HOME » NEWS » Coronavirus-latest-news » MALDIVES TEMPORARILY BANS INDIAN TOURISTS AND MOST DESIS HAD THE SAME BOLLYWOOD CELEBRITY JOKE STG AE

ಮಾಲ್ಡೀವ್ಸ್‌ಗೆ ತಾತ್ಕಾಲಿಕ ನಿಷೇಧ: ಬಾಲಿವುಡ್ ಮಂದಿ ಏನ್ ಮಾಡ್ತಾರೆ ಪಾಪ ಎಂದ ನೆಟ್ಟಿಗರು

ಮಾಲ್ಡೀವ್ಸ್​ ಭಾರತೀಯ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಟ್ವೀಟ್​ ಮೂಲಕ ಈ ವಿಷಯ ತಿಳಿಸಿದ್ದು, ಸದ್ಯ ಮಾಲ್ಡೀವ್ಸ್​ನಲ್ಲಿರುವ ಪ್ರವಾಸಿಗರನ್ನು ಬೇಗ ದೇಶಕ್ಕೆ ಹೊರಡುವ ವ್ಯವಸ್ಥೆ ಮಾಡಿಕೊಳ್ಳಿ ಎಂದೂ ತಿಳಿಸಿದೆ. ಈ ವಿಷಯ ತಿಳಿದಾಗಿನಿಂದ ನೆಟ್ಟಿಗರು ಮತ್ತೆ ಬಾಲಿವುಡ್​ ಮಂದಿ ಮೇಲೆ ಜೋಕ್ ಹಾಗೂ ಮೀಮ್ಸ್​ ಮಾಡಲು ಆರಂಭಿಸಿದ್ದಾರೆ.

news18-kannada
Updated:May 13, 2021, 2:26 PM IST
ಮಾಲ್ಡೀವ್ಸ್‌ಗೆ ತಾತ್ಕಾಲಿಕ ನಿಷೇಧ: ಬಾಲಿವುಡ್ ಮಂದಿ ಏನ್ ಮಾಡ್ತಾರೆ ಪಾಪ ಎಂದ ನೆಟ್ಟಿಗರು
ಬಾಲಿವುಡ್​ ಸೆಲೆಬ್ರಿಟಿಗಳ ಮೇಲೆ ಮಾಡಿರುವ ಜೋಕ್ಸ್​
  • Share this:
ಕೋವಿಡ್‍ನ ಎರಡನೇ ಅಲೆಯಿಂದಾಗಿ ಭಾರತ ಆರ್ಥಿಕ ಮತ್ತು ಆರೋಗ್ಯದ  ವಿಚಾರವಾಗಿ ಬಹಳ ಸವಾಲುಗಳನ್ನು ಎದುರಿಸುತ್ತಿದೆ. ಬಹಳಷ್ಟು ರಾಷ್ಟ್ರಗಳು ಭಾರತದಿಂದ ಬರುವ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಕೆಲವು ಪ್ರವಾಸಿ ಸ್ಥಳಗಳ ಮೇಲೂ ನಿಷೇಧ ಹೇರಿದ್ದು, ಈ ನಿಷೇಧವು ಆರ್ಥಿಕತೆಗೆ ಕೊಂಚ ಹೊಡೆತ ಕೊಡುವುದರಲ್ಲಿ ಅನುಮಾನವಿಲ್ಲ. ಇದರಲ್ಲಿ ಪ್ರವಾಸಿಗರ ನೆಚ್ಚಿನ ತಾಣ ಹಾಗೂ ಸಾಕಷ್ಟು ಮಂದಿಯ ಕನಸಾಗಿರುವ ಮಾಲ್ಡೀವ್ಸ್‌ಗೆ ತೆರಳುವ ಅವಕಾಶವನ್ನು ಕೋವಿಡ್ ಕಾರಣ ತಾತ್ಕಾಲಿಕವಾಗಿ ಬ್ಯಾನ್‌ ಮಾಡಲಾಗಿದೆ. ಅಂದರೆ ದಕ್ಷಿಣ ಏಷ್ಯಾದ ಮಂದಿಗೆ ನಿಷೇಧ ಹೇರಿದೆ. ಈ ಹಿಂದೆಯೇ ಭಾರತದಿಂದ ಬರುವ ವಿಮಾನಗಳ ಮೇಲೆ ನಿಷೇಧ ಹೇರಿದ್ದ ಮಾಲ್ಡೀವ್ಸ್​ನಲ್ಲಿ ಈಗ  15 ಪಟ್ಟು ಸೋಂಕು ಹೆಚ್ಚಳವಾಗಿದೆ. ಇನ್ನು ಎರಡನೇ ಅಲೆಯಿಂದಾಗಿ ಈಗ  ಶ್ರೀಲಂಕಾ ಹಾಗೂ ಇತರೆ ರಾಷ್ಟ್ರಗಳು ಸಹ ನಿರ್ಬಂಧಗಳನ್ನು ಹೇರಿವೆ. 

ಕೋವಿಡ್ ಹಿನ್ನೆಲೆ ಮಾಲ್ಡೀವ್ಸ್ ಒಂದು ಹೇಳಿಕೆ ಬಿಡುಗಡೆ ಮಾಡಿದೆ. ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಎಲ್ಲ ರೀತಿಯ ವೀಸಾಗಳಿಗೆ ಹಾಗೂ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಈ ನಿಷೇಧ ವಿಮಾನ ಹಾರಾಟಕ್ಕೂ ಸಂಬಂಧಿಸಿದೆ. ಹಾಗಾಗಿ ಈಗಾಗಲೇ ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಹೊರಡುವ ವ್ಯವಸ್ಥೆ ಮಾಡಿಕೊಳ್ಳಿ ಎಂದು ಮಾಲ್ಡೀವ್ಸ್‌ ಸರ್ಕಾರ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್​ ಮಾಡಿದ್ದು, ಅದನ್ನು ಅಲ್ಲೇ ಇರುವ  ಹೈ ಕಮಿಷನ್ ಆಫ್ ಇಂಡಿಯಾ ರೀ ಟ್ವೀಟ್​ ಮಾಡಿದೆ.
ಈ ಆದೇಶ ಓದಿದ, ಕೇಳಿದ ಪ್ರತಿಯೊಬ್ಬರೂ ಬಾಲಿವುಡ್ ಮಂದಿಯ ರೀತಿಯಲ್ಲೇ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳಿಗೆ ಮಾಲ್ಡೀವ್ಸ್ ಅಚ್ಚುಮೆಚ್ಚಿನ ತಾಣ. ಕಳೆದ ಬಾರಿ ನಿರ್ಬಂಧ ಹೇರಿದ್ದಾಗಲೂ ಬಾಲಿವುಡ್ ಮಂದಿಯ ಮೇಲೆ ಸಾಕಷ್ಟು ಮೀಮ್ಸ್ ಹರಿದಾಡಿದ್ದವು. ಜೊತೆಗೆ ಟ್ರೋಲ್‍ ಸಹ ಮಾಡಲಾಗಿತ್ತು. ಇನ್ನು ಕೆಲವು ಬಾಲಿವುಡ್ ಸೆಲೆಬ್ರೆಟಿಗಳು ಟ್ವೀಟ್ ಮಾಡಿ ತಮ್ಮ ಬೇಸರ ಹೊರಹಾಕಿದ್ದರು. ಈಗಲೂ ಸಹ ನೆಟ್ಟಿಗರು ಮತ್ತೆ ಬಾಲಿವುಡ್ ಮಂದಿಯನ್ನು ಕೇಂದ್ರೀಕರಿಸಿ ಸಾಕಷ್ಟು ಟ್ವೀಟ್ ಮಾಡಿದ್ದಾರೆ.

ತೆಂಡೂಲ್ಕರ್ ಎಂಬುವವರು ಆತ್ಮಕ್ಕೆ ಶಾಂತಿ ಸಿಗಲಿ (RIP) @ಇನ್‍ಸ್ಟಾಗ್ರಾಮ್ ಎಂದು ಟ್ವೀಟ್ ಮಾಡಿದ್ದಾರೆ. ದಿಗ್ವಿಜಯ್ ಸಿಂಗ್ ಎಂಬುವವರು ಒಂದು ಸಣ್ಣಮಗು ರಸ್ತೆಯ ಮೇಲೆ ಒದ್ದಾಡುತ್ತಿರುವ ಜಿಫ್ ಫೈಲ್ ಹಾಕಿ ಭಾರತದ ಮಂದಿಯ ಪರಿಸ್ಥಿತಿ ಹೀಗಿದೆ ಎಂಬ ಅಡಿಬರಹ ಬರೆದಿದ್ದಾರೆ. ಈಗಾಗಲೇ ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಹೊರಡುವ ವ್ಯವಸ್ಥೆ ಮಾಡಿಕೊಳ್ಳಿ ಎಂದು ಬರೆದು ಬಾಲಿವುಡ್ ಸೆಲೆಬ್ರೆಟಿಗಳು ಎಂದು ಯೋಶಿತಾ ಬರೆದಿದ್ದಾರೆ. ಇನ್ನೊಬ್ಬ ನೆಟ್ಟಿಗರು, ಮಾಲ್ಡೀವ್ಸ್ ಫ್ಯಾಷನ್ ಸ್ವಾತಂತ್ರ್ಯ ವಿರೋಧಿ ಎಂದಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಮಾಲ್ಡೀವ್ಸ್‍ಗೆ ತೆರಳುವ ಬಾಲಿವುಡ್ ಸೆಲೆಬ್ರೆಟಿಗಳಿಗೆ ದೊಡ್ಡ ಸಮಸ್ಯೆ ಎಂದು ಅಶೋಕ್ ಬಿಸ್ವಾಸ್ ಎಂಬುವರು ಹೇಳಿದ್ದಾರೆ. ಕಾವೇರಿ ಎಂಬುವವರು¸ಇನ್ನು ಸೆಲೆಬ್ರೆಟಿಗಳು ಎಲ್ಲಿಗೆ ಹೊಗುತ್ತಾರೆ ಎಂದು ಪ್ರಶ್ನಿಸಿದ್ದಾರೆ, ಇನ್ನೊಬ್ಬರು ಬಾಲಿವುಡ್ ಮಂದಿ ಇದೀಗ ಏನು ಮಾಡುತ್ತಾರೆ? ಎಂದು ಕೇಳಿದ್ದಾರೆ.

ಮಾಲ್ಡೀವ್ಸ್ ಹಲವು ಸೆಲೆಬ್ರೆಟಿಗಳ ತುಂಬಾ ಇಷ್ಟದ ಸ್ಥಳ. ಅದರಲ್ಲೂ ಬಾಲಿವುಡ್‍ನ ಜಾಹ್ನವಿ ಕಪೂರ್, ಶ್ರದ್ಧಾ ಕಪೂರ್, ದಿಶಾ ಪಟಾಣಿ ಮಾಲ್ಡೀವ್ಸ್‌ನ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದರು. ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಕೂಡ ಮಾಲ್ಡೀವ್ಸ್‌ಗೆ ತೆರಳಿದ್ದರೂ ಆ ಫೋಟೋಗಳನ್ನು ಎಲ್ಲೂ ಶೇರ್ ಮಾಡಿಲ್ಲ.ಮಾಲ್ಡೀವ್ಸ್‌ನ ಸುಂದರ ಕ್ಷಣಗಳನ್ನು ಹಂಚಿಕೊಂಡ ಬಾಲಿವುಡ್ ಮಂದಿಯ ವರ್ತನೆಗೆ ನಟ ನವಾಜುದ್ದೀನ್ ಸಿದ್ದಿಕಿ ಸಂದರ್ಶನದಲ್ಲಿ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಇಡೀ ದೇಶ ಸಂಕಷ್ಟದಲ್ಲಿ ಸಿಲುಕಿದೆ. ಇವರೆಲ್ಲ ತಮ್ಮ ಮೋಜಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿನ ಜನ ಒಂದು ಹೊತ್ತಿನ ತುತ್ತಿಗೂ ಸಂಕಷ್ಟ ಅನುಭವಿಸುತ್ತಿದ್ದಾರೆ. ನೀವು ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡುತ್ತಿದ್ದಾರೆ. ನಿಮಗೆಲ್ಲ ನಾಚಿಕೆಯಾಗಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: ಕೋವಿಡ್​ನಿಂದ ಚೇತರಿಸಿಕೊಂಡ ನಂತರ ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತ ನಟಿ ಕಾವ್ಯಾ ಶಾಸ್ತ್ರಿ

ದಯವಿಟ್ಟು ಎಲ್ಲರೂ ಮಾನವೀಯತೆಯಿಂದ ಬದುಕಿ. ನಿಮ್ಮ ಈ ರಜಾದಿನಗಳನ್ನು ನಿಮ್ಮ ಮಟ್ಟಿಗೆ ಮಾತ್ರ ಮೀಸಲಿರಿಸಿಕೊಳ್ಳಿ. ಎಲ್ಲೆಡೆ ಸಂಕಟವಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ದಯವಿಟ್ಟು ಕೋವಿಡ್‍ನಿಂದ ಬಳಲುತ್ತಿರುವವರಿಗೆ ಅವಮಾನ ಮಾಡಬೇಡಿ ಎಂದು ನವಾಜುದ್ದೀನ್​ ಹೇಳಿದ್ದರು.
Published by: Anitha E
First published: May 13, 2021, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories