ನಟ ಕೃಷ್ಣ ಟಾಲಿವುಡ್ನಲ್ಲಿ ಸೂಪರ್ ಸ್ಟಾರ್ ಎಂದೇ ಖ್ಯಾತರಾದವರು. ಅಮ್ಮ ದೊಂಗ, ಅಗ್ನಿ ಪರ್ವತಂ, ಸಿಂಹಾಸನಂಗಳಂತ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕೃಷ್ಣ ಅವರು ನಿನ್ನೆಯಷ್ಟೆ ಅವರು ತಮ್ಮ78ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಿರಿಯ ನಟನ ಹುಟ್ಟುಹಬ್ಬಕ್ಕೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ವಿಶ್ ಮಾಡಿದ್ದಾರೆ. ಅಂತೆಯೇ ಮಗ ಮಹೇಶ್ ಬಾಬು ಸಹ ಅಪ್ಪನ ಹುಟ್ಟುಹಬ್ಬಕ್ಕೆ ಪ್ರತಿ ವರ್ಷದಂತೆ ವಿಶ್ ಮಾಡಿದ್ದಾರೆ. ಇನ್ನು ಅಪ್ಪನ ಹುಟ್ಟುಹಬ್ಬದಂದು ಒಂದೊಳ್ಳೆ ಕೆಲಸ ಸಹ ಮಾಡಿದ್ದಾರೆ ಮಹೇಶ್ ಬಾಬು.
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರು ತಮ್ಮ 78ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಪ್ಪನ ಹುಟ್ಟುಹಬ್ಬದಂದು ನಟ ಮಹೇಶ್ ಬಾಬು ಅವರು ಹಳ್ಳಿಯೊಂದರದಲ್ಲಿ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ ಆಯೋಜಿಸಿದ್ದರು. ಆಂಧ್ರ ಹಾಸ್ಪಿಟಲ್ಸ್ ಸಹಯೋಗದೊಂದಿಗೆ ಮಹೇಶ್ ಬಾಬು ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಆಯೋಜಿಸಿದ್ದರು.
View this post on Instagram
ಇದನ್ನೂ ಓದಿ: ಪ್ರಣೀತಾ ವಿವಾಹವಾದ ಬೆನ್ನಲ್ಲೇ ಮತ್ತೆ ಚರ್ಚೆಯಾಗುತ್ತಿದೆ ಮೋಹಕ ತಾರೆ ರಮ್ಯಾ ಮದುವೆ ಸುದ್ದಿ..!
ಇನ್ನು ಅಪ್ಪನ ಹುಟ್ಟುಹಬ್ಬದಂದು ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡಿದದಾರೆ. ಅಪ್ಪನಿಗೆ ವಿಶ್ ಮಾಡಿದ್ದು ಅಪ್ಪನ ಜತೆಗಿನ ಫೋಟೋ ಸಹ ಹಂಚಿಕೊಂಡಿದ್ದಾರೆ. ನನಗೆ ಉತ್ತಮವಾದ ದಾರಿಯಲ್ಲಿ ನಡೆಯುವಂತೆ ಮಾಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ ಪ್ರಿನ್ಸ್.
View this post on Instagram
ಇದನ್ನೂ ಓದಿ: Manoranjan Ravichandran: ಮುದ್ದಿನ ಸಾಕು ನಾಯಿಯ ಹುಟ್ಟುಹಬ್ಬ ಆಚರಿಸಿದ ಮನೋರಂಜನ್ ರವಿಚಂದ್ರನ್..!
ಕಳೆದ ಸಲದಂತೆ ಈ ವರ್ಷವೂ ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಏನಾದರೂ ಸರ್ಪ್ರೈಸ್ ಕೊಡಲಿದ್ದಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಮಹೇಶ್ ಬಾಬು ಈ ವರ್ಷ ಸಿನಿಮಾ ಕುರಿತಾದ ಯಾವುದೇ ಪ್ರಕಟಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಸದ್ಯಕ್ಕೆ ಇರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿನಿಮಾ ಬಗ್ಗೆ ಅಪ್ಡೇಟ್ ಕೊಡುವುದು ಸರಿಯಲ್ಲ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಿನಿಮಾ ಕುರಿತಾದ ಮಾಹಿತಿಯನ್ನು ತಮ್ಮ ಅಧಿಕೃತ ಖಾತೆಯಲ್ಲೇ ಸಮಯ ಬಂದಾಗ ಪ್ರಕಟಿಸುವುದಾಗಿಯೂ ತಿಳಿಸಿದ್ದಾರೆ. ಸರ್ಕಾರು ವಾರಿ ಪಾಟ ಸಿನಿಮಾ ಹೊರತಾಗಿ ನಿರ್ದೇಶಕ ತ್ರಿವಿಕಂ ಅವರೊಂದಿಗೆ ಮಹೇಶ್ ಬಾಬು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಹಿಂದೆ ತ್ರಿವಿಕ್ರಂ ಅವರೊಂದಿಗೆ ಮಹೇಶ್ ಬಾಬು ಅತಡು ಹಾಗೂ ಖಲೇಜಾ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ