ನಾಳೆಯಿಂದ ಮಂಗಳೂರು ಸಂಪೂರ್ಣ ಬಂದ್; ಮನೆಗೇ ಪೂರೈಕೆ ಆಗಲಿದೆ ಅಗತ್ಯ ವಸ್ತುಗಳು?

ಇವತ್ತು ಅಗತ್ಯ ವಸ್ತು ಖರೀದಿಗೆ ಸಮಯ ಕೊಡಲಾಗಿದೆ. ಆದರೆ, ನಾಳೆಯಿಂದ ಯಾವ ದಿನಸಿ ಅಂಗಡಿಗಳು ತೆರೆದಿರುವುದಿಲ್ಲ. ಎಂದು ಹೇಳುವ ಮೂಲಕ ಮಂಗಳೂರು ಸಂಪೂರ್ಣ ಸ್ತಬ್ಧವಾಗಲಿದೆ ಎನ್ನುವ ಎಚ್ಚರಿಕೆ ನೀಡಿದರು.

ನಳೀನ್ ಕುಮಾರ್ ಕಟೀಲ್

ನಳೀನ್ ಕುಮಾರ್ ಕಟೀಲ್

  • Share this:
ಮಂಗಳೂರು (ಮಾ.25): ಕೊರೋನಾ ವೈರಸ್​ ಭೀತಿಯಿಂದಾಗಿ ಇಡೀ ದೇಶವೇ ಲಾಕ್​ಡೌನ್​ ಆಗಿದೆ. ಈಗಾಗಲೇ 21 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಸರ್ಕಾರ ಹೇಳಿದೆ. ಆದರೆ, ದಿನ ನಿತ್ಯದ ವಸ್ತುಗಳಿಗೆ ಯಾವುದೆ ತೊಂದರೆ ಆಗದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಮಧ್ಯೆ ಮಂಗಳೂರನ್ನು ನಾಳೆಯಿಂದ ಸಂಪೂರ್ಣ ಬಂದ್​ ಮಾಡುವುದಾಗಿ ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟಿಲು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, “ಇವತ್ತು ಅಗತ್ಯ ವಸ್ತು ಖರೀದಿಗೆ ಸಮಯ ಕೊಡಲಾಗಿದೆ. ಆದರೆ, ನಾಳೆಯಿಂದ ಯಾವ ದಿನಸಿ ಅಂಗಡಿಗಳು ತೆರೆದಿರುವುದಿಲ್ಲ. ಈ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ,” ಎಂದು ಹೇಳುವ ಮೂಲಕ ಮಂಗಳೂರು ಸಂಪೂರ್ಣ ಸ್ತಬ್ಧವಾಗಲಿದೆ ಎನ್ನುವ ಎಚ್ಚರಿಕೆ ನೀಡಿದರು.

ಜನರಿಗೆ ಬೇಕಾಗುವ ಅಗತ್ಯ ವಸ್ತುಗಳಿಗೆ ವಿಶೇಷ ವ್ಯವಸ್ಥೆ ಮಾಡಲು ಅವರು ಚಿಂತನೆ ನಡೆಸಿದ್ದಾರೆ. “ಜನರಿಗೆ ಬೇಕಾದ ಎಲ್ಲಾ ವಸ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ. ಆದರೆ ಇದನ್ನು ಹೇಗೆ ಮಾಡಬೇಕು ಎನ್ನುವ ಬಗ್ಗೆ ಮಾತುಕತೆ ನಡೆಯುತ್ತಿದೆ,” ಎಂದರು. ಈ ಮೂಲಕ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.

ಇದನ್ನೂ ಓದಿ: ಕೊರೋನಾದಿಂದ ರಾಜ್ಯದಲ್ಲಿ ಎರಡನೇ ಸಾವು?; ಶಂಕಿತೆಯ ವರದಿ ಬಂದ ನಂತರ ದೃಢ

ಕೇರಳ ಭಾಗದಿಂದ ಮಂಗಳೂರಿಗೆ ಸಾಕಷ್ಟು ಆಂಬುಲೆನ್ಸ್​ಗಳು ಬರುತ್ತಿರುವ ವಿಚಾರದ ಬಗ್ಗೆಯೂ ನಳೀನ್ ಕುಮಾರ್​ ಮಾತನಾಡಿದ್ದಾರೆ. “ಕೇರಳ ಭಾಗದಿಂದ ಮಂಗಳೂರಿಗೆ ಆಂಬುಲೆನ್ಸ್​ಗಳು ಹೆಚ್ಚಾಗಿ ಬರುತ್ತಿವೆ. ನಿನ್ನೆ ಅತೀ ಹೆಚ್ಚು ರೋಗಿಗಳು ಕೇರಳದಿಂದ ಮಂಗಳೂರಿಗೆ ಬಂದಿದ್ದಾರೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ಒಂದು ಕಠಿಣ ನಿರ್ಧಾರ ತೆಗೆದುಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗಳು ‌ನಮಗೆ ಸಾಲುತ್ತಿಲ್ಲ. ಹೀಗಾಗಿ, ಹೊರಗಿನ ಯಾವುದೇ ವಾಹನ, ಅಂಬ್ಯುಲೆನ್ಸ್​ಗೆ ರಾಜ್ಯದ ಒಳಗೆ ಬಿಡಬಾರದು ಎಂದು ನಿರ್ಧರಿಸಲಾಗಿದೆ,” ಎಂದರು.
First published: