• Home
  • »
  • News
  • »
  • coronavirus-latest-news
  • »
  • ಸ್ಯಾನಿಟೈಸರ್ ಬಳಕೆಗೆ ಹೊಸ ವಿಧಾನ; ಪುತ್ತೂರು ವಿದ್ಯಾರ್ಥಿಯ ಆವಿಷ್ಕಾರ

ಸ್ಯಾನಿಟೈಸರ್ ಬಳಕೆಗೆ ಹೊಸ ವಿಧಾನ; ಪುತ್ತೂರು ವಿದ್ಯಾರ್ಥಿಯ ಆವಿಷ್ಕಾರ

ಪುತ್ತೂರಿನ ವಿದ್ಯಾರ್ಥಿ ಕಂಡುಹಿಡಿದ ಸ್ಯಾನಿಟೈಸರ್ ಸ್ಟ್ಯಾಂಡ್

ಪುತ್ತೂರಿನ ವಿದ್ಯಾರ್ಥಿ ಕಂಡುಹಿಡಿದ ಸ್ಯಾನಿಟೈಸರ್ ಸ್ಟ್ಯಾಂಡ್

Mangalore News: ಪುತ್ತೂರಿನ ಬಹುತೇಕ ಎಲ್ಲಾ ಸರಕಾರಿ ಕಚೇರಿಗಳಲ್ಲಿ , ಖಾಸಗಿ ಕಚೇರಿಗಳಲ್ಲಿ ಈ ಸ್ಯಾನಿಟೈಸರ್ ಯಂತ್ರ ಸಾಮಾನ್ಯವಾಗಿದ್ದು, ಯುಪಿವಿಸಿ ಪೈಪ್ ಬಳಸಿ ಈ ಯಂತ್ರವನ್ನು ತಯಾರಿಸಲಾಗಿದೆ.

  • Share this:

ಪುತ್ತೂರು (ಮೇ 22): ವಿಶ್ವದೆಲ್ಲೆಡೆ ಪಸರಿಸುವ ಮಹಾಮಾರಿ ಕೊರೋನಾ ಸೋಂಕು ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ದೇಶದಲ್ಲೂ ದಿನದಿಂದ ದಿನಕ್ಕೆ ಕೊರೋನಾ ಬಾಧಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಈಗಾಗಲೇ ದೇಶದಲ್ಲಿ ಲಾಕ್​ಡೌನ್​ನಲ್ಲಿ ಸಡಿಲಿಕೆ ಮಾಡಲಾಗಿದ್ದು, ಕೊರೋನಾ ಜೊತೆಯೇ ಮುಂದಿನ ಬದುಕು ಎನ್ನುವ ಸೂಚನೆಯನ್ನೂ ನೀಡಲಾಗಿದೆ. ಇದಕ್ಕಾಗಿಯೇ ಮಾಸ್ಕ್ , ಸಾಮಾಜಿಕ ಅಂತರ, ಸ್ಯಾನಿಟೈಸರ್ ಈಗ ಅನಿವಾರ್ಯವೂ ಆಗಿದೆ.


ಸ್ಯಾನಿಟೈಸರ್ ಬಳಸುವ ವಿಧಾನದಲ್ಲೂ ಬದಲಾವಣೆಯ ಅಗತ್ಯವಿದ್ದು, ದಕ್ಷಿಣಕನ್ನಡದ ಪೋರನೊಬ್ಬ ಸ್ಯಾನಿಟೈಸರ್ ಬಳಕೆಗೆ ಹೊಸ ಸಂಶೋಧನೆ ನಡೆಸಿದ್ದಾನೆ. ವಿಶ್ವದೆಲ್ಲೆಡೆ ವ್ಯಾಪಿಸಿರುವ ಮಹಾಮಾರಿ ಕೊರೋನಾ ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಈ ಮಹಾಮಾರಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದಲ್ಲಿ ಸುಮಾರು 50 ದಿನಗಳ ಸುದೀರ್ಘ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇವೆ.


ಇದೇ ಕಾರಣಕ್ಕೆ ದೇಶದ ಜನ ಇನ್ನು ಕೊರೋನಾ ಜೊತೆಗೇ ಬದುಕು ಸಾಗಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲೂ ಇದ್ದಾರೆ. ಕೊರೊನಾದಿಂದ ದೂರ ಉಳಿಯಲು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕೈಗಳನ್ನು ನಿರಂತರವಾಗಿ ತೊಳೆಯುವುದರಿಂದ ಸಾಧ್ಯ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯೂ ಆಗಿದೆ. ಹೀಗೆ ಕೈ ತೊಳೆಯಲು ಇದೀಗ ಸ್ಯಾನಿಟೈಸರ್ ಬಳಕೆ ಅನಿವಾರ್ಯವಾಗಿದ್ದು, ಇದರ ಬಳಕೆಯ ವಿಧಾನದಲ್ಲೂ ಬದಲಾವಣೆಯ ಅಗತ್ಯವಿದೆ ಎಂಬುದನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪೋರನೊಬ್ಬ ಸ್ಯಾನಿಟೈಸರ್ ಬಳಕೆಯ ವಿಧಾನದಲ್ಲಿ ಸಂಶೋಧನೆ ನಡೆಸಿ ಯಂತ್ರವೊಂದನ್ನು ತಯಾರಿಸಿದ್ದಾನೆ.


ಇದನ್ನೂ ಓದಿ: ಮಹಾರಾಷ್ಟ್ರದ ಪ್ರಯಾಣಿಕರು ಕರ್ನಾಟಕ ಪ್ರವೇಶಿಸುವಂತಿಲ್ಲ; ಸಿಎಂ ಯಡಿಯೂರಪ್ಪ ಖಡಕ್ ಆದೇಶ


ಪುತ್ತೂರಿನ ನಿವಾಸಿ 8ನೇ ತರಗತಿಯ ವಿದ್ಯಾರ್ಥಿ ನಿಹಾಲ್ ಈ ಸಾಧನೆ ಮಾಡಿದ ಪೋರ. ಸ್ಯಾನಿಟೈಸರ್ ಗಳನ್ನು ಬಹುತೇಕ ಎಲ್ಲಾ ಕಚೇರಿಗಳನ್ನು ಬಳಸುತ್ತಿದ್ದರೂ, ಸ್ಯಾನಿಟೈಸರ್ ನೀಡಲೆಂದೇ ಕೆಲವು ಕಡೆಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಇಲ್ಲವೇ ಸ್ಯಾನಿಟೈಸರ್ ಅನ್ನು ಕಚೇರಿಯ ಬಾಗಿಲ ಬಳಿಯಿಟ್ಟು ಬರುವ ಜನರೇ ಸ್ಯಾನಿಟೈಸರ್ ಹಾಕಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇದರಿಂದ ರೋಗಾಣು ಇತರರಿಗೂ ಹರಡುವ ಸಾಧ್ಯತೆಯನ್ನು ಮನಗಂಡ ಈ ವಿದ್ಯಾರ್ಥಿ ಕಾಲಲ್ಲಿ ಒತ್ತಿ ಸ್ಯಾನಿಟೈಸರ್ ಬಳಸಬಹುದಾದ ಯಂತ್ರವನ್ನು ತಯಾರಿಸಿದ್ದಾನೆ.


Dakshina Kannada Puttur School Boy invented User Friendly Sanitizer Stand
ತಾನು ಕಂಡುಹಿಡಿದ ಸ್ಯಾನಿಟೈಸರ್ ಸ್ಟ್ಯಾಂಡ್ ಜೊತೆ ಪುತ್ತೂರಿನ ವಿದ್ಯಾರ್ಥಿ ನಿಹಾಲ್


ಅತ್ಯಂತ ಸಾಮಾನ್ಯ ತಂತ್ರಜ್ಞಾನವನ್ನು ಬಳಸಿ ಈ ಯಂತ್ರವನ್ನು ಸಂಶೋಧಿಸಿರುವ ನಿಹಾಲ್ ಹೀಗೆ ತಯಾರಿಸಿದ ಯಂತ್ರಗಳನ್ನು ಪುತ್ತೂರಿನ ಎಲ್ಲಾ ಸರಕಾರಿ ಕಚೇರಿಗಳಿಗೆ ಉದಾರವಾಗಿ ನೀಡುತ್ತಿದ್ದಾನೆ. ಪುತ್ತೂರಿನ ಬಹುತೇಕ ಎಲ್ಲಾ ಸರಕಾರಿ ಕಚೇರಿಗಳಲ್ಲಿ , ಖಾಸಗಿ ಕಚೇರಿಗಳಲ್ಲಿ ಈ ಸ್ಯಾನಿಟೈಸರ್ ಯಂತ್ರ ಸಾಮಾನ್ಯವಾಗಿದ್ದು, ಯುಪಿವಿಸಿ ಪೈಪ್ ಬಳಸಿ ಈ ಯಂತ್ರವನ್ನು ತಯಾರಿಸಿದ್ದಾನೆ. ಒಂದು ಯಂತ್ರಕ್ಕೆ ಸುಮಾರು 1,000ದಿಂದ 1,500 ರೂ. ಖರ್ಚು ತಗಲುತ್ತಿದ್ದು, ಆಸಕ್ತರಿಗೆ ಇದನ್ನು ಪೂರೈಸುವ ಇಚ್ಛೆಯನ್ನೂ ಹೊಂದಿದ್ದಾನೆ.


ಇದನ್ನೂ ಓದಿ: Lockdown Effect: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲಿ ಮನೆ ಕಟ್ಟಿದ ಪುತ್ತೂರಿನ ಕೃಷಿಕ!


ಪುತ್ತೂರಿನ ಪೋಲೀಸ್ ಠಾಣೆ, ಮಿನಿ ವಿಧಾನಸೌಧ, ಆರ್.ಟಿ.ಒ ಕಛೇರಿ, ನಗರಸಭೆ ಹೀಗೆ ಸಾರ್ವಜನಿಕರು ಬರುವ ಎಲ್ಲಾ ಕಛೇರಿಗಳಿಗೂ ಈ ಸ್ಯಾನಿಟೈಸರ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಗಿದೆ. ಪೋರನ ಈ ಆವಿಷ್ಕಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೆಲವರು ಗೌರವಧನವನ್ನೂ ನೀಡಲು ಆರಂಭಿಸಿದ್ದಾರೆ.  ಕೈಗಳ ಶುಚಿತ್ವ ಅಗತ್ಯವಾಗಿದ್ದು, ಅದರಲ್ಲೂ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಬರುವ ಸರಕಾರಿ ಕಚೇರಿಗಳಲ್ಲಿ ಇಂತಹ ಯಂತ್ರದ ಅನಿವಾರ್ಯತೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.


ಪುತ್ತೂರಿನ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ನಿಹಾಲ್ ಹಲವು ಆವಿಷ್ಕಾರಗಳ ಮೂಲಕ ಗಮನಸೆಳೆದ ವಿದ್ಯಾರ್ಥಿಯೂ ಆಗಿದ್ದಾನೆ. ಇದೀಗ ಕೊರೋನಾ ತಡೆಗೆ ತನ್ನದೇ ಯಂತ್ರವನ್ನು ಆವಿಷ್ಕರಿಸುವ ಮೂಲಕ ಕೊರೋನಾ ತಡೆಯುವಲ್ಲಿ ತನ್ನ ಪಾತ್ರವನ್ನೂ ಪರಿಪೂರ್ಣವಾಗಿ ನಿಭಾಯಿಸಿದ್ದಾನೆ.

Published by:Sushma Chakre
First published: