ಮಹಾರಾಷ್ಟ್ರದಲ್ಲಿ ಭಾನುವಾರದಿಂದ ರಾತ್ರಿ ಕರ್ಫ್ಯೂ ಜಾರಿ; ರಾತ್ರಿ 8ರಿಂದ ಬೆಳಗ್ಗೆ 7ರವರೆಗೆ ಚಟುವಟಿಕೆಗಳು ಸ್ಥಗಿತ

ಕಾರ್ಯಪಡೆಯು ಪ್ರಮುಖವಾಗಿ ‘ಮೂರು ಟಿ’ಗಳು ಮತ್ತು‘ ಒಂದು ಐ’ ಬಗ್ಗೆ ಸಲಹೆ ನೀಡಿದೆ. ಪತ್ತೆ ಹಚ್ಚುವಿಕೆ, ಪರೀಕ್ಷೆ, ಚಿಕಿತ್ಸೆ (test, trace treat) ಮತ್ತು ಪ್ರತ್ಯೇಕಿಸಿ ಇರಿಸುವುದು. (isolate). ಯುವಕರನ್ನು ಮನೆಯಲ್ಲಿ ಐಸೋಲೆಟ್​ ಮಾಡುವುದು ಕಷ್ಟಕರವಾದ ಕಾರಣ, ಅವರನ್ನು ಸಾಂಸ್ಥಿಕ ಐಸೋಲೆಷನ್​ನಲ್ಲಿ ಇರಿಸಬೇಕು ಅಥವಾ   ಹೋಂ ಕ್ವಾರಂಟೈನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮುಂಬೈ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಮಾರಕ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಭಾನುವಾರದಿಂದ (ಮಾರ್ಚ್ 28) ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ವಿಧಿಸಿದೆ. ಮುಂದಿನ ಆದೇಶದವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಕೋವಿಡ್-19 ಹರಡುವಿಕೆ ತಡೆಯುವ ಸಲುವಾಗಿ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಲ್ಲದೆ, ಆಯ್ದ ಪ್ರದೇಶಗಳಲ್ಲಿ ಸಂಭವನೀಯ ಲಾಕ್​ಡೌನ್ ಅನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.

  ರಾತ್ರಿ ಕರ್ಫ್ಯೂಗೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರಕಾರ, ಮಹಾರಾಷ್ಟ್ರ ರಾಜ್ಯವ್ಯಾಪಿ ರಾತ್ರಿ 8ರಿಂದ ಬೆಳಗ್ಗೆ 7ರವರೆಗೆ ಎಲ್ಲಾ ಮಾಲ್​ಗಳು ಮುಚ್ಚಲ್ಪಡುತ್ತವೆ.

  ಕೊರೋನಾ ವೈರಸ್​ನಿಂದ ಎದುರಾಗುವುದು ಅಪಾಯ ಇನ್ನೂ ಮುಗಿದಿಲ್ಲ. ಇದಕ್ಕೆ ಬದಲಾಗಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಲಾಕ್​ಡೌನ್ ವಿಧಿಸಬಹುದು. ಆದರೆ, ಅವರು ಮೊದಲೇ ಜನರಿಗೆ ಸಾಕಷ್ಟು ಸಮಯವನ್ನು ನೀಡಬೇಕಾಗುತ್ತದೆ ಎಂದಿದ್ದಾರೆ.

  ಹೆಚ್ಚುತ್ತಿರುವ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ. ಲಾಕ್​ಡೌನ್ ಹೇರಲು ನಾನು ಬಯಸುವುದಿಲ್ಲ. ಆದಾಗ್ಯೂ, ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯಗಳು ಕಡಿಮೆಯಾಗಬಹುದು ಎಂದು ಎಚ್ಚರಿಸಿರುವ ಅವರು, ಎಲ್ಲಾ ಜಿಲ್ಲೆಗಳಲ್ಲಿ ತಮ್ಮ ಆರೋಗ್ಯ ಮೂಲ ಸೌಕರ್ಯ ಮತ್ತು ಹಾಸಿಗೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

  ಸಾಂಕ್ರಾಮಿಕ ರೋಗದ ವಿರುದ್ಧದ ಕಾರ್ಯಾಚರಣೆಗೆ ಸ್ಥಾಪಿಸಲಾದ ಮಹಾರಾಷ್ಟ್ರ ಕಾರ್ಯಪಡೆ ಸರ್ಕಾರಕ್ಕೆ ಹಲವಾರು ಶಿಫಾರಸುಗಳನ್ನು ಮಾಡಿದೆ. 

  ಕಾರ್ಯಪಡೆ ನೀಡಿರುವ ಶಿಫಾರಸ್ಸುಗಳು

  ಕೊರೋನಾ ಎರಡನೇ ಅಲೆ ಮತ್ತು ಹೊಸ ರೂಪಾಂತರಿ ವೈರಸ್​ನ ಒತ್ತಡವಿದೆ ಎಂದು ಕಾರ್ಯಪಡೆ ಹೇಳಿದೆ. ಅದು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ರೋಗನಿರೋಧಕದಿಂದ ಪಾರಾಗುವುದು ಕಷ್ಟವಿದೆ. ಇದು ಕೂಡ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಒಂದು ಕಾರಣವಾಗಿದೆ.

  ಕಾರ್ಯಪಡೆ ಎರಡು ಅಂಶಗಳನ್ನು ಆಧರಿಸಿ ಶಿಫಾರಸುಗಳನ್ನು ಕಳುಹಿಸಿದೆ: 1) ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ಮತ್ತು 2) ವ್ಯಾಕ್ಸಿನೇಷನ್ ಅನ್ನು ಹೆಚ್ಚಿಸುವುದು.

  ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಕಾನೂನಿನಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕಾರ್ಯಪಡೆ ಸೂಚಿಸಿದೆ.

  ಕಾರ್ಯಪಡೆಯು ಪ್ರಮುಖವಾಗಿ ‘ಮೂರು ಟಿ’ಗಳು ಮತ್ತು‘ ಒಂದು ಐ’ ಬಗ್ಗೆ ಸಲಹೆ ನೀಡಿದೆ. ಪತ್ತೆ ಹಚ್ಚುವಿಕೆ, ಪರೀಕ್ಷೆ, ಚಿಕಿತ್ಸೆ (test, trace treat) ಮತ್ತು ಪ್ರತ್ಯೇಕಿಸಿ ಇರಿಸುವುದು. (isolate). ಯುವಕರನ್ನು ಮನೆಯಲ್ಲಿ ಐಸೋಲೆಟ್​ ಮಾಡುವುದು ಕಷ್ಟಕರವಾದ ಕಾರಣ, ಅವರನ್ನು ಸಾಂಸ್ಥಿಕ ಐಸೋಲೆಷನ್​ನಲ್ಲಿ ಇರಿಸಬೇಕು ಅಥವಾ   ಹೋಂ ಕ್ವಾರಂಟೈನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ.

  ಇದನ್ನು ಓದಿ: ಈಜಿಪ್ಟ್​ನಲ್ಲಿ ಮುಖಾಮುಖಿ ಡಿಕ್ಕಿಯಾದ ರೈಲುಗಳು; 32 ಪ್ರಯಾಣಿಕರು ಬಲಿ, 66 ಮಂದಿಗೆ ಗಾಯ

  - ಕೆಲಸವಿಲ್ಲದಿದ್ದರೆ ಹೊರಗೆ ಹೋಗುವುದನ್ನು ತಪ್ಪಿಸಿ. ರಸ್ತೆ ಮೂಲೆಗಳಲ್ಲಿ ಜನರು ಚಿಟ್-ಚಾಟ್ ಮಾಡುವುದು, ಬೆಳಿಗ್ಗೆ ಮತ್ತು ಸಂಜೆ ವಾಕ್​ ಮಾಡುವುದು ಸೇರಿದಂತೆ ಮುಂತಾದ ಚಟುವಟಿಕೆಗಳನ್ನು ನಿಲ್ಲಿಸಬೇಕಿದೆ.

  - ಕಚೇರಿಯ ವಾಸ್ತವ ಬಳಕೆ. ಪ್ರಸ್ತುತ ಕಚೇರಿ ಸ್ಥಳಗಳನ್ನು ಶೇ. 50 ರಷ್ಟು ಮುಚ್ಚಲಾಗಿದೆ ಆದರೆ ಉಳಿದ ಶೇ. 50  ಮನೆಯಿಂದಲೂ ಕೆಲಸ ಮಾಡಲು ಸಾಧ್ಯವಾದರೆ, ಅವರು ಹಾಗೆ ಮಾಡಬೇಕು. ಒಬ್ಬ ವ್ಯಕ್ತಿಯು ರೋಗ ಲಕ್ಷಣಗಳನ್ನು ಹೊಂದಿದ್ದರೆ, ಅವರು ಅದನ್ನು ನಿರ್ಲಕ್ಷಿಸಬಾರದು, ಆದರೆ ಪರೀಕ್ಷೆಗೆ ಒಳಗಾಗಬೇಕು.
  Published by:HR Ramesh
  First published: