ: 3ನೇ ಕಂತಿನ ಹಣ ನೀಡಲು ಎಸ್ಬಿಐ ವಿಶೇಷ ವ್ಯವಸ್ಥೆ
ನೋಟು ರದ್ದತಿ, ಜಿಎಸ್ ಟಿ ಜಾರಿ, ಆರ್ಥಿಕ ಕುಸಿತ, ಲಾಕ್ಡೌನ್ ನಂತಹ ಸರಣಿ ಪೆಟ್ಟು ತಿಂದು ಕಂಗಾಲಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೀಡಿರುವ ಈ ಹೇಳಿಕೆ ಮತ್ತೂ ಆಘಾತ ನೀಡಿದರೆ ಆಶ್ಚರ್ಯವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ