ಕೊರೋನಾ ಸೋಂಕಿತ ವ್ಯಕ್ತಿಯಿಂದ ಕೋವಿಡ್ ಪಾರ್ಟಿ!; ವೈರಸ್ ಸುಳ್ಳು ಎಂದು ಸಾಬೀತು ಮಾಡಲು ಹೋದವರು ಆಸ್ಪತ್ರೆಗೆ!

ಕೊರೋನಾ ವೈರಸ್​ ಎಂಬುದೇ ಇಲ್ಲ. ಇದು ಇಲ್ಲಿನ ನಾಯಕರೇ ಸೃಷ್ಟಿಸಿರುವ ಒಂದು ನಕಲಿ ವೈರಸ್​ ಎಂಬುದು ಆತನ ನಂಬಿಕೆ ಆಗಿತ್ತು. ಹೀಗಾಗಿ, ಕೊರೋನಾ ವ್ಯಕ್ತಿ ಆಯೋಜಿಸಿದ್ದ ಕೋವಿಡ್​ ಪಾರ್ಟಿಯಲ್ಲಿ ಪಾಲ್ಗೊಂಡಿ​ದ್ದ. ಈ ಪಾರ್ಟಿಗೆ ನೂರಾರು ಜನರು ಬಂದಿದ್ದರು.

news18-kannada
Updated:July 13, 2020, 7:50 AM IST
ಕೊರೋನಾ ಸೋಂಕಿತ ವ್ಯಕ್ತಿಯಿಂದ ಕೋವಿಡ್ ಪಾರ್ಟಿ!; ವೈರಸ್ ಸುಳ್ಳು ಎಂದು ಸಾಬೀತು ಮಾಡಲು ಹೋದವರು ಆಸ್ಪತ್ರೆಗೆ!
ಸಾಂದರ್ಭಿಕ ಚಿತ್ರ.
  • Share this:
ನ್ಯೂಯಾರ್ಕ್​ (ಜು.13): ವಿಶ್ವಾದ್ಯಂತ ಕೊರೋನಾ ವೈರಸ್​ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಇದೆ. ಅದರಲ್ಲೂ ಅಮೆರಿಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಿದ್ದರೂ ವ್ಯಕ್ತಿಯೋರ್ವ ಕೊರೋನಾ ಸೋಂಕು ಇಲ್ಲ ಎಂಬುದನ್ನು ಸಾಬೀತು ಮಾಡಲು ಮುಂದಾಗಿದ್ದ! ಸೋಂಕಿತನೇ ಆಯೋಜಿಸಿದ್ದ ಕೋವಿಡ್​ ಪಾರ್ಟಿಗೆ ತೆರಳಿದ್ದ. ಈಗ ಆತ ಸೇರಿ ನೂರಾರು ಜನರು ಆಸ್ಪತ್ರೆ ಸೇರಿದ್ದಾರೆ!

ಅಮೆರಿಕ ಒಂದರಲ್ಲೇ 34 ಲಕ್ಷ ಜನರಿಗೆ ಕೊರೋನಾ ವೈರಸ್ ಬಂದಿದೆ. 1.37 ಲಕ್ಷ ಜನರು ಮೃತಪಟ್ಟಿದ್ದಾರೆ. ಈ ಮಧ್ಯೆ ಟೆಕ್ಸಾಸ್​ನ ವ್ಯಕ್ತಿಯೋರ್ವ ನಿತ್ಯ ಕೊರೋನಾ ವೈರಸ್​ ಬಗ್ಗೆ ಸುದ್ದಿಗಳನ್ನು ಓದುತ್ತಿದ್ದ. ಆದರೆ, ಆ ವ್ಯಕ್ತಿಗೆ ಇದೆಲ್ಲವೂ ಒಂದು ಹಗರಣದ ರೀತಿಯಲ್ಲಿ ಕಂಡಿದೆ!

ಕೊರೋನಾ ವೈರಸ್​ ಎಂಬುದೇ ಇಲ್ಲ. ಇದು ಇಲ್ಲಿನ ನಾಯಕರೇ ಸೃಷ್ಟಿಸಿರುವ ಒಂದು ನಕಲಿ ವೈರಸ್​ ಎಂಬುದು ಆತನ ನಂಬಿಕೆ ಆಗಿತ್ತು. ಹೀಗಾಗಿ, ಕೊರೋನಾ ವ್ಯಕ್ತಿ ಆಯೋಜಿಸಿದ್ದ ಕೋವಿಡ್​ ಪಾರ್ಟಿಯಲ್ಲಿ ಪಾಲ್ಗೊಂಡಿ​ದ್ದ. ಈ ಪಾರ್ಟಿಗೆ ನೂರಾರು ಜನರು ಬಂದಿದ್ದರು.

ಈ ಪಾರ್ಟಿಯಿಂದ ಈತ ಸೇರಿದಂತೆ ಅನೇಕರಿಗೆ ಕೊರೋನಾ ಬಂದಿದೆ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಆತ ತಾನು ಮಾಡಿದ್ದು ದೊಡ್ಡ ತಪ್ಪು ಎಂದು ಆತನಿಗೆ ಮನವರಿಕೆ ಆಗಿದೆ ಎನ್ನಲಾಗಿದೆ.

ಯುವಕರಿಗೆ ಕೊರೋನಾ ಬಂದರೆ ಯಾವುದೇ ಲಕ್ಷಣ ಕಾಣಿಸುವುದಿಲ್ಲ​. ಆದರೆ, ಈ ವೈರಸ್​ ಅವರ ದೇಹದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆಯಂತೆ. ಈ ಬಗ್ಗೆ ಅವರಿಗೆ ಗೊತ್ತಾಗುವುದಿಲ್ಲ ಎಂಬುದು ವೈದ್ಯರ ಅಭಿಪ್ರಾಯ.

ಅಮೆರಿಕದಲ್ಲಿ ಹೆಚ್ಚುತ್ತಿದೆ ಕೊರೋನಾ:ಕೊರೋನಾ ಸೋಂಕು ಅಮೆರಿಕದಲ್ಲಿ ತಹಬದಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಕಾಡ್ಗಿಚ್ಚಿನಂತೆ ಹರಡಿರುವ ವೈರಸ್​ ಅನ್ನು ನಿಯಂತ್ರಣ ಮಾಡುವುದು ಅಸಾಧ್ಯ ಎಂಬಂತಾಗಿಬಿಟ್ಟಿದೆ. ಅಮೆರಿಕ ಒಂದರಲ್ಲೇ 34 ಲಕ್ಷ ಜನರಿಗೆ ಕೊರೋನಾ ವೈರಸ್ ಬಂದಿದೆ. 1.37 ಲಕ್ಷ ಜನರು ಮೃತಪಟ್ಟಿದ್ದಾರೆ. ವಿಚಿತ್ರ ಎಂದರೆ ಶನಿವಾರ ಒಂದೇ ದಿನ 45 ಸಾವಿರ ಹೊಸ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಕೊರೋನಾ ನಿಯಂತ್ರಣದಲ್ಲಿ ಟ್ರಂಪ್​ ವಿಫಲರಾಗಿರುವ ವಿಚಾರವನ್ನು ವಿರೋಧ ಪಕ್ಷದವರು ಚುನಾವಣಾ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
Published by: Rajesh Duggumane
First published: July 13, 2020, 7:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading