ನವ ದಂಪತಿಗೂ ತಟ್ಟಿದ ಕೊರೋನಾ ಬಿಸಿ; ಚಂದನ್ ಶೆಟ್ಟಿ-ನಿವೇದಿತಾ ಕಡ್ಡಾಯ ತಪಾಸಣೆಗೆ ಆಗ್ರಹ

ಮದುವೆ ನಂತರ ವಿದೇಶ ಪ್ರವಾಸ ಕೈಗೊಂಡಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ. ಇಟಲಿಯಲ್ಲಿ ಈಗಾಗಲೇ ಶೇ 75 ರಷ್ಟು ಭಾಗ ಕೊರೋನಾ ಆವರಿಸಿರುವ ಹಿನ್ನಲೆ ಜಿಲ್ಲಾಧಿಕಾರಿಗಳಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾ  ಮನವಿ ನೀಡಿದೆ

ಚಂದನ್​ ಶೆಟ್ಟಿ, ನಿವೇದಿತಾ ಗೌಡ

ಚಂದನ್​ ಶೆಟ್ಟಿ, ನಿವೇದಿತಾ ಗೌಡ

  • Share this:
ಮೈಸೂರು(ಮಾ.12) : ಹನಿಮೂನ್​ ಟ್ರಿಪ್ ಮುಗಿಸಿಕೊಂಡು ವಿದೇಶದಿಂದ ಭಾರತಕ್ಕೆ ಆಗಮಿಸುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಂಪತಿಗೆ ಕಡ್ಡಾಯವಾಗಿ ಕೊರೋನಾ ತಪಾಸಣೆಗೆ ಒಳಪಡಿಸುವಂತೆ  ಮೈಸೂರು ಜಿಲ್ಲಾಧಿಕಾರಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾ ಸಂಘಟನೆ ಮನವಿ ಮಾಡಿದೆ. ಈ ಮೂಲಕ ಇಬ್ಬರಿಗೂ ಕೊರೋನಾ ಬೀಸಿ ತಟ್ಟಿದೆ. 

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮನವಿ ಸಲ್ಲಿಸಿದ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ರಫೀಕ್ ಅಲಿ. ಮೈಸೂರಿನಲ್ಲಿ ಈವರೆಗೆ ಯಾವುದೇ ಕೊರೋನಾ ಪ್ರಕರಣ ಪತ್ತೆಯಾಗಿಲ್ಲ. ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ ಮದುವೆ ನಂತರ ಹನಿಮೂನ್​ಗೆ ನೆದರ್​​ಲೆಂಡ್​, ಇಟಲಿಗೆ ಹೋಗಿದ್ದಾರೆ. ಅವರು ಮೈಸೂರಿಗೆ ಆಗಮಿಸುವ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಎಂಬ ಕಾರಣದಿಂದ ಅವರನ್ನು ತಪಾಸಣೆ ಮಾಡದೇ ನಿರ್ಲಕ್ಷ್ಯಿಸಬಾರದು. ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅವರನ್ನು ತಪಾಸಣೆಗೆ ಒಳಪಡಿಸಬೇಕೆಂದು ಎನ್​​ಎಸ್​ಯುಐ ಜಿಲ್ಲಾಧ್ಯಕ್ಷ ರಫೀಕ್ ಅಲಿ​​​ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

latter
ಜಿಲ್ಲಾಧಿಕಾರಿ ಸಲ್ಲಿಸಿದ ಮನವಿ ಪತ್ರ


ಮದುವೆ ನಂತರ ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ ತೆರಳಿರುವ ದೇಶದಲ್ಲಿ ಈಗಾಗಲೇ ಶೇ 75 ರಷ್ಟು ಭಾಗ ಕೊರೋನಾ ಆವರಿಸಿದೆ. ಅವರು ವಾಪಸ್ಸಾದ ಕೂಡಲೇ ಅವರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾ  ಮನವಿ ನೀಡಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಐದನೇ ಕೊರೋನಾ ಪಾಸಿಟಿವ್ ಪ್ರಕರಣ: 26 ವರ್ಷದ ಮತ್ತೋರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆ

ಇತ್ತೀಚೆಗಷ್ಟೆ ನವದಾಂಪತ್ಯಕ್ಕೆ ಕಾಲಿಟ್ಟ ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸದ್ಯ ಹನಿಮೂನ್​ ಟ್ರಿಪ್​ನಲ್ಲಿದ್ದಾರೆ. ವಿಶ್ವದೆಲ್ಲೆಡೆ ಕೊರೋನಾ ಭೀತಿ ಇದ್ದರೂ, ಈ ಜೋಡಿ ನಿರಾತಂಕವಾಗಿ ಎಂಜಾಯ್​ ಮಾಡುತ್ತಿದೆ.

 
First published: