ಇನ್ಮುಂದೆ ಮಲ್ಲೇಶ್ವರಂನಲ್ಲಿ ಶಾಪಿಂಗ್​ ಮಾಡೋಕಾಗಲ್ಲ; ಸೆಲ್ಫ್​ ಲಾಕ್​ಡೌನ್​ ಮೊರೆ ಹೋದ ವ್ಯಾಪಾರಿಗಳು!

ಜುಲೈ 1ರಿಂದ 7ರವರೆಗೆ ಅಂಗಡಿ ಬಂದ್ ಮಾಡಲು ಮುಂದಾಗಿದ್ದು, ಮೊದಲ ದಿನವಾದ ಇಂದು ಮಲ್ಲೇಶ್ವರಂನಲ್ಲಿ ಶೇ.70ರಷ್ಟು ಅಂಗಡಿಗಳು ಬಂದ್ ಆಗಿದ್ದವು. ಆದರೆ ಉಳಿದ ದೊಡ್ಡ ದೊಡ್ಡ ಅಂಗಡಿ, ಶಾಪಿಂಗ್‌ ಮಾಲ್ ಇನ್ನೂ ತೆರೆದಿದ್ದವು.

news18-kannada
Updated:July 1, 2020, 1:26 PM IST
ಇನ್ಮುಂದೆ ಮಲ್ಲೇಶ್ವರಂನಲ್ಲಿ ಶಾಪಿಂಗ್​ ಮಾಡೋಕಾಗಲ್ಲ; ಸೆಲ್ಫ್​ ಲಾಕ್​ಡೌನ್​ ಮೊರೆ ಹೋದ ವ್ಯಾಪಾರಿಗಳು!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜು.1):  ನಗರದಲ್ಲಿ ಕೊರೋನಾ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ವರ್ತಕರು ಸ್ವ ಇಚ್ಛೆಯಿಂದ ತಮ್ಮ ಅಂಗಡಿಗಳನ್ನು ಇಂದಿನಿಂದ ಬಂದ್ ಮಾಡುತ್ತಿದ್ದಾರೆ. ಐನೂರಕ್ಕೂ ಹೆಚ್ಚು ಅಂಗಡಿಗಳಿರುವ ಮಲ್ಲೇಶ್ವರಂನಲ್ಲಿ ಜುಲೈ7ರವರೆಗೆ ಸೆಲ್ಫ್ ಲಾಕ್​ಡೌನ್ ಮಾಡಲು ಸಂಘ ನಿರ್ಧಾರ ಮಾಡಿದೆ.

ಬೆಂಗಳೂರಿನಲ್ಲಿ ಮಲ್ಲೇಶ್ವರಂ ವ್ಯಾಪಾರ ವಹಿವಾಟಿಗೆ ಫೇಮಸ್. ಎಲ್ಲ ವಿಧದ ವ್ಯಾಪಾರ ಮಳಿಗೆಗಳು ಇಲ್ಲಿವೆ. ಮಹಿಳೆಯರು ಶಾಪಿಂಗ್ ಹೆಚ್ಚು ಇಷ್ಟಪಡುವ ಪ್ರದೇಶವೂ ಇದೆ. ಲಾಕ್ ಡೌನ್ ಸಡಲಿಕೆ ಬಳಿಕ ಹೆಚ್ಚಿನ ಜನಸಂದಣಿ ಇಲ್ಲದೇ ಹೋದರೆ ತಕ್ಕಮಟ್ಟಿಗೆ ವ್ಯಾಪಾರ ನಡೆಯುತ್ತಿತ್ತು. ಆದರೀಗ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಐದು ಸಾವಿರ ಗಡಿ ಸಮೀಪಿಸುತ್ತಿದೆ. ದಿನವೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮಲ್ಲೇಶ್ವರಂ ವರ್ತಕರ ಸಂಘ ಕೊರೊನಾದಿಂದ ಪಾರಾಗಲು ಒಂದು ವಾರ ಅಂಗಡಿ ಮುಂಗಟ್ಟು ಬಂದ್ ಮಾಡಲು ನಿರ್ಧರಿಸಿದ್ದಾರೆ‌‌‌.

ಜುಲೈ 1ರಿಂದ 7ರವರೆಗೆ ಅಂಗಡಿ ಬಂದ್ ಮಾಡಲು ಮುಂದಾಗಿದ್ದು, ಮೊದಲ ದಿನವಾದ ಇಂದು ಮಲ್ಲೇಶ್ವರಂನಲ್ಲಿ ಶೇ.70ರಷ್ಟು ಅಂಗಡಿಗಳು ಬಂದ್ ಆಗಿದ್ದವು. ಆದರೆ ಉಳಿದ ದೊಡ್ಡ ದೊಡ್ಡ ಅಂಗಡಿ, ಶಾಪಿಂಗ್‌ ಮಾಲ್ ಇನ್ನೂ ತೆರೆದಿದ್ದವು. ಮಲ್ಲೇಶ್ವರಂ ವರ್ತಕರ ಸಂಘದ ಅಧ್ಯಕ್ಷ ರವಿಶಂಕರ್ ಹಾಗೂ ಸದಸ್ಯರು ತೆರೆದ ಶಾಪ್ ಗಳಿಗೆ ತೆರಳಿ ಕೊರೋನಾ ಆತಂಕ‌ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿದ್ದು ಸಹಕರಿಸಿ, ನೀವು ಕೊರೊನಾದಿಂದ ಮುಕ್ತರಾಗಿ ಎಂದು ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.

ಇದನ್ನೂ ಓದಿ: ತಮಿಳುನಾಡಿನಲ್ಲಿ ಬಾಯ್ಲರ್​ ಸ್ಫೋಟ; 6 ಜನ ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯಆದರೆ ಸಣ್ಣಪುಟ್ಟ, ಬೀದಿಬದಿ ವ್ಯಾಪಾರಿಗಳು ದಿನದ ಹೊತ್ತು ತುಂಬಲು ತಮ್ಮ ವ್ಯಾಪಾರ ಮುಂದುವರೆಸಿದ್ದರು‌. ಕೊರೊನಾ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಬರ್ತಾರೆ‌. ಮಲ್ಲೇಶ್ವರಂನಲ್ಲಿ ಈಗಾಗಲೇ ಕೊರೋನಾ ಪ್ರಕರಣಗಳು ಕಂಡುಬರುತ್ತಿವೆ. ಇಂಥ ಸಂದರ್ಭದಲ್ಲಿ ಒಂದು ವಾರ ಅಂಗಡಿ ಮುಚ್ಚಲು ಮಲ್ಲೇಶ್ವರಂ ವರ್ತಕರ ಸಂಘ ನಿರ್ಧರಿಸಿದೆ. ಇದಕ್ಕೆ ಎಲ್ಲರೂ ಬಂದ್ ಮಾಡಿ ಸಹಕಾರ ನೀಡಿದ್ದಾರೆ. ಈ ಮೂಲಕ ಕೊರೋನಾ ಹತೋಟಿಗೂ ನಾವು ನಮ್ಮ ಸಹಕಾರ ನೀಡುತ್ತಿದ್ದೇವೆ ಎಂದು ಮಲ್ಲೇಶ್ವರಂ ವರ್ತಕರ ಸಂಘದ ಅಧ್ಯಕ್ಷ ರವಿಶಂಕರ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ‌.
ಈ ಮೊದಲು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಿಬಿಎಂಪಿ ಸೂಚನೆ ನೀಡದೇ ಹೋದರೂ ಅಂಗಡಿ ಮಾಲೀಕರು ತಮ್ಮ ಸುರಕ್ಷತೆಗಾಗಿ ಸೆಲ್ಫ್ ಲಾಕ್ ಡೌನ್ ಮಾಡಿದ್ದರು. ಆನಂತರ ಬಸವನಗುಡಿಯ ವರ್ತಕರ ಸಂಘವೂ‌ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿತ್ತು. ಇದಕ್ಕೆ ವರ್ತಕರು ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಮಲ್ಲೇಶ್ವರಂ ವರ್ತಕರ ಸಂಘದ ಸರತಿ.
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading