Manmohan Singh: ಮಾಜಿ ಪ್ರಧಾನಿ ಡಾ. ಮನಮೋಹನ್​​​ ಸಿಂಗ್ ಏಮ್ಸ್ ಆಸ್ಪತ್ರೆಗೆ ದಾಖಲು

Manmohan Singh Health Updates: ಈ ಹಿಂದೆ ವಿರೋಧ ಪಕ್ಷ ಕಾಂಗ್ರೆಸ್​ನ ನಾಯಕರಾಗಿರುವ ಡಾ. ಮನಮೋಹನ್​​ ಸಿಂಗ್​​ ರಾಜಸ್ತಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2009ರಲ್ಲಿ ಡಾ. ಸಿಂಗ್​​ಗೆ ಏಮ್ಸ್​​ನಲ್ಲೇ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆದಿತ್ತು.

news18-kannada
Updated:May 11, 2020, 10:08 AM IST
Manmohan Singh: ಮಾಜಿ ಪ್ರಧಾನಿ ಡಾ. ಮನಮೋಹನ್​​​ ಸಿಂಗ್ ಏಮ್ಸ್ ಆಸ್ಪತ್ರೆಗೆ ದಾಖಲು
ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​
  • Share this:
ನವದೆಹಲಿ(ಮೇ.11): ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್​​​ ಎದೆನೋವು  ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ರಾತ್ರಿ 8:45ರ ವೇಳೆಗೆ ಎದೆನೋವು ಕಾಣಸಿಕೊಂಡಿದೆ. ಈ ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ ಎಂದು ಏಮ್ಸ್​​​ಮೂಲಗಳು ತಿಳಿಸಿವೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಡಾ. ಮನಮೋಹನ್​​ ಸಿಂಗ್​​ಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ ನಿತೀಶ್ ನಾಯ್ಕ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ತಿಳಿದು ಬಂದಿದೆ.

ಇನ್ನು, ಈ ಸಂಬಂಧ ಟ್ವೀಟ್​ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಲವು ಕಾಂಗ್ರೆಸ್​ ನಾಯಕರು, ಮನಹೋಹನ್​​​ ಸಿಂಗ್​​​​ ಅನಾರೋಗ್ಯದಿಂದ ಏಮ್ಸ್​​ಗೆ ದಾಖಲಾಗಿದ್ದಾರೆ ಎಂದು ಉನ್ನತ ಮೂಲಗಳು ಹೇಳುತ್ತಿವೆ. ಹಾಗಾಗಿ ಅವರ ಶೀಘ್ರ ಚೇತರಿಕೆ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ವಿಪಕ್ಷ ಕಾಂಗ್ರೆಸ್​ನ ನಾಯಕ ಡಾ. ಮನಮೋಹನ್​​ ಸಿಂಗ್ ಈ ಹಿಂದೆ ಮೊದಲಿಗೆ​​ ರಾಜಸ್ತಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2009ರಲ್ಲಿ ಡಾ. ಸಿಂಗ್​​ಗೆ ಏಮ್ಸ್​​ನಲ್ಲೇ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆದಿತ್ತು.
First published: May 11, 2020, 7:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading