Animal Feeders Pass: ಬೀದಿ ಪ್ರಾಣಿಗಳಿಗೆ ಅನ್ನಾಹಾರ ನೀಡುವವರು ಹೀಗೆ ಮಾಡಿ ಎಂದು ಸಿಹಿ ಸುದ್ದಿ ಕೊಟ್ಟ ಮನೇಕಾ ಗಾಂಧಿ

Covid19 | Coronavirus Live News: ಲಾಕ್​ಡೌನ್​ನಿಂದಾಗಿ ಬೀದಿಯಲ್ಲಿ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದವರೂ ಈಗ ಮನೆಗಳಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗಲೇ ಸಂಸದೆ ಮನೇಕಾ ಗಾಂಧಿ ಸಿಹಿ ಸುದ್ದಿ ಕೊಟ್ಟಿದ್ದಾರೆ.

Anitha E | news18-kannada
Updated:March 26, 2020, 6:50 PM IST
Animal Feeders Pass: ಬೀದಿ ಪ್ರಾಣಿಗಳಿಗೆ ಅನ್ನಾಹಾರ ನೀಡುವವರು ಹೀಗೆ ಮಾಡಿ ಎಂದು ಸಿಹಿ ಸುದ್ದಿ ಕೊಟ್ಟ ಮನೇಕಾ ಗಾಂಧಿ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ಭೀತಿಯಿಂದಾಗಿ ಇಡೀ ದೇಶವೇ ಲಾಕ್​ಡೌನ್ ಆಗಿದೆ. ಇದರಿಂದಾಗಿ ಜನರು ಮನೆಗಳಿಂದ ಹೊರಬರುವುದು ಇರಲಿ ಅಂಗಡಿ ಮುಂಗಟ್ಟುಗಳೂ ಸರಿಯಾಗಿ ತೆರೆಯುತ್ತಿಲ್ಲ. ಹೋಟೆಲ್​ ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ಆಹಾರಕ್ಕಾಗಿ ಅವಲಂಬಿತವಾಗಿದ್ದ ಬೀದಿಯಲ್ಲಿ ವಾಸಿಸುವ ಪ್ರಾಣಿಗಳು ಈಗ ಹಸಿವಿನಿಂದ ಬಳಲುವಂತಾಗಿವೆ.

ಲಾಕ್​ಡೌನ್​ನಿಂದಾಗಿ ಬೀದಿಯಲ್ಲಿ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದವರೂ ಈಗ ಮನೆಗಳಿಂದ ಹೊರ ಬಾರದ ಪರಿಸ್ಥಿತಿಯಲ್ಲಿದ್ದಾರೆ. ಹೀಗಿರುವಾಗಲೇ ಬೀದಿಬದಿಯ ಪ್ರಾಣಿಗಳಿಗೆ ಅನ್ನಾಹಾರ ನೀಡುವವರಿಗೆ ಸಂಸದೆ ಮನೇಕಾ ಗಾಂಧಿ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಸಂಗ್ರಹ ಚಿತ್ರ


ಆಯಾ ರಾಜ್ಯಗಳಲ್ಲಿ ಬೀದಿಗಳಲ್ಲಿ ವಾಸಿಸುವ ಪ್ರಾಣಿಗಳಿಗೆ ಊಟ ಹಾಕುವ ಸ್ವಯಂಸೇವಕರಿಗೆ ಮನೆಗಳಿಂದ ಹೊರ ಬರಲು ಅನುಮತಿ ನೀಡಲಾಗಿದೆ. ಅದಕ್ಕೆ ಅವರು ಮಾಡಬೇಕಾದ್ದು ಏನು ಅಂತ ಮುಂದೆ ಇದೆ ಓದಿ...
ಬೆಂಗಳೂರಿನಲ್ಲಿ ಪ್ರಾಣಿಗಳಿಗೆ ಫೀಡ್​ ಮಾಡುವವರು ಅನುಮತಿಗಾಗಿ ಬೆಂಗಳೂರು ನಗರ ಪೊಲೀಸ್​ ಆಯಕ್ತರನ್ನು ಸಂಪರ್ಕಿಸುವಂತೆ ಮನೇಕಾ ಗಾಂಧಿ ಟ್ವೀಟ್​ ಮಾಡಿದ್ದಾರೆ. ಸ್ವಯಂಸೇವಕರಿಗೆ ಭಾಸ್ಕರ್​ ರಾವ್​ ಸಹಾಯ ಮಾಡುತ್ತಾರೆ ಎಂದೂ ಅವರು ಬರೆಯುವುದರೊಂದಿಗೆ ಮೊಬೈಲ್​ ಸಂಖ್ಯೆಯನ್ನೂ ಹಂಚಿಕೊಂಡಿದ್ದಾರೆ.

Police Commissioner Bangalore Shri Bhaskar Rao is giving help to all animal feeders. Please contact him at 9480801001.ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿನ ಅನಿಮಲ್​ ಫೀಡರ್ಸ್​ ಈ ಕೆಳಗಿನ ಸಂಖ್ಯೆಗಳಿಗೆ ಪಾಸ್​ಗಾಗಿ ಸಂಪರ್ಕಿಸಬಹುದು.ಇದು ಕೇವಲ ಬೆಂಗಳೂರು ಮಾತ್ರವಲ್ಲದೆ ಆಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನೂ ಮನೇಕಾ ಹಂಚಿಕೊಂಡಿದ್ದಾರೆ. ವಿವರಗಳು ಮುಂದಿದೆ.

ನಟ ಜಾನ್​ ಅಬ್ರಹಾಂ ಸಹ ಮುಂಬೈನಲ್ಲಿ ಬೀದಿ ನಾಯಿಗಳಿಗೆ ಫೀಡ್​ ಮಾಡುವ ಅನಿಮಲ್​ ಮ್ಯಾಟರ್ಸ್​ ಟು ಮಿ ಎನ್ನುವ ಸ್ವಯಂಸೇವಾ ಸಂಘಕ್ಕೆ ಕೈಲಾದಷ್ಟು ಸಹಾಯ ಮಾಡುವಂತೆ ಮನವಿ ಮನವಿ ಮಾಡಿದ್ದಾರೆ. ಈ ಸಂಸ್ಥೆ ಈಗಾಗಲೇ ಮುಂಬೈನಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವ ಕೆಲಸ ಪ್ರಾರಂಭಿಸಿದೆ.ಬೆಂಗಳೂರಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬೀದಿಯಲ್ಲಿ ವಾಸಿಸುವ ಪ್ರಾಣಿಗಳಿಗೆ ಆಹಾರ ಕೊಡುವವರಿಗೆ ಏನೇ ಸಮಸ್ಯೆಗಳಾದರೂ ತಕ್ಷಣವೇ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಬಹುದಾಗಿದೆ ಎಂದು ಮನೇಕಾ ಗಾಂಧಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

Nikhil-Revathi: ಬೇವು ಬೆಲ್ಲ ಹಂಚಿಕೊಂಡು ಸುಖ-ದುಖಃದಲ್ಲಿ ಸಮಪಾಲು ಸ್ವೀಕರಿಸುವುದಾಗಿ ಸಾರಿದ ನಿಖಿಲ್​-ರೇವತಿ..!

First published: March 26, 2020, 6:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading