ಇದಪ್ಪಾ ಫ್ರೆಂಡ್​​ಶಿಪ್​​ ಅಂದ್ರೆ.. ಗೆಳೆಯನನ್ನು ಎಳೆದು ಕರೆ ತಂದು ಲಸಿಕೆ ಹಾಕಿಸಿದ ಕಾಮಿಡಿ ವಿಡಿಯೋ ವೈರಲ್!

Friends Covid shot video now viral: ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಗೆಳೆಯನನ್ನು ಹಿಡಿದು ಎಳೆದುಕೊಂಡು ಲಸಿಕಾ ಕೇಂದ್ರಕ್ಕೆ ಕರೆ ತಂದು ಲಸಿಕೆ ಕೊಡಿಸಿದ್ದಾರೆ. ಗೆಳೆಯನನ್ನು ಎಳೆದು ಕರೆ ತರುವ ವಿಡಿಯೋ ವೈರಲ್​ ಆಗಿದ್ದು ನೋಡುಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದೆ.

ಗೆಳೆಯನನ್ನು ಎಳೆದು ಕರೆ ತರುತ್ತಿರುವುದು

ಗೆಳೆಯನನ್ನು ಎಳೆದು ಕರೆ ತರುತ್ತಿರುವುದು

  • Share this:
ಸದ್ಯ ಭಾರತದಲ್ಲಿ ಕೊರೊನಾ ವಿರುದ್ಧ ಮೆಗಾ ಲಸಿಕಾ ಅಭಿಯಾನ ನಡೆಯುತ್ತಿದೆ. ವಿಶ್ವದಲ್ಲೇ ಬೃಹತ್​ ಪ್ರಮಾಣದಲ್ಲಿ ಲಸಿಕಾ ಅಭಿಯಾನ ದೇಶಾದ್ಯಂತ ನಡೆಯುತ್ತಿದೆ. ಕೋಟ್ಯಂತರ ಮಂದಿ ಈಗಾಗಲೇ 2 ಡೋಲ್​ ಲಸಿಕೆ ಪಡೆದು ಸೋಂಕಿನ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಆದರೆ ಇನ್ನೂ ಹಲವರು ವ್ಯಾಕ್ಸಿನ್​ ಅಂದೊಡನೆ ಮಾರುದ್ದ ಓಡಿ ಹೋಗ್ತಿದ್ದಾರೆ. ಇತ್ತೀಚೆಗಷ್ಟೇ ರಾಜ್ಯದಲ್ಲಿ ಅಜ್ಜಿಯೊಬ್ಬರು ಲಸಿಕೆ ಬೇಡವೇ ಬೇಡ ಎಂದ ಹಠ ಮಾಡಿದ ವಿಡಿಯೋ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ವ್ಯಾಕ್ಸಿನ್​​ ಪ್ರಹಸನದ ವಿಡಿಯೋ ವೈರಲ್​ ಆಗಿದೆ. ಇಲ್ಲೊಬ್ಬ ಆಸಾಮಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಗೆಳೆಯನನ್ನು ಹಿಡಿದು ಎಳೆದುಕೊಂಡು ಲಸಿಕಾ ಕೇಂದ್ರಕ್ಕೆ ಕರೆ ತಂದು ಲಸಿಕೆ ಕೊಡಿಸಿದ್ದಾರೆ. ಗೆಳೆಯನನ್ನು ಎಳೆದು ಕರೆ ತರುವ ವಿಡಿಯೋ ವೈರಲ್​ ಆಗಿದ್ದು ನೋಡುಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದೆ.

ಜಪ್ಪಯ್ಯ ಅಂದ್ರು ಇಂಜೆಕ್ಷನ್​​ ಬೇಡ ಎನ್ನುತ್ತಿರುವ ಗೆಳೆಯನನ್ನು ಹಿಡಿದು ಲಸಿಕಾ ಕೇಂದ್ರದ ಬಾಗಿಲಿಗೆ ಕರೆತರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಂದು ನಿಮಿಷ 20 ಸೆಕೆಂಡ್​​ಗಳ ವಿಡಿಯೋದಲ್ಲಿ ವ್ಯಕ್ತಿ ತನ್ನ ಗೆಳೆಯನನ್ನು ಒತ್ತಾಯದಿಂದ ಕರೆ ತಂದಿದ್ದಾನೆ. ಲಸಿಕೆಯಿಂದ ತಪ್ಪಿಸಿಕೊಳ್ಳಲು ಗೆಳೆಯ ಸಾಕಷ್ಟು ಪ್ರಯತ್ನಿಸಿದ್ದಾನೆ. ಕೊನೆಗೆ ಲಸಿಕಾ ಸಿಬ್ಬಂದಿ ಸೇರಿದಂತೆ ಸ್ಥಳೀಯರು ವ್ಯಕ್ತಿಯನ್ನು ಕೇಂದ್ರದ ಒಳಗೆ ಕರೆ ತರಲು ಯತ್ನಿಸಿದ್ದಾರೆ. ಬಾಗಿಲ ಬಳಿ ಒಳಗೆ ಬರದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಲಸಿಕಾ ಸಿಬ್ಬಂದಿಯೇ ಹೊರಗೆ ಬಂದು ಲಸಿಕೆ ನೀಡಲು ಮುಂದಾಗುತ್ತಾರೆ. ಗೆಳೆಯ ಸೇರಿದಂತೆ ಸ್ಥಳದಲ್ಲಿದ್ದವರು ವ್ಯಕ್ತಿಯನ್ನು ಹಿಡಿದು ಲಸಿಕೆ ಕೊಡಿಸಿದ್ದಾರೆ. ಇಂಜೆಕ್ಷನ್​ಗೆ ಹೆದರಿ ನೆಲದ ಮೇಲೆ ಬಿದ್ದು ಒದ್ದಾಡಿದರು ಬಿಡದೇ ವ್ಯಾಕ್ಸಿನ್​ ಹಾಕಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. ಲಸಿಕೆಗಾಗಿ ಫ್ರೆಂಡ್​ ಪಟ್ಟ ಪಾಡನ್ನು ಕಂಡು ಶಬಬಾಶ್​ಗಿರಿ ಕೊಟ್ಟಿದ್ದಾರೆ. ಇದಪ್ಪಾ ಫ್ರೆಂಡ್​ ಶಿಪ್​ ಎಂದು ಗೆಳೆಯನನ್ನು ಹೊಗಳಿದ್ದಾರೆ. ಇನ್ನು ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿರುವುದು ಎನ್ನಲಾಗುತ್ತಿದೆ.

ಇನ್ನು ಮತ್ತೊಂದು ವೈರಲ್​ ವಿಡಿಯೋದಲ್ಲಿ ಯುವತಿಯೊಬ್ಬರು ಹೆದರಿಕೊಂಡ ಲಸಿಕೆ ಪಡೆದಿರುವುದು ನೆಟ್ಟಿಗರಿಗೆ ಭರ್ಜರಿ ಆಹಾರವಾಗಿದೆ. ಇಂಜೆಕ್ಷನ್​ ಭಯದಲ್ಲಿ ಯುವತಿ ಕಿರುಚಾಡಿದ್ದಾಳೆ. ಲಸಿಕೆ ಹಾಕುವಾಗ ಕನಿಷ್ಟ ಅಮ್ಮ ಎಂದು ಕಿರುಚಲಾ ಎಂದು ಯುವತಿ ಹೇಳಿದ್ದಾಳೆ. ಅದಕ್ಕೆ ಲಸಿಕಾ ಕೇಂದ್ರದ ಸಿಬ್ಬಂದಿ ಏನನ್ನೂ ಕಿರಚದಂತೆ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಯುವತಿಯ ಓವರ್​​ ಆಕ್ಷನ್​​, ಲಸಿಕಾ ಸಿಬ್ಬಂದಿಯ ರಿಯಾಕ್ಷನ್​​ ನೆಟ್ಟಿಗರಿಗೆ ಸಖತ್​ ಮಜಾ ಕೊಡುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: