Mangalore Lockdown: ಮಂಗಳೂರು, ಉಡುಪಿಯಲ್ಲಿ ಇಂದಿನಿಂದ ಸಿಟಿ ಬಸ್ ಸಂಚಾರ ಆರಂಭ

ಕೇಂದ್ರ ಸರ್ಕಾರ ನೂತನ ನಿಯಮದಂತೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬಸ್ ಸಂಚಾರ ಮಾಡಲಿದೆ. ಬಸ್ ಗಳಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುವುದು‌.

news18-kannada
Updated:June 1, 2020, 2:56 PM IST
Mangalore Lockdown: ಮಂಗಳೂರು, ಉಡುಪಿಯಲ್ಲಿ ಇಂದಿನಿಂದ ಸಿಟಿ ಬಸ್ ಸಂಚಾರ ಆರಂಭ
ಮಂಗಳೂರಿನಲ್ಲಿ ಸಂಚಾರಕ್ಕೆ ಸಿದ್ಧವಾಗಿರುವ ಬಸ್​
  • Share this:
ಮಂಗಳೂರು (ಜೂ. 1): ಮಂಗಳೂರಿನ ಸಾರಿಗೆ ಸಂಚಾರ ವ್ಯವಸ್ಥೆಯಲ್ಲಿ ಬಹಳ ಪ್ರಾಬಲ್ಯ ಹೊಂದಿರುವ ಖಾಸಗಿ ಬಸ್​ಗಳು ಇಂದಿನಿಂದ ರಸ್ತೆಗಿಳಿದಿವೆ‌ .ಕಳೆದ 60 ದಿನಗಳಿಂದ ಶೆಡ್​ಗಳಲ್ಲೇ ಲಾಕ್ ಆಗಿದ್ದ ಬಸ್​ಗಳು ಇಂದಿನಿಂದ ರಸ್ತೆಯಲ್ಲಿ ಓಡಾಟ ಮಾಡುತ್ತಿವೆ. ಹೊಸ ಟಿಕೆಟ್​ ದರದೊಂದಿಗೆ ಜನರ ಸೇವೆಗೆ ಬಸ್ ಗಳು ಓಡಾಟ ಮಾಡಲಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಸಗಿ ಸಿಟಿ ಮತ್ತು ಸರ್ವೀಸ್ ಬಸ್ ಗಳು ಓಡಾಟ ಆರಂಭಿಸಿದ್ದು, ಮುಂದಿನ 6 ದಿನದ ಒಳಗೆ ಹಂತ-ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಸಂಚಾರ ನಡೆಸಲಿದೆ.

ಬಸ್ ಮಾಲೀಕರ ಒತ್ತಾಯದಂತೆ ಸರ್ಕಾರ 3 ತಿಂಗಳ ತೆರಿಗೆ ವಿನಾಯಿತಿ ಮಾಡಿದೆ. ಇದರಿಂದ ಬಸ್ ಓಡಾಟ ನಡೆಸಲು ಮಾಲೀಕರೂ ಒಪ್ಪಿಗೆ ನೀಡಿದ್ದಾರೆ‌. ಸರ್ಕಾರವೂ ಈಗಾಗಲೇ ಶೇ. 15ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಅವಕಾಶ ನೀಡಿದೆ. ಚಿಲ್ಲರೆ ಅಭಾವ ನೀಗಿಸಲು ದರವನ್ನು ರೌಂಡ್ ಅಪ್ ಮಾಡಲು ಬಸ್ ಮಾಲೀಕರ ಸಂಘ ನಿರ್ಧಾರ ಮಾಡಿದೆ. ಕೊರೋನಾ ಸುರಕ್ಷತಾ ನಿಯಮದಂತೆಯೇ ಬಸ್ ಓಡಾಟವಾಗಲಿದ್ದು, ನಾಳೆಯಿಂದ ಬಸ್ ದರ ಹೆಚ್ಚಳ ಮಾಡುವ ನಿರ್ಧಾರವನ್ನು ಕೆನರಾ ಬಸ್ ಮಾಲೀಕರ ಸಂಘ ಕೈಗೊಂಡಿದೆ.

ಇದನ್ನೂ ಓದಿ: ಇಂದು ಕರ್ನಾಟಕಕ್ಕೆ ಮುಂಗಾರು ಪ್ರವೇಶ; ಹಲವೆಡೆ ಭಾರೀ ಮಳೆ ಸಾಧ್ಯತೆ

ಕೇಂದ್ರ ಸರ್ಕಾರ ನೂತನ ನಿಯಮದಂತೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬಸ್ ಸಂಚಾರ ಮಾಡಲಿದೆ. ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘಟನೆಯ 135, ಉಡುಪಿ ಸಿಟಿ ಬಸ್ ಮಾಲೀಕರ ಸಂಘಟನೆಯ 22, ಕೆನರಾ ಬಸ್ ಮಾಲೀಕರ ಸಂಘಟನೆಯ 500 ಬಸ್​ಗಳು ಸಂಚಾರ ಆರಂಭಿಸಲಿವೆ. ಪ್ರಯಾಣಿಕರ ಸ್ಪಂದನೆಯನ್ನು ಆಧರಿಸಿ ಎಲ್ಲಾ ಮಾರ್ಗಗಳಲ್ಲಿಯೂ ಬಸ್ ಓಡಾಟ ಮಾಡಲಿದೆ. ಬೆಂಗಳೂರಿಗೂ ರಾತ್ರಿ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದ್ದು, ಉಡುಪಿ-ಬೆಂಗಳೂರು ಬಸ್ ದರ 1,200 ರೂ. ಗೆ ಏರಿಕೆಯಾಗಲಿದೆ.

City Bus Service starting from Tomorrow in Mangaluru Udupi
ಮಂಗಳೂರಿನಲ್ಲಿ ಸಂಚಾರಕ್ಕೆ ಸಿದ್ಧವಾಗಿರುವ ಬಸ್​


ಬಸ್ ಗಳಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುವುದು‌. ಅಲ್ಲದೆ ಸ್ಯಾನಿಟೈಸರ್ ಬಳಕೆ, ಬಸ್ ಸ್ಯಾನಿಟೈಸೇಶನ್ ಇತ್ಯಾದಿ ಖರ್ಚುಗಳನ್ನು ಆಧರಿಸಿ ಬಸ್ ಪ್ರಯಾಣದರ ಹೆಚ್ಚಳ ಮಾಡಲಾಗಿದೆ. ಮಂಗಳೂರಿನ ಸಿಟಿ ಬಸ್ ಗಳಲ್ಲಿ ಕನಿಷ್ಠ ಪ್ರಯಾಣದ ದರವನ್ನು 10 ರೂ.ಗೆ ಏರಿಸಲಾಗಿದೆ. ನಂತರದ ಸ್ಟೇಜ್​ಗಳಿಗೆ 12, 15, 20 ರೂ.ನಂತೆ ನಿಗದಿ ಮಾಡಲಾಗುತ್ತದೆ.

ಇದನ್ನೂ ಓದಿ: 2ನೇ ಅವಧಿಯ ಸಾಧನೆ ಬಗ್ಗೆ ಮೋದಿ ದೇಶದ ಪ್ರತಿಯೊಬ್ಬರಿಗೂ ಪತ್ರ ಬರೆಯುತ್ತಾರೆ; ನಳೀನ್ ಕುಮಾರ್ ಕಟೀಲ್ನಾಳೆಯಿಂದ ಬಸ್​ ದರವೆಷ್ಟು?:

ಮಣಿಪಾಲ-ಮಂಗಳೂರು- 80 ರೂ, ಉಡುಪಿ -ಮಂಗಳೂರು-80 ರೂ, ಕಾರ್ಕಳ-ಪಡುಬಿದ್ರೆ-ಮಂಗಳೂರು-65 ರೂ, ಕುಂದಾಪುರ-ಮಂಗಳೂರು- 120 ರೂ, ಕುಂದಾಪುರ-ಉಡುಪಿ-55 ರೂ, ಕಾರ್ಕಳ-ಮೂಡಬಿದ್ರೆ-ಮಂಗಳೂರು-62 ರೂ, ಉಡುಪಿ-ಹಿರಿಯಡ್ಕ-ಕಾರ್ಕಳ-45 ರೂ. ನಿಗದಿಪಡಿಸಲಾಗಿದೆ.  ಇದರ ಜೊತೆಗೆ ಕೊರೋನಾ ಎಫೆಕ್ಟ್ ಗೆ ಮಂಗಳೂರಿನ ಖಾಸಗಿ ಬಸ್ ಗಳಿನ್ನು ಕ್ಯಾಶ್ ಲೆಸ್ ಮಾಡುವ ನಿರ್ಧಾರ ಮಾಡಲಾಗಿದೆ‌‌. ಹಣ ಬದಲಾವಣೆ ವೇಳೆ ಸೋಂಕು ಹರಡುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ಸಂಚಾರದಲ್ಲಿ ಕ್ಯಾಶ್ ಲೆಸ್ ವಹಿವಾಟು ಮಾಡಲಾಗುತ್ತದೆ. ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ತಂತ್ರಜ್ಞಾನ ‌ಮಂಗಳೂರಿನಲ್ಲಿ ಬಳಕೆಯಾಗಲಿದ್ದು, ಪ್ರಯಾಣಿಕರು ಮತ್ತು ನಿರ್ವಾಹಕರ ಮಧ್ಯೆ ‌ಇನ್ಮುಂದೆ ಹಣ ಬದಲಾವಣೆ ನಡೆಯಲ್ಲ. ಕಾರ್ಡ್ ಮೂಲಕ ನೇರ ಖಾತೆಯಿಂದಲೇ ಟಿಕೆಟ್ ದರ ಕಡಿತವಾಗಲಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಗಾಯಗೊಂಡಿದ್ದ ಹಾವಿನ ರಕ್ಷಣೆ; ಕಾಡಿಗೆ ಬಿಡೋ ಮೊದಲೇ 48 ಮರಿಗಳಿಗೆ ಜನ್ಮ ನೀಡಿದ ಕೊಳಕು ಮಂಡಲ

ಕರಾವಳಿಯಲ್ಲಿ ಪ್ರತೀ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಕ್ಕೆ ಡಿಜಿಟಲ್ ಕಾರ್ಡ್ ‌ಹಂಚಿಕೆ ಮಾಡಲಾಗುತ್ತದೆ. ಕಾರ್ಡ್​ಗೆ ರೀಚಾರ್ಜ್ ಮಾಡಿ ಖಾಸಗಿ ಬಸ್ ಗಳಲ್ಲಿ ಸಂಚಾರ ಮಾಡಬಹುದಾಗಿದೆ. ನಿರ್ವಾಹಕನ ಬಳಿಯ ಮಷಿನ್​ಗೆ ಕಾರ್ಡ್ ತೋರಿಸಿದರೆ ಸೆನ್ಸಾರ್ ಮೂಲಕ ಟಿಕೆಟ್ ದರ ಕಡಿತವಾಗುತ್ತದೆ. ಆದರೆ, ಈ ಪ್ರಯೋಗ ಇನ್ನು ಕಾರ್ಯರೂಪಕ್ಕೆ ಬರಬೇಕಾಗಿದ್ದು, ಜನರ ಸ್ಪಂದನೆ‌ ದೊರೆತರೆ ಮಾತ್ರ ಯಶಸ್ವಿಯಾಗಲಿದೆ. ಒಟ್ಟಿನಲ್ಲಿ ಕರಾವಳಿಯ ಜನ ಅತಿ ಹೆಚ್ಚಾಗಿ ಬಳಸುವ ಖಾಸಗಿ ಬಸ್ ಗಳ ಓಡಾಟ ಜನರಲ್ಲಿ ಖುಷಿ ತಂದರೆ, ಬಸ್ ದರ ಏರಿಕೆ ಶಾಕ್ ನೀಡಿದೆ.
First published: June 1, 2020, 2:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading