• ಹೋಂ
  • »
  • ನ್ಯೂಸ್
  • »
  • Corona
  • »
  • ಎಲ್ಲಾ ಎಣ್ಣೆಗಾಗಿ: ಮದ್ಯದ ಅಂಗಡಿಗಳಿಗೆ ತೆರೆಯುವಂತೆ ಸುಳ್ಳು ಆದೇಶವನ್ನೇ ಹೊರಡಿಸಿದ ಈ ಭೂಪ

ಎಲ್ಲಾ ಎಣ್ಣೆಗಾಗಿ: ಮದ್ಯದ ಅಂಗಡಿಗಳಿಗೆ ತೆರೆಯುವಂತೆ ಸುಳ್ಳು ಆದೇಶವನ್ನೇ ಹೊರಡಿಸಿದ ಈ ಭೂಪ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮದ್ಯದಂಗಡಿಗಳನ್ನು ತೆರೆಯುವ ಕುರಿತು ತೆಲಂಗಾಣ ರಾಜ್ಯ ಸರ್ಕಾರದ ಅಬಕಾರಿ ಇಲಾಖೆ ಯಾವುದೇ ಆದೇಶವನ್ನೂ ಹೊರಡಿಸಿಲ್ಲ. ಇದೊಂದು ನಕಲಿ ಆದೇಶ ಪತ್ರವಾಗಿದೆ

  • Share this:

ಹೈದರಾಬಾದ್​​(ಮಾ.31) : ಕೊರೋನಾ ಲಾಕ್​ಡೌನ್​ನಿಂದಾಗಿ  ಮದ್ಯದ ಅಂಗಡಿಗಳನ್ನು ಬಂದ್​​ ಮಾಡಲಾಗಿದೆ. ಮದ್ಯ ವ್ಯಸನಿಗಳಲ್ಲಿ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೇರಳ, ತೆಲಂಗಾಣ ಸೇರಿದಂತೆ ನಮ್ಮ ರಾಜ್ಯದಲ್ಲೂ ಇದೇ ಕಾರಣಕ್ಕೆ ಆತ್ಮಹತ್ಯೆಗೀಡಾದ ಘಟನೆಗಳು ನಡೆದಿವೆ. ಹೀಗಿರುವಾಗಲೇ ತೆಲಂಗಾಣದಲ್ಲಿ ಮದ್ಯದಂಗಡಿಗಳನ್ನು ಮತ್ತೆ ತೆರೆಯುವ ಸುದ್ದಿ ಹರಿದಾಡುತ್ತಿದೆ. 


ಕಳೆದ ಶನಿವಾರದಿಂದ ತೆಲಂಗಾಣದಲ್ಲಿ ಮದ್ಯದಂಗಡಿಗಳನ್ನು ಒಂದು ಗಂಟೆಗಳ ಕಾಲ ತೆರೆಯುವ ಕುರಿತು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಯ ಜಾಡು ಹಿಡಿದ ಪೊಲೀಸರಿಗೆ ಸಿಕ್ಕಿದ್ದು, ಸರ್ಕಾರಿ ಆದೇಶವನ್ನು ನಕಲು ಮಾಡಿದ ವಿಷಯ.


ಕಳೆದ ಶನಿವಾರ ಸಮಾಜಿಕ ಜಾಲತಾಣದಲ್ಲಿ ರಾಜ್ಯಾದ್ಯಂತ ಎರಡು ಗಂಟೆಗಳ ಕಾಲ ವೈನ್​ ಶಾಪ್​ಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಅಬಕಾರಿ ಇಲಾಖೆ ದೂರು ನೀಡಿತ್ತು. ಇದರ ಹಿನ್ನೆಲೆಯಲ್ಲಿ ಇಲ್ಲಿಯ ಉಪ್ಪಲ್​​ ಪ್ರದೇಶದ ಸನ್ನಿ ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಈತ ನಕಲಿ ಸರ್ಕಾರಿ ಆದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನಂತೆ.  ಇಂತಹ ನಕಲಿ ಸುದ್ದಿಗಳನ್ನು ತಯಾರಿಸಿ ಪ್ರಸಾರ ಮಾಡುವವರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗುತ್ತದೆ ಎಂದು ನಗರ ಪೊಲೀಸ್​ ಆಯುಕ್ತ ಅಂಜನಿ ಕುಮಾರ್​​ ತಿಳಿಸಿದ್ದಾರೆ.


ಇದನ್ನೂ ಓದಿ : ಟ್ಯಾಕ್ಸ್ ಕಟ್ಟಿದ್ದಕ್ಕೂ ಸಾರ್ಥಕ: ಗುಣಮುಖರಾದ ಕೊರೋನಾ ರೋಗಿ ವೆಂಕಟ ರಾಘವನ್ ಅನುಭವಗಳು


ಮದ್ಯದಂಗಡಿಗಳನ್ನು ತೆರೆಯುವ ಕುರಿತು ತೆಲಂಗಾಣ ರಾಜ್ಯ ಸರ್ಕಾರದ ಅಬಕಾರಿ ಇಲಾಖೆ ಯಾವುದೇ ಆದೇಶವನ್ನೂ ಹೊರಡಿಸಿಲ್ಲ. ಇದೊಂದು ನಕಲಿ ಆದೇಶ ಪತ್ರವಾಗಿದೆ. ಕೊರೋನಾದಿಂದಾಗಿ ಮಾಡಲಾಗಿರುವ ಲಾಕ್​​ ಡೌನ್​​ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರದ ಸೂಚನೆಯಂತೆ ಎಲ್ಲ ಚಿಲ್ಲರೆ ಮದ್ಯದಂಗಡಿಗಳು ( 2.400ಕ್ಕೂ ಹೆಚ್ಚು ಹಾಗೂ  700 ಕ್ಕೂ ಹೆಚ್ಚು ಬಾರ್​​ಗಳಿಗೆ) ಮುಚ್ಚಿವೆ.
Published by:G Hareeshkumar
First published: