ಬೆಳೆ ನಾಶ ಮಾಡಲು ಮುಂದಾಗಿದ್ದ ರೈತರ ಬೆಳೆ ಖರೀದಿಸಿದ ಮಾಲೂರು ಕಾಂಗ್ರೆಸ್ ಶಾಸಕ

ಈ ಕುರಿತು ಮಾತನಾಡಿದ ಶಾಸಕ‌ ಕೆವೈ ನಂಜೇಗೌಡ ಬಡಜನರಿಗೆ ತರಕಾರಿ ನೀಡಲು ರೈತರಿಂದ ತರಕಾರಿ ಕೊಳ್ಳುತ್ತಿದ್ದು ಕೈಲಾದಷ್ಟು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಬೆಳೆ ಮಾರಾಟ ಮಾಡಿದ ರೈತರು ಹರ್ಷ ವ್ಯಕ್ತಪಡಿಸಿದ್ದು, ಶಾಸಕರು ನೀಡಿದ ಹಣದಿಂದ ಕೊಂಚ ಮಟ್ಟಿಗೆ ಸಹಾಯ ಆಗಿದ್ದಾಗಿ ತಿಳಿಸಿದ್ದು, ಸರ್ಕಾರ ರೈತರ ಸಂಕಷ್ಟಕ್ಕೆ ದಾವಿಸಬೇಕು‌ ಎಂದು ಆಗ್ರಹಿಸಿದ್ದಾರೆ.

ರೈತರಿಂದ ತರಕಾರಿ ಖರೀದಿಸಿದ ಶಾಸಕ ಕೆ.ವೈ.ನಂಜೇಗೌಡ.

ರೈತರಿಂದ ತರಕಾರಿ ಖರೀದಿಸಿದ ಶಾಸಕ ಕೆ.ವೈ.ನಂಜೇಗೌಡ.

 • Share this:
  ಕೋಲಾರ: ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಕಾರಣ ರಾಜ್ಯದೆಲ್ಲೆಡೆ ಬೇಡಿಕೆಯಿಲ್ಲದೆ ತರಕಾರಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಹಲವು ರೈತರು ಕೃಷಿ ಮೇಲಿನ ಆಸೆಯನ್ನೇ ಬಿಟ್ಟಿದ್ದು, ಕೆಲ ರೈತರಂತು ತೋಟಗಳಿಗೆ ಹೋಗೋದನ್ನೆ ಮರೆತಿದ್ದಾರೆ. ನೊಂದಿರುವ ಹಲವು ರೈತರು ತೋಟಗಳಲ್ಲಿನ ಬೆಳೆಯನ್ನು ಟ್ರ್ಯಾಕ್ಟರ್ ಸಹಾಯದಿಂದ ನಾಶ ಮಾಡುತ್ತಿದ್ದಾರೆ. ಇಂತಹ ರೈತರಿಗೆ ಇದೀಗ ಶಾಸಕ ಆಸರೆಯಾಗಿದ್ದು, ರೈತರಿಂದ ಬೆಳೆ ಖರೀದಿಸಿದ್ದಾರೆ.

  ಬಯಲು ಸೀಮೆ ಕೋಲಾರ ಜಿಲ್ಲೆ ತರಕಾರಿ ಬೆಳೆಯೋದ್ರಲ್ಲಿ ರಾಜ್ಯದಲ್ಲಿ ಮುಂಚೂಣಿ ಜಿಲ್ಲೆಗಳಲ್ಲಿದೆ. ಸದ್ಯ ಕೊರೋನಾ ಪರಿಣಾಮದಿಂದ ಜಿಲ್ಲೆಯಲ್ಲಿ ಹೂ ಕೋಸು, ಎಲೆಕೋಸು, ಕ್ಯಾಪ್ಸಿಕಂ, ಹೂ, ಕುಂಬಳಕಾಯಿ, ಕರ್ಬೂಜ, ಬಜ್ಜಿ ಮೆಣಸಿನಕಾಯಿ ಬೆಳೆದ ರೈತರು ಬೆಳೆನಾಶ ಮಾಡುತ್ತಿದ್ದಾರೆ. ಸರ್ಕಾರ ಎಷ್ಟೇ ಮನವೊಲಿಕೆ ಮಾಡಿ ಪರಿಹಾರ ನೀಡುವ ಭರವಸೆ ನೀಡಿದರು ಬೆಳೆ ಹಾಕಿದ ಕೈಯಿಂದಲೇ ರೈತರು ಬೆಳೆ ನಾಶ ಮಾಡ್ತಿದ್ದಾರೆ. ಹೀಗೆ ಬೆಳೆ ನಾಶಕ್ಕೆ ಮುಂದಾಗಿದ್ದ ರೈತನ ಬೆಳೆಯನ್ನು ಶಾಸಕ ಖರೀದಿ ಮಾಡಿ ರೈತನ ಸಂಕಷ್ಟಕ್ಕೆ ಧಾವಿಸಿದ್ದಾರೆ.

  ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಓಬಟ್ಟಿ ಗ್ರಾಮದ ರೈತ ವೆಂಕಟರಮಣಪ್ಪ ತಮ್ಮ ಮೂರು ಎಕರೆ ಪ್ರದೇಶದಲ್ಲಿ 4 ಲಕ್ಷ ಬಂಡವಾಳ ಹಾಕಿ ಬೆಳೆದಿದ್ದ ಎಲೆಕೋಸು ಬೆಳೆ ನಾಶ ಮಾಡಲು ಚಿಂತನೆ ಮಾಡಿದ್ದರು. ಈ ವಿಚಾರ ತಿಳಿದ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಗ್ರಾಮಕ್ಕೆ ಧಾವಿಸಿ ರೈತನಿಗೆ 50 ಸಾವಿರ ಹಣ ನೀಡಿ ಬಡವರಿಗೆ ಉಚಿತವಾಗಿ ಕೋಸು ವಿತರಣೆ ಮಾಡಲು ಬೆಳೆಯನ್ನು ನಾಶ ಮಾಡದೆ ಧಾನವಾಗಿ ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿದ ರೈತ ವೆಂಕಟರಮಣಪ್ಪ ತನ್ನ ಮೂರು ಎಕರೆಯ ಕೋಸನ್ನ ಶಾಸಕರಿಗೆ ನೀಡಲು ಒಪ್ಪಿದ್ದಾರೆ.

  ಇನ್ನು ಮಾಲೂರಿನ ಬಡ ಜನತೆಗೆ ತರಕಾರಿ ವಿತರಣೆ ಮಾಡುವ ಉದ್ದೇಶದಿಂದ ಮಾಲೂರಿನ ಕದಿರೇನಹಳ್ಳಿ, ಅನಿಗಾನಹಳ್ಳಿ ಗ್ರಾಮದಲ್ಲಿ ಸಂಕಷ್ಟದಲ್ಲಿದ್ದ ರೈತರ ಟೊಮೆಟೊ, ಕುಂಬಳಕಾಯಿ ಬೆಳೆಯನ್ನು ಶಾಸಕ ನಂಜೇಗೌಡ ಖರೀದಿ ಮಾಡಿದ್ದಾರೆ. ರಾಜಪ್ಪ ಎನ್ನುವರು ಬೆಳೆದಿದ್ದ ಅರ್ಧ ಎಕರೆಯ ಟೊಮೆಟೊ, ಒಂದು ಎಕರೆಯಲ್ಲಿ ಬೈರಪ್ಪ ಎನ್ನುವರು ಬೆಳೆದಿದ್ದ ಕುಂಬಳಕಾಯಿ ಬೆಳೆಯನ್ನು ತಲಾ 25 ಸಾವಿರ ಹಣ ನೀಡಿ ಖರೀದಿ ಮಾಡಿದರು. ಇನ್ನೆರಡು ದಿನದಲ್ಲಿ ತಾಲೂಕಿನ ವಿವಿಧೆಡೆ ವಿವಿಧ ತರಕಾರಿ ರೈತರಿಂದಲೇ ಖರೀದಿ ಮಾಡಿ, ದಿನಸಿ ಪದಾರ್ಥ ಹಾಗೂ ತರಕಾರಿಯನ್ನು ಒಟ್ಟಿಗೆ ಮಾಲೂರು ತಾಲೂಕಿನ 28 ಗ್ರಾಮ ಪಂಚಾಯಿತಿಯ ಬಡವರಿಗೆ ವಿತರಣೆ ಮಾಡುವ ಉದ್ದೇಶ ಹೊಂದಿದ್ದಾರೆ.

  ಈ ಕುರಿತು ಮಾತನಾಡಿದ ಶಾಸಕ‌ ಕೆವೈ ನಂಜೇಗೌಡ ಬಡಜನರಿಗೆ ತರಕಾರಿ ನೀಡಲು ರೈತರಿಂದ ತರಕಾರಿ ಕೊಳ್ಳುತ್ತಿದ್ದು ಕೈಲಾದಷ್ಟು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಬೆಳೆ ಮಾರಾಟ ಮಾಡಿದ ರೈತರು ಹರ್ಷ ವ್ಯಕ್ತಪಡಿಸಿದ್ದು, ಶಾಸಕರು ನೀಡಿದ ಹಣದಿಂದ ಕೊಂಚ ಮಟ್ಟಿಗೆ ಸಹಾಯ ಆಗಿದ್ದಾಗಿ ತಿಳಿಸಿದ್ದು, ಸರ್ಕಾರ ರೈತರ ಸಂಕಷ್ಟಕ್ಕೆ ದಾವಿಸಬೇಕು‌ ಎಂದು ಆಗ್ರಹಿಸಿದ್ದಾರೆ.

  ಇದನ್ನು ಓದಿ: ಲಾಕ್ ಡೌನ್ ಮುಂದುವರೆಯುವುದು ಗ್ಯಾರಂಟಿ, ಮಾನಸಿಕವಾಗಿ‌ ಸಿದ್ದರಾಗಿ!

  ಒಟ್ಟಿನಲ್ಲಿ ಬೆಳೆನಾಶ ಮಾಡಲು ಮುಂದಾಗಿರುವ ರೈತರ ಸಂಕಷ್ಟಕ್ಕೆ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಅದು ಬರೀ ಘೋಷಣೆಯಾಗಿಯೆ ಉಳಿದಿದೆ. ತೋಟಗಾರಿಕಾ ಇಲಾಖೆ ಮೂಲಕ ರೈತರ ಕಷ್ಟವನ್ನು ಬಗೆಹರಿಸಲು ಸರ್ಕಾರ ಸೂಚಿಸಿದರೂ ಕ್ಯಾಪ್ಸಿಕಂ, ಬಜ್ಜಿ ಮೆಣಸಿನಕಾಯಿ, ಕೋಸು ಬೆಳೆದ ರೈತರನ್ನು ನಷ್ಟದಿಂದ ಪಾರು ಮಾಡಲು ಕೋಲಾರ ತೋಟಗಾರಿಕಾ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬೆಳೆ ಹಾಕಿದ ರೈತರು ಆರೋಪ ಮಾಡುತ್ತಿದ್ದಾರೆ.

  ವರದಿ: ರಘುರಾಜ್​

   
  First published: