ಜುಬಿಲೆಂಟ್ಸ್‌ ಮುಗಿತು ಇದೀಗ ಮಂಡ್ಯದ ನಂಟು ಶುರುವಾಯ್ತು: ನಂಜನಗೂಡಿಗೆ ಮತ್ತೆ ಕೊರೋನಾ ನಂಜಿನ ಭಯ

ಇಡೀ ನಂಜನಗೂಡು ಹಾಗೂ ಮೈಸೂರನ್ನು ಕಾಡಿದ್ದ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ನಂಜು ಕಡಿಮೆಯಾಗಿದೆ ಎನ್ನುವಷ್ಟರಲ್ಲೆ ನಂಜನಗೂಡಿಗೆ ಮತ್ತೊಂದು ಆತಂಕ ಎದುರಾಗಿದೆ. ಮಂಡ್ಯದ ಕೊರೊನಾ ಸೋಂಕಿತ ಸಿಡಿಪಿಓ ಮೈಸೂರು ಜಿಲ್ಲೆಯ ನಂಜಗೂಡು ತಾಲೂಕಿನ ಹಲವೆಡೆ ಸಂಚಾರ ನಡೆಸಿದ್ದಾನೆ.

ಮೈಸೂರಿನ ಹೆಳವರಹುಂಡಿ ಗ್ರಾಮದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು.

ಮೈಸೂರಿನ ಹೆಳವರಹುಂಡಿ ಗ್ರಾಮದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು.

  • Share this:
ಮೈಸೂರು (ಮೇ 22); ಇಷ್ಟು ದಿನ ನಂಜನಗೂಡಿಗೆ ಇದ್ದ ಜುಬಿಲೆಂಟ್ಸ್ ಸೋಂಕಿತರ ಆತಂಕ ಮುಗಿಯಿತು ಎನ್ನುವಷ್ಟರಲ್ಲೆ ಇದೀಗಾ ಮತ್ತೊಂದು ಆತಂಕ ಎದುರಾಗಿದೆ. ನಂಜನಗೂಡಿನಲ್ಲಿ ಮತ್ತೆ ಕೊರೊನಾ ನಂಜು ಹರಡುತ್ತಿದ್ದು,  ಮಂಡ್ಯದ ಸೋಂಕಿತ ಸಿಡಿಪಿಓ ನಂಜನಗೂಡಿನಲ್ಲಿ ಹಲವೆಡೆ ಓಡಾಟ ನಡೆಸಿದ್ದು ಇದೀಗಾ ಇಡೀ ಗ್ರಾಮವೆ ಸೀಲ್ ಡೌನ್ ಆಗಿದೆ. ಇನ್ನು ಆತ ತೆರಳಿದ್ದ ದಿನ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭ ಬಂದಿದ್ದ ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಇಡೀ ನಂಜನಗೂಡು ಹಾಗೂ ಮೈಸೂರನ್ನು ಕಾಡಿದ್ದ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ನಂಜು ಕಡಿಮೆಯಾಗಿದೆ ಎನ್ನುವಷ್ಟರಲ್ಲೆ ನಂಜನಗೂಡಿಗೆ ಮತ್ತೊಂದು ಆತಂಕ ಎದುರಾಗಿದೆ. ಮಂಡ್ಯದ ಕೊರೊನಾ ಸೋಂಕಿತ ಸಿಡಿಪಿಓ ಮೈಸೂರು ಜಿಲ್ಲೆಯ ನಂಜಗೂಡು ತಾಲೂಕಿನ ಹಲವೆಡೆ ಸಂಚಾರ ನಡೆಸಿದ್ದಾನೆ. ಇದರಿಂದ ಆತ ಉಳಿದುಕೊಂಡಿದ ಸಿಡಿಪಿಓ ಅಜ್ಜಿಯ ಗ್ರಾಮವಾದ ಹೆಳವರಹುಂಡಿಯನ್ನ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

ಇದೇ ತಿಂಗಳು 19 ರಂದು ನಂಜನಗೂಡು ತಾಲೂಕಿನ ಹೆಳವರ ಹುಂಡಿಗೆ ತನ್ನ ಅಜ್ಜಿ ನೋಡಲು ಅಂತ ಮಂಡ್ಯದಿಂದ ಬಂದಿದ್ದಾನೆ. ದುರದೃಷ್ಟಕ್ಕೆ ಅಂದೆ ಆ ಗ್ರಾಮದಲ್ಲಿ ಈತ ಉಳಿದುಕೊಂಡಿದ್ದ. ಮನೆಯ ಪಕ್ಕದಲ್ಲೆ ಮದುವೆ ಕಾರ್ಯ ಕೂಡ ನಡೆದಿದೆ. ಇದರಿಂದ ಆತನನ್ನು ಸಂಪರ್ಕಿಸಿ ಕೆಲವರು ಮದುವೆಗೆ ಹಾಜರಾಗಿದ್ದಾರೆ. ಹೀಗಾಗಿ ಮದುವೆಗೆ ಹಾಜರಾಗಿದ್ದ ಅಷ್ಟು ಜನರನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಇಡೀ ಗ್ರಾಮವನ್ನೆ ಸೀಲ್ ಡೌನ್ ಮಾಡಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

ಹೆಳವರಹುಂಡಿ ಗ್ರಾಮದಲ್ಲಿ 92 ಕುಟುಂಬಗಳು ವಾಸವಿದ್ದು, 350 ಕ್ಕು ಹೆಚ್ಚು ಜನಸಂಖ್ಯೆ ಹೊಂದಿದೆ. ಇದೀಗಾ ಗ್ರಾಮದ ಪ್ರತಿ ಮನೆಗಳಿಗೆ ಹೋಂ ಕ್ವಾರಂಟೈನ್ ಚೀಟಿ ಅಂಟಿಸಲಾಗಿದ್ದು, ಇಡೀ ಗ್ರಾಮಕ್ಕೆ ಔಷಧಿ ಸಿಂಪಡಣೆ ಮಾಡಲಾಗಿದೆ. ಇನ್ನು ಈ ಗ್ರಾಮದಲ್ಲಿ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಇದ್ದ 30 ಕ್ಕು ಹೆಚ್ಚು ಜನರಿಗೆ ನಂಜನಗೂಡಿನ ಸರ್ಕಾರಿ ಗೃಹದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.

ಅದೇ ರೀತಿ ನಂಜನಗೂಡಿನ ತಾಲೂಕಿನ ಹೆಡಿಯಾಲ, ಅಂಜನಪುರಾ, ಮಡುವಿನಹಳ್ಳಿ ಸೇರಿದಂತೆ ಆತನ ಸಂಪರ್ಕ ಇದ್ದ ಗ್ರಾಮದ ಜನರನ್ನು ಹುಡುಕಿ ಹುಡುಕಿ ಕ್ವಾರಂಟೈನ್ ಮಾಡಲಾಗುತ್ತಿದೆ. ಅಗತ್ಯ ಬಿದ್ದರೆ ಆ ಮೂರು ಗ್ರಾಮಗಳನ್ನ ಸೀಲ್‌ಡೌನ್‌ ಮಾಡುವುದಾಗಿ ತಾಲ್ಲೂಕು ಆಡಳಿತ ಹೇಳಿದೆ. ಅಲ್ಲದೆ ಹಿಂದೆ ನಂಜನಗೂಡಿನ ಸೀಲ್‌ಡೌನ್‌ ಗ್ರಾಮಗಳಿಗೆ ನೀಡಿದ ಎಲ್ಲ ಸೌಲಭ್ಯಗಳನ್ನ ನೀಡುವುದಾಗಿ ತಾಲ್ಲೂಕು ಆಡಳಿತ ಭರವಸೆ ನೀಡಿದ್ದು ಗ್ರಾಮದ ಜನರು ಮುಂದಿನ 14 ದಿನಗಳ ಕಾಲ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ಹಲವು ದಿನಗಳ ನಂತರ ನಂಜನಗೂಡು ತಾಲೂಕಿನ ಗ್ರಾಮಗಳು ಕಂಟೈನ್ಮೆಂಟ್ ಜೋನ್ ನಿಂದ ಮುಕ್ತಿಯಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದವು.  ಈಗಷ್ಟೆ ವ್ಯಾಪಾರ ವಹಿವಾಟು ಆರಂಭವಾಗುತ್ತಿದ್ದವು. ವಾಹನಗಳ ಸಂಚಾರ ಎಂದಿನಂತೆ ರಸ್ತೆಗಳಲ್ಲಿ ಆರಂಭವಾಗಿತ್ತು. ಇನ್ನೆನೋ ಕೊರೊನಾ ಆತಂಕ ತಾಲ್ಲೂಕನ್ನ ಬಿಟ್ಟು ಹೋಯಿತು ಎನ್ನುವಷ್ಟರಲ್ಲಿ ಇದೀಗ ಮಂಡ್ಯ ಮೂಲದ ಅಧಿಕಾರಿಯಿಂದ ಮತ್ತೆ ಆತಂಕ ಶುರುವಾಗಿದ್ದು ಇಡೀ ಗ್ರಾಮವೆ ಸೀಲ್ ಡೌನ್ ಆಗಿದೆ.

ಪರಿಣಾಮ ಮುಂದಿನ ಮೂರು ದಿನಗಳಲ್ಲಿ ಇಡೀ ಗ್ರಾಮದ ಜನರೇಲ್ಲರ ಸ್ಯಾಂಪಲ್ ಪರೀಕ್ಷೆ ಮಾಡಬೇಕಾಗುತ್ತದೆ. ಸರಿಸುಮಾರು 400 ಹೆಚ್ಚು ಸ್ಯಾಂಪಲ್ ಕಲೆ ಹಾಕಿ ವರದಿ ಬಂದ ಮೇಲೆ ಆತನ ಸಂಪರ್ಕದ ಯಾರಲ್ಲಿ ಕೊರೊನಾ ಇದೆ ಅಥವ ಇಲ್ಲ ಅನ್ನೋದನ್ನ ಧೃಡ ಪಡಿಸಿಕೊಳ್ಳಬೇಕಿದೆ.

ಮೈಸೂರಿನಲ್ಲಿ ಇದ್ದ 90 ಕೇಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಮೇಲೆ ಮೈಸೂರು ಕೊರೊನಾ ಮುಕ್ತವಾಯ್ತು ಅನ್ನೋವಷ್ಟರಲ್ಲಿ ಮುಂಬೈ ಲಿಂಕ್‌ನ ಎರಡು ಕೇಸ್‌ಗಳು ಪತ್ತೆಯಾಗಿದ್ದವು. ಇದೀಗ ಮಂಡ್ಯದಿಂದ ಆತಂಕ ಹೊತ್ತು ತಂದಿರುವ ಅಧಿಕಾರಿಯಿಂದ ನಂಜನಗೂಡಿನಲ್ಲಿ ಮತ್ತೆ ಕೊರೊನಾ ನಂಜು ಹರಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ : ಊರಿಗೆ ಕಳುಹಿಸುವುದಾಗಿ ಉತ್ತರ ಭಾರತದ ಕಾರ್ಮಿಕರಿಂದ ಹಣ ವಸೂಲಿ ಮಾಡಿ ವಂಚಿಸಿದ್ದ ವ್ಯಕ್ತಿ ಅಂದರ್‌
First published: