ರಾಹುಲ್ ಗಾಂಧಿಯ ಹೇಳಿಕೆಯನ್ನು ತಿರುಚಲಾಗುತ್ತಿದೆ; ಮಲ್ಲಿಕಾರ್ಜುನ ಖರ್ಗೆ

ನಾವು ಇವತ್ತು ಭಿನ್ನಾಭಿಪ್ರಾಯದ ಹೇಳಿಕೆಗಳನ್ನು ನೀಡುವುದು  ಸರಿಯಲ್ಲ . ನೆಲ, ಜಲ, ಭಾಷೆ, ರಾಷ್ಟ್ರೀಯತೆಯ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ಎದುರಿಸಬೇಕು‌ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ.

ಮಲ್ಲಿಕಾರ್ಜುನ ಖರ್ಗೆ.

  • Share this:
ಬೆಂಗಳೂರು (ಜೂ. 20): ಭಾರತೀಯ ಸೈನಿಕರು ಚೀನಾ ಗಡಿಯೊಳಗೆ ಹೋಗಿಲ್ಲ, ಅವರೂ ನಮ್ಮ ಗಡಿಯೊಳಗೆ ಬಂದಿಲ್ಲ ಎಂದು ಪ್ರಧಾನಿ ಮೋದಿ ನಿನ್ನೆ ಹೇಳಿದ್ದಾರೆ. ಕೆಲವೊಮ್ಮೆ ರಾಹುಲ್ ಗಾಂಧಿ ನೀಡಿರುವ ಪ್ರತಿಕ್ರಿಯೆಯನ್ನು ಮಾಧ್ಯಮಗಳಲ್ಲಿ ತಿರುಚಲಾಗಿದೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಭಾರತ-ಚೀನಾ ಲಡಾಖ್ ಗಡಿಯ ಗಾಲ್ವಾನ್ ಕಣಿವೆಯಲ್ಲಿ ತಲೆದೋರಿರುವ  ಸಮಸ್ಯೆಯ ಕುರಿತು ಹಿರಿಯ ಕಾಂಗ್ರೆಸ್ ಮುಖಂಡ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಮಾತನಾಡಿದರು. ಭಾರತೀಯರೂ ಹೋಗಿಲ್ಲ, ಅವರೂ ಬಂದಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ಪ್ರತಿಕ್ರಿಯೆ ರಾಹುಲ್ ಗಾಂಧಿ ಕೆಲವೊಮ್ಮೆ ಪ್ರಶ್ನೆ ಕೇಳುತ್ತಾರೆ. ಆದರೆ, ಮಾಧ್ಯಮಗಳಲ್ಲಿ ಇದರ ಬಗ್ಗೆ ತಿರುಚಿ ಮುರುಚಿ ವರದಿಯಾಗುತ್ತವೆ ಎಂದಿದ್ದಾರೆ.

ಇನ್ನು, ನಿನ್ನೆ ಸರ್ವಪಕ್ಷ ಸಭೆ ನಡೆಸಲಾಗಿದೆ. ವಿಪಕ್ಷ ನಾಯಕರು ಪ್ರಧಾನಿ ಮೋದಿಗೆ ಕೆಲವು   ಸಲಹೆ ನೀಡಿದ್ದಾರೆ. ಚೀನಾ ಕುತಂತ್ರ ಮಾಡಿದೆ. ಈ ಹಿಂದೆ ನೆಹರು ಕಾಲದಲ್ಲೂ ಅವರು ದಾಳಿ ನಡೆಸಿದ್ದರು. ಪ್ರಧಾನಿ ಮೋದಿ  ಚೀನಾದವರಿಗೆ ಅಷ್ಟೊಂದು ಬೆಲೆ ಕೊಡಬಾರದಿತ್ತು.  ನೆರೆಹೊರೆಯವರು ಅಂತ ಇವರು ಅಲ್ಲಿಗೆ ಹೋಗಿದ್ದಾರೆ. ಚೀನಾದವರು ಇಲ್ಲಿಗೆ ಬಂದಿದ್ದಾರೆ. ಇಷ್ಟಾದರೂ ಚೀನಾ ಬ್ಯಾಕ್ ಸ್ಟಾಂಪಿಂಗ್ ಮಾಡುವುದು ಬಿಟ್ಟಿಲ್ಲ. ಜೊತೆಗೆ ಕಣ್ಣಾಮುಚ್ಚಾಲೆ ಆಟವನ್ನು ಆಡುತ್ತಿದ್ದಾರೆ. ಆದರೆ, ಇವತ್ತು ಇಡೀ ದೇಶದ ಜನ ಒಂದಾಗಿದೆ. ನಾವು ಇವತ್ತು ಭಿನ್ನಾಭಿಪ್ರಾಯದ ಹೇಳಿಕೆಗಳನ್ನು ನೀಡುವುದು  ಸರಿಯಲ್ಲ . ನೆಲ, ಜಲ, ಭಾಷೆ, ರಾಷ್ಟ್ರೀಯತೆಯ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ಎದುರಿಸಬೇಕು‌ . ಹಾಗೇ ಇರುವ ವಿಚಾರವನ್ನು ಪ್ರಧಾನಿಯವರು ದೇಶದ ಮುಂದಿಡಬೇಕು ಎಂದಿದ್ದಾರೆ.

ಸೇನೆಯ ವಿಚಾರಗಳನ್ನು ಮುಚ್ಚಿಡುವುದು ಸರಿಯಲ್ಲ. ಇವತ್ತಿನ ಭಾರತ ಮತ್ತು ಚೀನಾ ಸಂಘರ್ಷ ವಿಚಾರದಲ್ಲಿ ನಮ್ಮ  ಗುಪ್ತಚರ ವಿಫಲವಾಗಿದೆ ಅಂತ ಹೇಳುತ್ತಿದ್ದಾರೆ. ಒಂದು ವೇಳೆ ಆಗಿದ್ದರೂ ಜನರಿಗೆ  ಹೇಳಬೇಕು. ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟಿಲ್ಲ ಅಂದರೂ ಹೇಳಬೇಕು. ಏಕೆಂದರೆ ಜನರಲ್ಲಿ‌ ತಪ್ಪು ಭಾವನೆ ಉಂಟಾಗಬಾರದು ಎಂದರು . ಇನ್ನು, ಚೀನಾದ್ದು ಯಾವಾಗಲೂ ನರಿಬುದ್ಧಿಯೇ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
First published: