HOME » NEWS » Coronavirus-latest-news » MAN PRAY IN FRONT OF GOD AFTER HE GOT ALCOHOL AFTER 40 DAYS IN BAGALKOT MAK

ಇಂದಿನಿಂದ ರಾಜ್ಯದಲ್ಲಿ ಮದ್ಯ ಮಾರಾಟ; ಎಣ್ಣೆ ಸಿಕ್ಕ ಖುಷಿಗೆ ದೇವರ ಗುಡಿಯ ಮುಂದೆ ಧ್ಯಾನಿಸಿದ ಕುಡುಕ!

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ಘಟನೆ ನಡೆದಿದ್ದು ಮದ್ಯಪ್ರಿಯ ಮದ್ಯ ಸಿಕ್ಕ ಖುಷಿಗೆ ಊರಿನ ಹನುಮಂತ ದೇವರ ಗುಡಿ ಮುಂದೆಯೇ ಬಾಟಲ್ ಇಟ್ಟು ಧ್ಯಾನ ಮಾಡಿದ್ದಾನೆ.

MAshok Kumar | news18-kannada
Updated:May 4, 2020, 1:24 PM IST
ಇಂದಿನಿಂದ ರಾಜ್ಯದಲ್ಲಿ ಮದ್ಯ ಮಾರಾಟ; ಎಣ್ಣೆ ಸಿಕ್ಕ ಖುಷಿಗೆ ದೇವರ ಗುಡಿಯ ಮುಂದೆ ಧ್ಯಾನಿಸಿದ ಕುಡುಕ!
ದೇವರ ಗುಡಿ ಎದುರು ಎಣ್ಣೆ ಇಟ್ಟು ಕೈ ಮುಗಿದ ಭಕ್ತ.
  • Share this:
ಬಾಗಕೋಟೆ (ಮೇ 04); ಲಾಕ್‌ಡೌನ್‌ ನಡುವೆಯೂ ರಾಜ್ಯ ಸರ್ಕಾರ ಇಂದಿನಿಂದ ಎಲ್ಲೆಡೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಹೀಗಾಗಿ ಇಂದು ಮದ್ಯ ಸಿಕ್ಕ ಖುಷಿಗೆ ಕುಡುಕನೊಬ್ಬ ಮದ್ಯವನ್ನು ದೇವರ ಗುಡಿಯ ಎದುರೇ ಇಟ್ಟು ಕೆಲವು ನಿಮಿಷಗಳ ಕಾಲ ಧ್ಯಾನ ಮಾಡಿರುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ಘಟನೆ ನಡೆದಿದ್ದು ಮದ್ಯಪ್ರಿಯ ಮದ್ಯ ಸಿಕ್ಕ ಖುಷಿಗೆ ಊರಿನ ಹನುಮಂತ ದೇವರ ಗುಡಿ ಮುಂದೆಯೇ ಬಾಟಲ್ ಇಟ್ಟು ಧ್ಯಾನ ಮಾಡಿದ್ದಾನೆ. ಅಲ್ಲದೆ, ಮದ್ಯ ಸಿಕ್ಕಿದ್ದಕ್ಕೆ ಸಂತಸಗೊಂಡು ತಾನು ದೇವರ ಬಳಿ ಬಂದಿದ್ದಾಗಿ ಆತ ತಿಳಿಸಿದ್ದಾನೆ. ಈ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಎರಡನೇ ಹಂತದ ಲಾಕ್‌ಡೌನ್‌ ಮೇ 03ಕ್ಕೆ ಮುಗಿದಿದೆ. ಆದರೆ, ದೇಶದಲ್ಲಿ ಕೊರೋನಾ ಹಾವಳಿ ಕಡಿಮೆಯಾಗದ ಪರಿಣಾಮ ಈ ಲಾಕ್‌ಡೌನ್ ಅವಧಿಯನ್ನು ಕೇಂದ್ರ ಸರ್ಕಾರ ಇನ್ನೂ ಎರಡು ವಾರಗಳ ಕಾಲ ವಿಸ್ತರಿಸಿದೆ. ಈ ನಡುವೆ ರಾಜ್ಯದಲ್ಲಿ ಇಂದಿನಿಂದ ಎಲ್ಲೆಡೆ ರಾಜ್ಯ ಸರ್ಕಾರ ಕೆಲವು ನಿರ್ಬಂಧಗಳ ಮೇಲೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ಸರ್ಕಾರದ ಈ ನಡೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ : ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ ಇನ್ನೂ 2 ದಿನ ವಿಸ್ತರಣೆ; ಬಿ.ಎಸ್.‌ ಯಡಿಯೂರಪ್ಪ
Youtube Video
First published: May 4, 2020, 1:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories