ಜನರಿಗೆ ಆಕ್ಸಿಜನ್ ಪೂರೈಸಲು 22 ಲಕ್ಷ ರೂ. ಮೌಲ್ಯದ ಎಸ್‌ಯುವಿ ಕಾರನ್ನೇ ಮಾರಿದ ಮಹಾರಾಷ್ಟ್ರದ ವ್ಯಕ್ತಿ..!

ಆಕ್ಸಿಜನ್ ಮ್ಯಾನ್ ಎಂದೇ ಕರೆಯಲ್ಪಡುವ ಮಲಾದ್ ನಿವಾಸಿಯಾದ ಶಹನವಾಜ್ ಶೇಖ್ ಇವರಿಗೆ ಒಂದು ಕರೆ ಮಾಡಿದರೆ ಸಾಕು ತಕ್ಷಣವೇ ಆಕ್ಸಿಜನ್ ಪೂರೈಸುತ್ತಾರೆ. ಜೊತೆಗೆ ತಮ್ಮದೇ ಆದ ತಂಡ ಮಾಡಿಕೊಂಡು ಕರೆಗಳಿಗೆ ಸ್ಪಂದಿಸುತ್ತಿದ್ದಾರೆ.

ಶಹನವಾಜ್ ಶೇಖ್

ಶಹನವಾಜ್ ಶೇಖ್

  • Share this:
ಕೊರೋನಾ ಎರಡನೇ ಅಲೆ ಈಗಾಗಲೇ ಸಾಕಷ್ಟು ಮಂದಿಯನ್ನು ಬಲಿ ತೆಗೆದುಕೊಂಡಿದ್ದು, ಇದರ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಕೋವಿಡ್ ಸೋಂಕಿತರು ಹೆಚ್ಚಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಔಷಧಿಗಳು, ಬೆಡ್ ವ್ಯವಸ್ಥೆಯನ್ನು ಕಲ್ಪಿಸಲು ಹರಸಾಹಸ ಪಡುವಂತಾಗಿದೆ. ಇದನ್ನರಿತ ಸುಮಾರು ಮಂದಿ ಜನರ ಸಹಾಯಕ್ಕೆ ನಿಂತಿದ್ದಾರೆ. ಇದರಲ್ಲಿ ಮುಂಬೈನ ವ್ಯಕ್ತಿಯೊಬ್ಬರು ವಿಶೇಷ ಎನಿಸುತ್ತಾರೆ. ಏಕೆಂದರೆ ಇವರು ತಮ್ಮ ಸ್ವಂತದ 22 ಲಕ್ಷ ರೂ. ಬೆಲೆಬಾಳುವ ಎಸ್‍ಯುವಿ ಕಾರನ್ನು ಮಾರಾಟ ಮಾಡಿ ಆಕ್ಸಿಜನ್ ಸಿಲಿಂಡರ್‌ ಅನ್ನು ರೋಗಿಗಳಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದ್ದಾರೆ. ಅದಲ್ಲದೇ ಒಂದು ಸಹಾಯವಾಣಿಯನ್ನು ತೆರೆದು ಜನರ ನೆರವಿಗೆ ನಿಂತಿದ್ದಾರೆ.

ಆಕ್ಸಿಜನ್ ಮ್ಯಾನ್ ಎಂದೇ ಕರೆಯಲ್ಪಡುವ ಮಲಾದ್ ನಿವಾಸಿಯಾದ ಶಹನವಾಜ್ ಶೇಖ್ ಇವರಿಗೆ ಒಂದು ಕರೆ ಮಾಡಿದರೆ ಸಾಕು ತಕ್ಷಣವೇ ಆಕ್ಸಿಜನ್ ಪೂರೈಸುತ್ತಾರೆ. ಜೊತೆಗೆ ತಮ್ಮದೇ ಆದ ತಂಡ ಮಾಡಿಕೊಂಡು ಕರೆಗಳಿಗೆ ಸ್ಪಂದಿಸುತ್ತಿದ್ದಾರೆ.

ಕಳೆದ ವರ್ಷದಿಂದ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ 31 ವರ್ಷದ ಶಹನವಾಜ್ ಶೇಖ್ ಅವರು ಕಳೆದ ವರ್ಷ ಸುಮಾರು 250 ಮಂದಿಗೆ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ಒದಗಿಸಿದ್ದರು. ಕಳೆದ ವರ್ಷ ಇವರ ಸ್ನೇಹಿತನ ಹೆಂಡತಿಗೆ ಕೊರೋನಾ ಕಾಣಿಸಿಕೊಂಡಿತ್ತು. ಈ ಸಂಬಂಧ ಐದು ಆಸ್ಪತ್ರೆ ಸುತ್ತಿದರೂ ಆಕ್ಸಿಜನ್ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದರು. ಆರನೇ ಆಸ್ಪತ್ರೆಗೆ ತೆರಳಿದ ವೇಳೆ ಆಕ್ಸಿಜನ್ ಸರಿಯಾದ ಸಮಯಕ್ಕೆ ಸಿಗದ ಕಾರಣಕ್ಕೆ ಸಾವನ್ನಪ್ಪಿದ್ದರು. ಇದರಿಂದ ನೊಂದ ಶಹನವಾಜ್ ತಮ್ಮ ಫೋರ್ಡ್ ಎಂಡೋವರ್ ಕಾರನ್ನು ಮಾರಾಟ ಮಾಡಿ ನನ್ನ ಸ್ನೇಹಿತನ ಹೆಂಡತಿಗೆ ಬಂದ ಸ್ಥಿತಿ ಯಾರಿಗೂ ಬಾರದೆಂಬ ಕಾರಣಕ್ಕೆ ಸ್ವತಃ ಅವರೇ ಜನಸೇವೆಗೆ ನಿಂತಿದ್ದಾರೆ.

ಮೂರು ತಿಂಗಳ ಹಿಂದೆ ಆಕ್ಸಿಜನ್ ಪೂರೈಸುವಂತೆ ಪ್ರತಿದಿನ 50 ಕರೆಗಳು ಬರುತ್ತಿದ್ದವು. ಇದೀಗ 500-600 ಕರೆಗಳು ಬರುತ್ತಿವೆ. ಇದುವರೆಗೆ 4000 ಸಾವಿರ ಮಂದಿಗೆ ಆಕ್ಸಿಜನ್ ಪೂರೈಸಿದ್ದೇವೆ ಎಂದು ಆಕ್ಸಿಜನ್ ಅವಶ್ಯಕತೆ ಸ್ಥಿತಿಯನ್ನು ವಿವರಿಸಿದ್ದು ಹೀಗೆ..

ನಿಮಗೆ ಈ ಕಾರು ಮಾರಾಟ ಮಾಡುವ ನೋವು ಆಗಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಶೇಖ್, ಖಂಡಿತ ಬೇಸರವಾಗಲಿಲ್ಲ. ಪರರ ಜೀವ ಉಳಿಸುವ ಸಲುವಾಗಿ ಮಾರಾಟ ಮಾಡಲು ನಿರ್ಧರಿಸಿದ್ದೆ. ಜೀವಕ್ಕಿಂತ ವಸ್ತು ದೊಡ್ಡದಲ್ಲ ಎಂದೆನಿಸಿತು. ದೇವರು ನನಗೆ ಒಂದು ಒಳ್ಳೆಯ ಕುಟುಂಬ ದಯಪಾಲಿಸಿದ್ದಾನೆ. ಮುಂದಿನ ದಿನಗಳಲ್ಲಿ ಇಂತಹ ನಾಲ್ಕು ಕಾರುಗಳನ್ನು ಖರೀದಿಸುವ ಶಕ್ತಿ ನನ್ನಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇವರೊಟ್ಟಿಗೆ ಪಾಟ್ನಾದ ಗೌರವ್ ರೈ ಎಂಬುವವರು ಕೂಡ ಸುಮಾರು 950 ಮಂದಿ ಆಕ್ಸಿಜನ್ ಒದಗಿಸುವುದರ ಮೂಲಕ ಜನರ ಜೀವ ಉಳಿಸಿ ಸಾರ್ಥಕತೆ ಮೆರೆದಿದ್ದಾರೆ. ಇವರು ತಮ್ಮದೇ ಆದ ಸಣ್ಣ ವ್ಯಾಗನ್‌ ಆರ್ ಕಾರಿನಲ್ಲಿ ಆಮ್ಲಜನಕ ಕೊಂಡೊಯ್ಯುವ ರೈ ಬೆಳಗ್ಗೆ 5 ಗಂಟೆಯಿಂದಲೇ ತಮ್ಮ ಕೆಲಸ ಪ್ರಾರಂಭಿಸುತ್ತಾರೆ. ಮಧ್ಯರಾತ್ರಿಯವರೆಗೆ ಕೆಲಸ ಮಾಡುವ ಇರುವ ಲಾಕ್‍ಡೌನ್ ಸಮಯದಲ್ಲೂ ಆಕ್ಸಿಜನ್ ಪೂರೈಕೆ ನಿಲ್ಲಿಸಿಲ್ಲ. ತಮ್ಮ ಈ ಕಾರ್ಯಕ್ಕೆ ಒಂದು ರೂಪಾಯಿಯನ್ನು ಪಡೆಯದ ಗೌರವ್ ರೈ ಕಳೆದ ವರ್ಷದಿಂದ ಒಂದು ದಿನವೂ ರಜೆ ಪಡೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ.
First published: