HOME » NEWS » Coronavirus-latest-news » MALLS MULTIPLEXES TO REMAIN SHUT IN AHMEDABAD ON WEEKENDS MAK

CoronaVirus: ಕೊರೋನಾ ಎರಡನೇ ಅಲೆ: ಗುಜರಾತ್​ನಲ್ಲಿ ವಾರಾಂತ್ಯದಲ್ಲಿ ಮಾಲ್​ಗಳು​ ಬಂದ್, ಶಾಲೆಗಳು ಸಂಪೂರ್ಣ ಬಂದ್!

ಕೇವಲ ಮಹಾರಾಷ್ಟ್ರವಲ್ಲ, ಕರ್ನಾಟಕದಲ್ಲೂ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಕೇವಲ ಬೆಂಗಳೂರಿನಲ್ಲಿ ಮಾತ್ರ ಕಳೆದ 24 ಗಂಟೆಗಳಲ್ಲಿ 925 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

news18-kannada
Updated:March 19, 2021, 5:19 PM IST
CoronaVirus: ಕೊರೋನಾ ಎರಡನೇ ಅಲೆ: ಗುಜರಾತ್​ನಲ್ಲಿ ವಾರಾಂತ್ಯದಲ್ಲಿ ಮಾಲ್​ಗಳು​ ಬಂದ್, ಶಾಲೆಗಳು ಸಂಪೂರ್ಣ ಬಂದ್!
ಸಾಂದರ್ಭಿಕ ಚಿತ್ರ
  • Share this:
ಗುಜರಾತ್​ (ಮಾರ್ಚ್​ 19); ದೇಶದಲ್ಲಿ ಮತ್ತೆ ಕೊರೋನಾ ಅಲೆ ಜೋರಾಗುತ್ತಿದೆ. ಎರಡನೇ ಕೊರೋನಾ ಅಲೆ ಮತ್ತಷ್ಟು ಅಪಾಯಕಾರಿಯಾಗುವ ಎಲ್ಲಾ ಸೂಚನೆಗಳೂ ಗೋಚರಿಸುತ್ತಿವೆ. ಹೀಗಾಗಿ ಎಲ್ಲಾ ರಾಜ್ಯಗಳು ಎರಡನೇ ಅಲೆ ವಿಪರೀತಕ್ಕೆ ಹೋಗುವ ಮುನ್ನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿವೆ. ಈಗಾಗಲೇ ಮಹಾರಾಷ್ಟ್ರ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಹಾರಾಷ್ಟ್ರ ಸರ್ಕಾರ ಕೊರೋನಾ ತಡೆಗೆ ಕಠಿಣ ಕ್ರಮಗಳನ್ನು ಜರುಗಿಸುತ್ತಿದೆ. ಈಗಾಗಲೇ ನಾಗಪುರದಲ್ಲಿ ಒಂದು ವಾರಗಳ ಕಾಲ ಲಾಕ್​ಡೌನ್ ಹೇರಲಾಗಿತ್ತು. ಇದರ ಹೊರತಾಗಿಯೂ ಮಹಾರಾಷ್ಟ್ರದಾದ್ಯಂತ ಕಠಿಣ ಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇದರ ಬೆನ್ನಿಗೆ ಗುಜರಾತ್​ ಸರ್ಕಾರ ಸಹ ರಾಜ್ಯದ ಪ್ರಮುಖ 8 ನಗರಗಳಲ್ಲಿ ವಾರಾಂತ್ಯದಲ್ಲಿ ಮಾಲ್, ಮಲ್ಟಿಫ್ಲೆಕ್ಸ್ ಹಾಗೂ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಲು ಮುಂದಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಗುಜರಾತ್​ ಸರ್ಕಾರ, "ವೇಗವಾಗಿ ಹರಡುತ್ತಿರುವ ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಗುಜರಾತ್​ನ ಪ್ರಮುಖ 8 ನಗರಗಳಲ್ಲಿ ಮಾಲ್ ಮಲ್ಟಿಫ್ಲೆಕ್ಸ್​ಗಳನ್ನು ವಾರಾಂತ್ಯದಲ್ಲಿ ಮುಚ್ಚಲು ನಿರ್ಧರಿಸಲಾಗಿದೆ. ಅಲ್ಲದೆ, ಶಾಲೆಗಳನ್ನೂ ಮಾರ್ಚ್​ 19 ರಿಂದ ಸಂಪೂರ್ಣವಾಗಿ ಮುಚ್ಚಲಾಗುವುದು. ಏಪ್ರಿಲ್-10 ರ ವರೆಗೆ ಯಾವುದೇ ಶಾಲೆಗಳಲ್ಲಿ ತರಗತಿಗಳು ನಡೆಯುವುದಿಲ್ಲ" ಎಂದು ತಿಳಿಸಿದೆ. 

ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸಭೆಗೆ ನಿರ್ಬಂಧ:

ಕೊರೋನಾ ಎರಡನೇ ಅಲೆ ವಿಪರೀತವಾಗಿ ಹರಡುತ್ತಿರುವ ಕಾರಣದಿಂದಾಗಿ ಶಿವಸೇನೆ ಸರ್ಕಾರ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸಭೆಗಳಿಗೆ ಕಠಿಣ ನಿರ್ಬಂಧ ಹೇರಿ ಆದೇಶಿಸಿದೆ. ಇಂದು ಹೊರಡಿಸಲಾದ ಹೊಸ ಸುತ್ತೋಲೆಯ ಪ್ರಕಾರ, ಖಾಸಗಿ ಕಚೇರಿಗಳು ಸೇರಿದಂತೆ ಆರೋಗ್ಯ ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಕಚೇರಿಗಳು ಮಾರ್ಚ್ 31 ರವರೆಗೆ ಶೇ50 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ನಿರ್ದೇಶಿಸಲಾಗಿದೆ.

ಇದನ್ನೂ ಓದಿ: Toll Booth - ಇನ್ನೊಂದು ವರ್ಷದಲ್ಲಿ ಟೋಲ್ ಬೂತ್ ವ್ಯವಸ್ಥೆಯೇ ರದ್ದು: ಕೇಂದ್ರ ಸಾರಿಗೆ ಸಚಿವ

ಸಿನೆಮಾ ಹಾಲ್‌ಗಳು ಮತ್ತು ಸಭಾಂಗಣಗಳು ಒಂದೇ ನಿಯಮವನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಮಾಸ್ಕ್​ ಧರಿಸುವುದನ್ನು ಕಡ್ಡಾಯವಾಗಿ ಜಾರಿಗೆ ತರಲು ತಾಕೀತು ಮಾಡಲಾಗಿದೆ.
ಕೇವಲ ಮಹಾರಾಷ್ಟ್ರವಲ್ಲ, ಕರ್ನಾಟಕದಲ್ಲೂ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಕೇವಲ ಬೆಂಗಳೂರಿನಲ್ಲಿ ಮಾತ್ರ ಕಳೆದ 24 ಗಂಟೆಗಳಲ್ಲಿ 925 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಏತನ್ಮಧ್ಯೆ, ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಪರಿಣಾಮದಿಂದಾಗಿ, ಜನರು ಶಾಪಿಂಗ್ ಮಾಲ್‌ಗಳಿಗೆ ಭೇಟಿ ನೀಡಲು ಕೋವಿಡ್​ ಪರೀಕ್ಷೆಯ ದಾಖಲೆ ಖಡ್ಡಾಯಗೊಳಿಸಲಾಗಿದೆ. ದಾಖಲೆಯಲ್ಲಿ ನೆಗೆಟಿವ್ ಇದ್ದರೆ ಮಾತ್ರ ಮಾಲ್​ಗಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕಳೆದ ಒಂದೇ ದಿನದಲ್ಲಿ 25,833 ಹೊಸ ಪ್ರಕರಣಗಳು ದಾಖಲಾಗಿವೆ.
Published by: MAshok Kumar
First published: March 19, 2021, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories