‘ಜಿಎಸ್ಟಿ ಪಾಲು ನೀಡದೆ ಕೇಂದ್ರದಿಂದ ರಾಜ್ಯಗಳಿಗೆ ದ್ರೋಹ‘ - ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಪತ್ರ
ನಮಗೀಗ ಬಿಜೆಪಿ ಮೇಲಿದ್ದ ನಂಬಿಕೆ ಸಂಪೂರ್ಣವಾಗಿ ಹೋಗಿದೆ. ರಾಜ್ಯಗಳನ್ನು ನಂಬಿಸಿ ಜಿಎಸ್ಟಿ ತೆರಿಗೆ ಸಂಗ್ರಹ ಮಾಡಿದ ಕೇಂದ್ರ ಬೆನ್ನಿಗೆ ಚೂರಿ ಹಾಕಿದೆ. ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳು ನಮಗೆ ಬೇಡವೇ ಬೇಡ ಎಂದು ದೀದಿ ಖಡಕ್ ಆಗಿ ತಿರಸ್ಕರಿಸಿದ್ಧಾರೆ.
ನವದೆಹಲಿ(ಸೆ.02): ‘ಒಂದು ದೇಶ, ಒಂದು ತೆರಿಗೆ’ ಎನ್ನುವ ನೆಪದಲ್ಲಿ ರಾಜ್ಯಗಳ ಜಿಎಸ್ಟಿ ಪಾಲನ್ನು ಕಿತ್ತುಕೊಂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಈ ಸಂಬಂಧ ಅನೇಕ ರಾಜ್ಯಗಳು ಧ್ವನಿಯೆತ್ತಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಜಿಎಸ್ಟಿ ಪಾಲನ್ನು ನೀಡದ ಕೇಂದ್ರದ ನಡೆಯನ್ನು ಖಂಡಿಸಿದ್ದಾರೆ.
ಕೇಂದ್ರ ಸರ್ಕಾರ ಜಿಎಸ್ಟಿ ಪಾಲು ನೀಡದೆ ರಾಜ್ಯಗಳಿಗೆ ದ್ರೋಹ ಬಗೆದಿದೆ. ನಮ್ಮ ಜಿಎಸ್ಟಿ ಪಾಲು ನೀಡದೆ ಖರ್ಚುಗಳಿಗೆ ಬೇಕಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುತ್ತೇವೆ ಎಂದು ಹೇಳಿ ಕೇಂದ್ರ ಎರಡು ಆಯ್ಕೆಗಳನ್ನು ನೀಡಿದೆ. ಇದು ನಾವು ಬಿಜೆಪಿ ಮೇಲಿಟ್ಟ ನಂಬಿಕೆಗೆ ಬಗೆದ ದ್ರೋಹ. ಇದನ್ನು ನಾವು ತಿರಸ್ಕರಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಪ್ರಧಾನಿಗೆ ಬರೆದ ಪತ್ರದಲ್ಲಿ ಅಸಮಾಧಾನ ಹೊರಹಾಕಿದ್ಧಾರೆ.
ನಮಗೀಗ ಬಿಜೆಪಿ ಮೇಲಿದ್ದ ನಂಬಿಕೆ ಸಂಪೂರ್ಣವಾಗಿ ಹೋಗಿದೆ. ರಾಜ್ಯಗಳನ್ನು ನಂಬಿಸಿ ಜಿಎಸ್ಟಿ ತೆರಿಗೆ ಸಂಗ್ರಹ ಮಾಡಿದ ಕೇಂದ್ರ ಬೆನ್ನಿಗೆ ಚೂರಿ ಹಾಕಿದೆ. ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳು ನಮಗೆ ಬೇಡವೇ ಬೇಡ ಎಂದು ದೀದಿ ಖಡಕ್ ಆಗಿ ತಿರಸ್ಕರಿಸಿದ್ಧಾರೆ.
ರಾಜ್ಯಗಳ ತೆರಿಗೆ ಪಾಲು ಕೊಡಲು ಆಗುವುದಿಲ್ಲ. ನಿಮ್ಮ ಖರ್ಚು- ವೆಚ್ಚಗಳಿಗೆ ಬೇಕಿದ್ದರೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುತ್ತೇವೆ ಎಂದ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಬಹುತೇಕ ರಾಜ್ಯ ಸರ್ಕಾರಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಮೊದಲಿಗೆ ಕೇರಳ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ತೆಲಂಗಾಣ, ಪಶ್ಚಿಮ ಬಂಗಾಳ, ದೆಹಲಿ, ಛತ್ತೀಸ್ಗಢ ರಾಜ್ಯಗಳೂ ಧ್ವನಿ ಎತ್ತಿವೆ.
ಇನ್ನು, ಈ ಬಾರಿ ದೇಶಾದ್ಯಂತ ಕೊರೋನಾ ವೈರಸ್ ಮತ್ತು ಲಾಕ್ಡೌನ್ನಿಂದಾಗಿ ಬಹುತೇಕ ಉದ್ಯಮ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಜಿಎಸ್ಟಿ ಆದಾಯದಲ್ಲಿ ಇಳಿಕೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ 86,449 ಕೋಟಿ ರೂ. ಸಂಗ್ರಹವಾಗಿದೆ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
Published by:Ganesh Nachikethu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ