ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಗೌರವಯುತ ಅಂತ್ಯಸಂಸ್ಕಾರಕ್ಕೆ ಸಂಸದ ಡಿ.ಕೆ. ಸುರೇಶ್ ಒತ್ತಾಯ

ಈ ವಿಚಾರದಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಅನಗತ್ಯ ಭಯ ಹಾಗೂ ಅನುಮಾನಗಳನ್ನು ತೊಡೆದು ಹಾಕಲು ಸಮಾಜಮುಖಿ ಚಿಂತನೆಯುಳ್ಳವರು, ವಿಚಾರವಂತರು ಹಾಗೂ ಬುದ್ಧಿಜೀವಿಗಳು  ಕೈಜೋಡಿಸಬೇಕೆಂದು ಸಂಸದ ಡಿಕೆ ಸುರೇಶ್  ಮನವಿ ಮಾಡಿಕೊಂಡಿದ್ದಾರೆ.

ಸಂಸದ ಡಿ.ಕೆ. ಸುರೇಶ್.

ಸಂಸದ ಡಿ.ಕೆ. ಸುರೇಶ್.

  • Share this:
ಬೆಂಗಳೂರು; ಕೋವಿಡ್-19 ಸೋಂಕಿನಿಂದ ನಿಧನರಾದವರ ಅಂತಿಮ ಸಂಸ್ಕಾರ ವಿಚಾರದಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಭಯ ಮತ್ತು ಗೊಂದಲಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಈವರೆಗೂ ಕಾರ್ಯೋನ್ಮುಖರಾಗದಿರುವುದು ವಿಷಾದದ ಸಂಗತಿ ಎಂದು ಡಿಕೆ ಸುರೇಶ್ ಅಸಮಾಧಾನ ಹೊರಹಾಕಿದ್ದಾರೆ. 

ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರದ  ವಿಚಾರವಾಗಿ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಎಲ್ಲಾ ನಾಗರಿಕ ಬಂಧುಗಳಲ್ಲಿ ನಾನು ಮನವಿ ಮಾಡಿಕೊಳ್ಳುವುದೇನೆಂದರೆ, ಕೊರೋನಾ ಸೋಂಕಿನಿಂದ  ಮರಣ ಹೊಂದಿದ ವ್ಯಕ್ತಿಗಳಿಂದ ಸಮಾಜಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಈ ವಿಚಾರದಲ್ಲಿ ಬರೀ ಊಹಾಪೋಹಗಳನ್ನು ಹಬ್ಬಿಸಲಾಗಿದೆ. ಹೀಗಾಗಿ ಶವ ಸಂಸ್ಕಾರಕ್ಕೆ ಪ್ರತಿರೋಧ ಒಡ್ಡುವುದಾಗಲಿ, ಅಡ್ಡಿಪಡಿಸುವುದಾಗಲಿ ನಮ್ಮ ಸಂಸ್ಕೃತಿಯೂ ಅಲ್ಲ, ಸದಾಚಾರವೂ ಅಲ್ಲ. ಆದ್ದರಿಂದ ಆಯಾ ಪ್ರದೇಶಗಳಲ್ಲಿ ಕೋವಿಡ್​ನಿಂದ ಮರಣ ಹೊಂದಿದದವರ ಗೌರವಯುತ ಅಂತಿಮ ಸಂಸ್ಕಾರ ನೆರವೇರಲು ಅವಕಾಶ  ಮಾಡಿಕೊಡಬೇಕು. ಆ ಮೂಲಕ ಮಾನವೀಯತೆ ಮತ್ತು ಸೌಹಾರ್ದತೆ ಮೆರೆಯಬೇಕೆಂದು ವಿನಯಪೂರ್ವಕವಾಗಿ ಮನವಿ ಮಾಡಿಕೊಂಡಿದ್ದಾರೆ.

ಈ ವಿಚಾರದಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಅನಗತ್ಯ ಭಯ ಹಾಗೂ ಅನುಮಾನಗಳನ್ನು ತೊಡೆದು ಹಾಕಲು ಸಮಾಜಮುಖಿ ಚಿಂತನೆಯುಳ್ಳವರು, ವಿಚಾರವಂತರು ಹಾಗೂ ಬುದ್ಧಿಜೀವಿಗಳು  ಕೈಜೋಡಿಸಬೇಕೆಂದು ಸಂಸದ ಡಿಕೆ ಸುರೇಶ್  ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಮಂಡ್ಯದ ಬಸರಾಳು ಗ್ರಾಪಂ ವ್ಯಾಪ್ತಿಯಲ್ಲಿ ನೊಣಗಳ ಹಾವಳಿ; ಹೈರಾಣಾದ ನಾಲ್ಕೈದು ಹಳ್ಳಿಯ ಜನರು!

ರಾಜ್ಯದಲ್ಲಿ ಇಂದು 3693 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 2208 ಪ್ರಕರಣಗಳು ವರದಿಯಾಗಿವೆ. ಕೊರೋನಾಗೆ ಇಂದು 115 ಮಂದಿ ಬಲಿಯಾಗಿದ್ದು, ಇದರಲ್ಲಿ ಬೆಂಗಳೂರಿನಲ್ಲೇ 75 ಮಂದಿ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1028 ಮಂದಿ ಗುಣಮುಖರಾಗಿ ಡಿಜ್ಚಾರ್ಜ್ ಆಗಿದ್ದು, ಐಸಿಯುನಲ್ಲಿ 562 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
Published by:HR Ramesh
First published: