HOME » NEWS » Coronavirus-latest-news » MALLIKA DUA GETS RESPONSE FROM AVIATION MINISTER IN COVID 19 SOS TWITTER CRIES VIP CULTURE MAK

ಟ್ವಿಟ್ಟರ್​ನಲ್ಲಿ ಕೊರೋನಾ ಔಷಧ ಕೇಳಿದ ನಟಿ ಮಲ್ಲಿಕಾ ದುವಾಗೆ ಸಚಿವರ ನೆರವು: ವಿಐಪಿ ಸಂಸ್ಕೃತಿಗೆ ನೆಟ್ಟಿಗರು ಕಿಡಿ

ಈ ಕೊರೋನಾ ಎರಡನೇ ಅಲೆಯಿಂದಾಗಿ ದೇಶಾದ್ಯಂತ ಸಾವಿರಾರು ಜನರು ಔಷಧಿ, ಆಕ್ಸಿಜನ್, ವೆಂಟಿಲೇಟರ್, ಬೆಡ್‌, ಚಿಕಿತ್ಸೆ ಮುಂತಾದ ಕೊರತೆಯಿಂದಾಗಿ ಜನ ಸಾಯುತ್ತಿರುವ ಸಮಯದಲ್ಲಿ ಕೇಂದ್ರ ಸಚಿವ ಪುರಿ ದುವಾ ಅವರಿಗೆ ತ್ವರಿತವಾಗಿ ಸಹಾಯವನ್ನು ನೀಡುತ್ತಿದ್ದಾರೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

news18-kannada
Updated:May 17, 2021, 7:05 PM IST
ಟ್ವಿಟ್ಟರ್​ನಲ್ಲಿ ಕೊರೋನಾ ಔಷಧ ಕೇಳಿದ ನಟಿ ಮಲ್ಲಿಕಾ ದುವಾಗೆ ಸಚಿವರ ನೆರವು: ವಿಐಪಿ ಸಂಸ್ಕೃತಿಗೆ ನೆಟ್ಟಿಗರು ಕಿಡಿ
ನಟಿ ಮಲ್ಲಿಕಾ ದುವಾ.
  • Share this:
ಸಾಮಾಜಿಕ ಮಾಧ್ಯಮ ಪ್ರಭಾವಿ, ಹಾಸ್ಯನಟಿ ಮತ್ತು ನಟಿ ಮಲ್ಲಿಕಾ ದುವಾ ಅವರು ಮತ್ತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನಡುವಿನ ಟ್ವಿಟರ್ ವಿನಿಮಯ ವೈರಲ್ ಆದ ನಂತರ ಟ್ವೀಟಿಗರು ಟ್ರೋಲ್‌ ಮಾಡಿದ್ದಾರೆ. ಪತ್ರಕರ್ತ ವಿನೋದ್ ದುವಾ ಅವರ ಪುತ್ರಿ ದುವಾ, ಕೋವಿಡ್ ಪಾಸಿಟಿವ್ ಆಗಿದ್ದ ತಾಯಿ ಚಿನ್ನಾ ದುವಾ ಅವರಿಗೆ ಔಷಧಿಗಳನ್ನು ವ್ಯವಸ್ಥೆ ಮಾಡಲು ಸಹಾಯ ಕೋರಿದರು. ವಾಸ್ತವವಾಗಿ, ದುವಾ ಅವರ ತಾಯಿ ಮತ್ತು ತಂದೆ ಇಬ್ಬರೂ ಕಳೆದ ವಾರ ಕೊರೊನಾ ವೈರಸ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಆಗಿದ್ದರು. ವಾರಾಂತ್ಯದಲ್ಲಿ ಟ್ವಿಟ್ಟರ್‌ ಮೂಲಕ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಲೋಕಸಭಾ ಸದಸ್ಯ ದೀಪೇಂದರ್ ಸಿಂಗ್ ಹೂಡಾ ಅವರನ್ನು ಟ್ಯಾಗ್‌ ಮಾಡಿದ್ದ ಮಲ್ಲಿಕಾ ದುವಾ, ಟೊಸಿಲಿಝುಮಾಬ್‌ಗೆ ವ್ಯವಸ್ಥೆ ಮಾಡಲು ಸಹಾಯ ಕೇಳಿದ್ದರು. ಇದು ಕೊರೊನಾವೈರಸ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಎರಡು ಮಾನೊಕ್ಲೋನಲ್ ಆ್ಯಂಟಿಬಾಡಿ ಚಿಕಿತ್ಸೆಗಳಲ್ಲಿ ಒಂದಾಗಿದೆ.

ಹೂಡಾ ಅವರನ್ನು ಟ್ಯಾಗ್ ಮಾಡಿ, ಬರೆದಿದ್ದ ದುವಾ,  ಪ್ರಸ್ತುತ ಗುರುಗ್ರಾಮ್‌ನ ಮೆಡಂತಾ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ತಾಯಿಗೆ ತುರ್ತು ಟೋಸಿಲಿಜುಮಾಬ್ ಅಗತ್ಯವಿದೆ ಎಂದು ಟ್ವೀಟ್‌ ಮಾಡಿದ್ದರು. ತಕ್ಷಣವೇ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಹೂಡಾ, ತನ್ನ ತಂಡದ ಸದಸ್ಯರೊಬ್ಬರು ಈ ಬಗ್ಗೆ ಪರಿಶೀಲನೆ ನಡೆಸಲು ರೋಗಿಯ ವಿವರಗಳನ್ನು ತನಗೆ ರವಾನಿಸುವಂತೆ ಕೇಳಿಕೊಂಡರು. ಆದರೂ, ದುವಾ ಅವರ ಟ್ವಿಟ್‌ಗೆ ಭಾರತೀಯ ಜನತಾ ಪಕ್ಷದ ಮುಖಂಡ ಮತ್ತು ಪ್ರಸ್ತುತ ಭಾರತದ ನಾಗರಿಕ ವಿಮಾನಯಾನ ಸಚಿವ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮನವಿಗೆ ಸ್ಪಂದಿಸಿದರು ಮತ್ತು ಸಹಾಯಕ್ಕಾಗಿ ದುವಾ ಅವರನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆಯನ್ನು ಸಹ ನೀಡಿದರು. ಇದು ಅನೇಕ ಇಂಟರ್ನೆಟ್‌ ಬಳಕೆದಾರರನ್ನು ಗಮನ ಸೆಳೆಯಿತು.
ಸ್ವಲ್ಪ ಸಮಯದ ನಂತರ, ತನ್ನ ತಾಯಿಗೆ ಟೋಸಿಲಿಜುಮಾಬ್ ಔಷಧಿಯನ್ನು ನಿಜಕ್ಕೂ  ವ್ಯವಸ್ಥೆ ಮಾಡಲಾಗಿದೆ ಎಂದು ನಟಿ ಮಲ್ಲಿಕಾ ದುವಾ ಟ್ವಿಟ್ಟರ್‌ ಮೂಲಕ ಸ್ಪಷ್ಟನೆಯನ್ನೂ ನೀಡಿದ್ದರು. ಅಲ್ಲದೆ, ಅಗತ್ಯವಿರುವ ಸಮಯದಲ್ಲಿ ತನಗೆ ಸಹಾಯ ಮಾಡಿದ್ದಕ್ಕಾಗಿ ನಟಿ, ಕೇಂದ್ರ ಸಚಿವ ಹರ್ದೀಪ್‌ ಸಿಂಗ್ ಪುರಿಗೆ ಧನ್ಯವಾದ ಹೇಳಿದಳು. ಇನ್ನು, ದುವಾ, ಹೂಡಾ ಮತ್ತು ಪುರಿ ನಡುವಿನ ಈ ಟ್ವೀಟ್‌ ವಿನಿಮಯವನ್ನು ಡಿಲೀಟ್‌ ಮಾಡಲಾಗಿದೆ.  ಆದರೆ ಅದರ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.ಈ ಕೊರೋನಾ ಎರಡನೇ ಅಲೆಯಿಂದಾಗಿ ದೇಶಾದ್ಯಂತ ಸಾವಿರಾರು ಜನರು ಔಷಧಿ, ಆಕ್ಸಿಜನ್, ವೆಂಟಿಲೇಟರ್, ಬೆಡ್‌, ಚಿಕಿತ್ಸೆ ಮುಂತಾದ ಕೊರತೆಯಿಂದಾಗಿ ಜನ ಸಾಯುತ್ತಿರುವ ಸಮಯದಲ್ಲಿ ಕೇಂದ್ರ ಸಚಿವ ಪುರಿ ದುವಾ ಅವರಿಗೆ ತ್ವರಿತವಾಗಿ ಸಹಾಯವನ್ನು ನೀಡುತ್ತಿದ್ದಾರೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಈ ಘಟನೆಯು "ವಿಐಪಿ ಸಂಸ್ಕೃತಿಯನ್ನು" ಅತ್ಯುತ್ತಮವಾಗಿ ಪ್ರದರ್ಶಿಸಿದೆ ಎಂದು ಅನೇಕರು ಹೇಳಿದರು.

ಅಲ್ಲಿ ಒಬ್ಬ ಪ್ರಸಿದ್ಧ ವ್ಯಕ್ತಿಯು ಸಂಪನ್ಮೂಲಗಳನ್ನು ಸುಲಭವಾಗಿ ವ್ಯವಸ್ಥೆ ಮಾಡಲು ಸಾಧ್ಯವಾಯಿತು ಮತ್ತು ಮಂತ್ರಿಗಳು ಸಹ ಅವರಿಗೆ ಸಹಾಯ ಮಾಡಿದರು. ಆದರೆ ಸಾಮಾನ್ಯ ವ್ಯಕ್ತಿಗಳು ಟ್ವಿಟ್ಟರ್‌ನಲ್ಲಿ  ಸಹಾಯವನ್ನು ಹುಡುಕಿದಾಗ, ಯಾರೂ ಅವರಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ ಎಂದು ಹಲವರು ಉದಾಹರಣೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವು ನೆಟ್ಟಿಗರ ಆಕ್ರೋಶಭರಿತ ಟ್ವೀಟ್‌ಗಳು ಹೀಗಿವೆ ನೋಡಿ..

ಇನ್ನು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಮಲ್ಲಿಕಾ ದುವಾ ತಮ್ಮ ಟ್ವಿಟ್ಟರ್‌ ಅಕೌಂಟ್‌ ಅನ್ನೇ ಡಿಲೀಟ್‌ ಮಾಡಿದ್ದಾರೆ. ಮಲ್ಲಿಕಾ ದುವಾ ಮತ್ತು ವಿನೋದ್‌ ದುವಾ ಮೋದಿ ಸರ್ಕಾರದ ವಿರುದ್ಧ ಹೆಚ್ಚು ವಿಮರ್ಶಾತ್ಮಕವಾಗಿರುತ್ತಾರೆ. 2018 ರಲ್ಲಿ, ಭಾರತದಲ್ಲಿ #MeToo ಅಲೆ ಜೋರಾಗಿದ್ದಾಗ ವಿನೋದ್‌ ದುವಾ ಸಹ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅಲ್ಲದೆ, ಮಗಳು ಮಲ್ಲಿಕಾ ತಂದೆಯ ರಕ್ಷಣೆಗೆ ನಿಂತಿದ್ದರಿಂದ ಆ ಸಮಯದಲ್ಲಿ ನಟಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು.
Published by: MAshok Kumar
First published: May 17, 2021, 7:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories