• Home
  • »
  • News
  • »
  • coronavirus-latest-news
  • »
  • Modi V/S Didi: ಕೊರೋನಾ ಸಂಕಷ್ಟ ‘ಮೋದಿ ನಿರ್ಮಿತ ದುರಂತ’ ಎಂದು ತಿವಿದ ಬಂಗಾಳದ ಸಿಎಂ ದೀದಿ..!

Modi V/S Didi: ಕೊರೋನಾ ಸಂಕಷ್ಟ ‘ಮೋದಿ ನಿರ್ಮಿತ ದುರಂತ’ ಎಂದು ತಿವಿದ ಬಂಗಾಳದ ಸಿಎಂ ದೀದಿ..!

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

ಬಡ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ, ಔಷಧಿ ನೀಡುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇಷ್ಟೆಲ್ಲಾ ದುರಂತಗಳು ಸಂಭವಿಸುತ್ತಿದ್ದರೂ ಮೋದಿ ಧೈರ್ಯವಾಗಿರಿ ಎಂದು ಕೇವಲ ಭಾಷಣ ಮಾಡುತ್ತಾರೆ.

  • Share this:

ಕೊಲ್ಕತ್ತಾ (ಏ.21): ದೇಶವನ್ನು ಲಾಕ್​ಡೌನ್​ನಿಂದ ತಪ್ಪಿಸಬೇಕು ಎಂದು ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಈಗಿನ ಕೊರೋನಾ ಸಂಕಷ್ಟ ‘ಮೋದಿ ನಿರ್ಮಿತ ದುರಂತ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬಂಗಾಳದ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ದೀದಿ, ಕೊರೋನಾ 2ನೇ ಅಲೆ ಭೀಕರತೆಗೆ ಪಿಎಂ ಮೋದಿಯೇ ಕಾರಣ ಎಂದು ಅಪಾದಿಸಿದ್ದಾರೆ. ನಿಮಗೆ ಕೊರೋನಾ ಸಂಕಷ್ಟವನ್ನು ನಿಭಾಹಿಸಲು ಸಾಧ್ಯವಾಗುತ್ತಿಲ್ಲವಾದರೆ ಪ್ರಧಾನಿ ಕುರ್ಚಿಯಿಂದ ಕೆಳಗಿಳಿಯಿರಿ ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.


ಹಲವು ರಾಜ್ಯಗಳಲ್ಲಿ ಆಕ್ಸಿಜನ್​, ವ್ಯಾಕ್ಸಿನ್​ ಕೊರತೆ ಉಂಟಾಗಿದೆ. ಆಸ್ಪತ್ರೆಗಳಲ್ಲಿ ಬೆಡ್​ ಸಿಗದೇ ಜನ ಪ್ರಾಣ ಬಿಡುತ್ತಿದ್ದಾರೆ. ಬಡ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ, ಔಷಧಿ ನೀಡುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇಷ್ಟೆಲ್ಲಾ ದುರಂತಗಳು ಸಂಭವಿಸುತ್ತಿದ್ದರೂ ಮೋದಿ ಧೈರ್ಯವಾಗಿರಿ ಎಂದು ಕೇವಲ ಭಾಷಣ ಮಾಡುತ್ತಾರೆ. ಮೋದಿ ದುರಾಡಳಿತವೇ ದೇಶದ ಇಂದಿನ ದುಸ್ಥಿತಿಗೆ ಕಾರಣ ಎಂದು ದೀದಿ ಆರೋಪಗಳ ಸುರಿಮಳೆ ಗೈದಿದ್ದಾರೆ.


ನಿನ್ನೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಮೋದಿ ಕೊರೋನಾ 2ನೇ ಅಲೆಯನ್ನು ಧೈರ್ಯದಿಂದ ಎದುರಿಸೋಣ. ಲಾಕ್​ಡೌನ್​ ನಮ್ಮ ಕೊನೆಯ ಅಸ್ತ್ರವಾಗಬೇಕು. ದೇಶಕ್ಕೆ ಲಾಕ್​ಡೌನ್​ ಅಗತ್ಯವಿಲ್ಲ ಎಂದಿದ್ದರು. ಲಾಕ್​ಡೌನ್​ ನಿರ್ಧಾರವನ್ನು ರಾಜ್ಯಗಳ ಹೆಗಲಿಗೆ ಹೊರಿಸಿದ್ದರು.


ದೇಶದಲ್ಲಿ ಮತ್ತೆ ಕೊರೋನಾ ಯುದ್ಧಭೀತಿ ತಲೆದೋರಿದೆ. ನಿಮ್ಮೆಲ್ಲರ ಸಂಕಷ್ಟಗಳೂ ನನಗೆ ಅರ್ಥವಾಗಿದೆ ಎಂದು ಹೇಳಿದರು. ಜನವರಿ, ಫೆಬ್ರವರಿಯಲ್ಲಿ ಲಸಿಕೆ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.  ನಮ್ಮ ಸವಾಲುಗಳು ದೊಡ್ಡದಾಗಿದೆ. ಆದರೆ ನಾವು ಅವುಗಳನ್ನು ಜಯಿಸಬೇಕು. ನಾವು ನಮ್ಮ ವಿಶ್ವಾಸ ಕಳೆದುಕೊಳ್ಳಬಾರದು ಅಥವಾ ಭಯ ಬೀಳಬಾರದು. ನಾವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನಾವು ಯುದ್ಧದಲ್ಲಿ ಹೋರಾಡಿ ಗೆಲ್ಲಬೇಕು. ದೇಶವನ್ನು ಲಾಕ್​ಡೌನ್​ನಿಂದ ಬಚಾವ್​ ಮಾಡಬೇಕು. ಲಾಕ್​ಡೌನ್​ ಕಡೆಯ ಅಸ್ತ್ರ. ಈ ಅಸ್ತ್ರ ಪ್ರಯೋಗಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಜನರಲ್ಲಿ ಕೊರೋನಾ ಬಗ್ಗೆ ಜಾಗೃತಿ ಮುಖ್ಯ. ಮೈಕ್ರೋ ಕಂಟೋನ್ಮೆಂಟ್ ವಲಯದ ಮೇಲೆ ನಿಗಾ ವಹಿಸಬೇಕಿದೆ ಎಂದಿದ್ದರು.


ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,95,041 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 1,67,457 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,56,16,130ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೇ ಮೊದಲ ಬಾರಿಗೆ ದಿನ ಒಂದರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪಿದ್ದಾರೆ. 2,023 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 1,82,553ಕ್ಕೆ ಏರಿಕೆ ಆಗಿದೆ.

Published by:Kavya V
First published: