ಮಲ್ಲಿಕಾರ್ಜುನ ಖರ್ಗೆ ಹುಟ್ಟು ಹಬ್ಬದ ದಿನದಂದೇ ಕೊಡುಗೆಯಾಗಿ ಕಲಬುರ್ಗಿ ತಲುಪಿದ 550 ಬೆಡ್​ಗಳು!

ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ವತಿಯಿಂದ ಬೆಡ್ ಗಳನ್ನು ನೀಡಲಾಗಿದೆ. ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಬೆಡ್ ಗಳ ಕೊರತೆ ಇದೆ. ಹೀಗಾಗಿ ಕೈಲಾದಷ್ಟು ನೆರವು ನೀಡಲೆಂದು ಸದ್ಯಕ್ಕೆ 650 ಬೆಡ್ ಗಳ ದೇಣಿಗೆ ರೂಪದಲ್ಲಿ ನೀಡಲಾಗಿದೆ. 550 ಕಲಬುರ್ಗಿ ಜಿಲ್ಲೆಗೆ ಹಾಗೂ ರಾಯಚೂರು ಜಿಲ್ಲೆಗೆ 100 ಬೆಡ್ ಗಳನ್ನು ನೀಡಲಾಗಿದೆ. 

ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಕೊಡುಗೆಯಾಗಿ ನೀಡಿರುವ ಬೆಡ್​ಗಳು.

ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಕೊಡುಗೆಯಾಗಿ ನೀಡಿರುವ ಬೆಡ್​ಗಳು.

 • Share this:
  ಕಲಬುರಗಿ; ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದೆ. ಕೆಲವೆಡೆ ಸೋಂಕಿತರಿಗೆ ಹಾಸಿಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಅದ್ಧೂರಿ ಹುಟ್ಟು ಹಬ್ಬ ಕೈಬಿಟ್ಟಿದ್ದ ಮಲ್ಲಿಕಾರ್ಜುನ ಖರ್ಗೆ, ಜನ್ಮದಿನದ ಕೊಡುಗೆಯಾಗಿ ಕಲಬುರ್ಗಿಗೆ 550 ಹಾಸಿಗೆಗಳನ್ನು ಕಳುಹಿಸಿದ್ದಾರೆ. ಈ ಹಾಸಿಗೆಗಳನ್ನು ಕೊರೋನಾ ಸೋಂಕಿತರ ಸೇವೆಗೆ ಹಸ್ತಾಂತರಿಸಲಾಗಿದ್ದು, ಇದು ಚಿತ್ತಾಪುರ ಮಾಡೆಲ್ ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

  ರಾಜ್ಯಸಭಾ ಸದಸ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹುಟ್ಟು ಹಬ್ಬದ ದಿನದಂದೇ ಕೊರೋನಾ ರೋಗಿಗಳಿಗೆಂದು ಕಲಬುರ್ಗಿ ಜಿಲ್ಲೆಗೆ 550 ಬೆಡ್​ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಚಿತ್ತಾಪುರ ಮತ್ತು ಕಲಬುರ್ಗಿ ನಗರಗಳಿಗೆ ಬೆಡ್ ಗಳು ಬಂದು ತಲುಪಿವೆ. ಬೆಡ್ ಗಳ ಕೊರತೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿತರಿಗಾಗಿ ಬೆಡ್ ಗಳನ್ನು ಕಳುಹಿಸಿಕೊಡಲಾಗಿದೆ.

  ಖರ್ಗೆ ಹುಟ್ಟು ಹಬ್ಬದ ದಿನದಂದೇ ಕೋವಿಡ್ ರೋಗಿಗಳ ಸೇವೆಗೆ ಬೆಡ್ ಗಳ ಹಸ್ತಾಂತರ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಇದು ಚಿತ್ತಾಪುರ ಮಾಡಲ್ ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

  ಇದನ್ನು ಓದಿ: ‘ಕರ್ನಾಟಕ ಇನ್ನು ಸಂಪೂರ್ಣ ಲಾಕ್​ಡೌನ್​ ಫ್ರೀ ರಾಜ್ಯ: ಇನ್ಮುಂದೆ ಎಲ್ಲೂ, ಎಂದೂ ಲಾಕ್​ಡೌನ್​ ಇಲ್ಲ: ಯಡಿಯೂರಪ್ಪ

  ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ವತಿಯಿಂದ ಬೆಡ್ ಗಳನ್ನು ನೀಡಲಾಗಿದೆ. ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಬೆಡ್ ಗಳ ಕೊರತೆ ಇದೆ. ಹೀಗಾಗಿ ಕೈಲಾದಷ್ಟು ನೆರವು ನೀಡಲೆಂದು ಸದ್ಯಕ್ಕೆ 650 ಬೆಡ್ ಗಳ ದೇಣಿಗೆ ರೂಪದಲ್ಲಿ ನೀಡಲಾಗಿದೆ. 550 ಕಲಬುರ್ಗಿ ಜಿಲ್ಲೆಗೆ ಹಾಗೂ ರಾಯಚೂರು ಜಿಲ್ಲೆಗೆ 100 ಬೆಡ್ ಗಳನ್ನು ನೀಡಲಾಗಿದೆ. ಪರಿಸರ ಸ್ನೇಹಿ ಬೆಡ್ ಗಳು 850 ರೂಪಾಯಿ ಮೂಲ ದರದ್ದಾಗಿದ್ದು, ಪ್ರಾಯೋಗಿಕವಾಗಿ ಕಲಬುರ್ಗಿ ಹಾಗೂ ರಾಯಚೂರುಗಳಿಗೆ ನೀಡಲಾಗಿದೆ. ಚಿತ್ತಾಪುರದ ಕೋವಿಡ್ ಆರೈಕೆ ಕೇಂದ್ರಕ್ಕೂ ಒದಗಿಸಲಾಗಿದೆ. ಚಿತ್ತಾಪುರ ಮಾಡೆಲ್ ಅನುಸರಿಸಿದಲ್ಲಿ ರಾಜ್ಯದಲ್ಲಿ ತಲೆದೋರಿದ ಬೆಡ್ ಕೊರತೆ ನೀಗಲಿದೆ ಎಂದು ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
  Published by:HR Ramesh
  First published: