ಕೊರೋನಾ ಕಾಲಘಟ್ಟದಲ್ಲಿ ಮಹೀಂದ್ರಾ ಕಂಪನಿ ಕೋವಿಡ್ 19 ಇನ್ಶುರೆನ್ಸ್ ಪ್ಲಾನ್ ಅನ್ನು ನೀಡಿದೆ. ಆ ಮೂಲಕ ಗ್ರಾಹಕರ ಕುಟುಂಬಕ್ಕೆ ಆಸರೆಯಾಗಿದೆ.
ಕೊರೋನಾ ಸಮಯದಲ್ಲಿ ಹಣದ ಅಭಾವ ಹೆಚ್ಚಾಗಿದೆ. ಹೀಗಾಗಿ ಹಲವಾರು ಕಂಪನಿಗಳು ಇನ್ಶುರೆನ್ಸ್ ಪ್ಲಾನ್ಗಳನ್ನು ನೀಡುತ್ತಾ ಬಂದಿದೆ. ಇದೀಗ ಮಹೀಂದ್ರಾ ಸಂಸ್ಥೆ ಬುಲೆರೋ ಪಿಕ್-ಅಪ್ ವಾಹನದ ಮಾಲೀಕರಿಗೆ 1 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ನೀಡುತ್ತಿದೆ. ಅದರ ಜೊತೆಗೆ ಕುಟುಂಬ ಸದಸ್ಯರಿಗೆ (ಇಬ್ಬರು ಮಕ್ಕಳಿಗೆ) ಈ ಸೇವೆಯನ್ನು ಒದಗಿಸುತ್ತಿದೆ.
ಮಹೀಂದ್ರಾ ತನ್ನ ಬುಲೆಲೋ ಪಿಕ್-ಅಪ್ ಮೇಲೆ ನೀಡಿರುವ ಇನ್ಶುರೆನ್ಸ್ ಪ್ಲಾನ್ ಅಕ್ಟೋಬರ್ 1 ರಿಂದ ಪ್ರಾರಂಭವಾಗಿ ನವೆಂಬರ್ 30ರ ವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ಕಂಪನಿ ತಿಳಿಸಿದೆ.
ಕೊರೋನಾ ಸಮಯದಲ್ಲಿ ಚಾಲಕರು ಎದೆಗುಂದದೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಮನಗಂಡ ಮಹೀಂದ್ರಾ ಸಂಸ್ಥೆ ಬುಲೆರೋ ಪಿಕ್-ಅಪ್ ವಾಹನದ ಮೇಲೆ ಇನ್ಶುರೆನ್ಸ್ ನೀಡುತ್ತಿದೆ. ಸಂಕಷ್ಟದಲ್ಲಿ ಕಾಲದಲ್ಲಿ ನೆರವಾಗಲಿ ಎಂದು ಈ ಸೇವೆಯನ್ನು ತಂದಿದೆ.
![Mahindra Bolero pick-up customers will get free COVID-19 insurance plan]()
ಮಹೀಂದ್ರಾ ಬುಲೆರೋ ಪಿಕ್-ಅಪ್
ಮಹೀಂದ್ರಾ ಕಂಪನಿ ಇನ್ಶುರೆನ್ಸ್ ಪ್ಲಾನ್ಗಾಗಿ ಒರಿಯಂಟಲ್ ಇನ್ಶುರೆನ್ಸ್ ಕಂಪನಿ ಜೊತೆ ಕೈಜೋಡಿಸಿದೆ. ಪಿಕ್-ಅಪ್ ವಾಹನ ಚಾಲಕಮ ಫ್ಯಾಮಿಲಿಗೆ ಕೊರೋನಾ ಸೋಂಕು ತಗುಲಿದರೆ. ಈ ಆರೋಗ್ಯ ವಿಮೆ ಮೂಲಕ ಆಸ್ಪತ್ರೆಯ ಖರ್ಚು ಭರಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ